For Quick Alerts
ALLOW NOTIFICATIONS  
For Daily Alerts
 

2023ರ ಏಕದಿನ ವಿಶ್ವಕಪ್‌ನಲ್ಲಿ ಇದು 'ಸೋಲಿಸುವ ತಂಡ'ವೆಂದು ಕರೆದ ರಿಕಿ ಪಾಂಟಿಂಗ್

ಅಕ್ಟೋಬರ್ 5ರಿಂದ ಭಾರತದಲ್ಲಿ ಆರಂಭಗೊಂಡಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯು ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಕೆಲವು ಅಚ್ಚರಿಯ ಫಲಿತಾಂಶ ಕಾಣುವಂತಾಗಿದ್ದು, ಅಫ್ಘಾನಿಸ್ತಾನ ತಂಡವು ಇಂಗ್ಲೆಂಡ್ ತಂಡವನ್ನು ಸೋಲಿಸಿರುವುದೇ ಇದಕ್ಕೆ ಉದಾಹರಣೆಯಾಗಿದೆ.

ಇನ್ನು ರೋಹಿತ್ ಶರ್ಮಾ ನಾಯಕತ್ವದ ಆತಿಥೇಯ ಟೀಮ್ ಇಂಡಿಯಾ ಪ್ರಸ್ತುತ ಆಡಿರುವ ಮೂರು ಪಂದ್ಯಗಳಲ್ಲಿ ಮೂರು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.

ಭಾರತ ತಂಡವು ತಮ್ಮ 2023ರ ಐಸಿಸಿ ವಿಶ್ವಕಪ್ ಪ್ರಯಾಣವನ್ನು ಅತ್ಯುತ್ತಮ ರೀತಿಯಲ್ಲಿ ಪ್ರಾರಂಭಿಸಿದೆ. ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನದಂತಹ ಅಸಾಧಾರಣ ತಂಡಗಳ ವಿರುದ್ಧ ಸುಲಭ ಗೆಲುವುಗಳನ್ನು ದಾಖಲಿಸಿದೆ.

icc-world-cup-2023


1983 ಮತ್ತು 2011ರಲ್ಲಿ ಐಸಿಸಿ ಟ್ರೋಫಿ ಗೆಲುವು ಸಾಧಿಸಿದ ನಂತರ, ತಮ್ಮ ಮೂರನೇ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿಯುವ ಆಕಾಂಕ್ಷೆಯೊಂದಿಗೆ, ಭಾರತ ತಂಡ ಅಗಾಧ ಭರವಸೆಯನ್ನು ಮೂಡಿಸಿದೆ.

"ಭಾರತ ಸೋಲಿಸುವ ತಂಡವಾಗಲಿದೆ ಎಂದು ಭಾವಿಸುತ್ತೇನೆ ಎಂದು ನಾನು ಆರಂಭದಿಂದಲೂ ಹೇಳಿದ್ದೆ. ಭಾರತ ಅತ್ಯಂತ ಪ್ರತಿಭಾವಂತ ತಂಡವನ್ನು ಹೊಂದಿದೆ. ಅವರು ತಮ್ಮ ವೇಗದ ಬೌಲಿಂಗ್, ಅವರ ಸ್ಪಿನ್ ಮತ್ತು ಅವರ ಅಗ್ರ ಕ್ರಮಾಂಕ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಿಂದ ಎಲ್ಲಾ ಬೇಸ್‌ಗಳನ್ನು ಆವರಿಸಿದ್ದಾರೆ," ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಐಸಿಸಿಗೆ ತಿಳಿಸಿದರು.

""ಭಾರತೀಯ ತಂಡ ಸೋಲಿಸಲು ತುಂಬಾ ಕಷ್ಟಪಡುತ್ತಾರೆ. ಆದರೆ ಅವರು ಒತ್ತಡದ ಸಂದರ್ಭದಲ್ಲಿ ಹೇಗೆ ಎದುರಿಸುತ್ತಾರೆ ಎಂಬುದನ್ನು ನಾವು ನೋಡುತ್ತೇವೆ,'' ಎಂದು ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಹೇಳಿದರು.

ಅಹಮದಾಬಾದ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧದ ರೋಚಕ ಮುಖಾಮುಖಿಯಲ್ಲಿ ಭಾರತವು ಇನ್ನೂ 117 ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳ ಅಂತರದ ರೋಮಾಂಚಕ ಗೆಲುವು ಸಾಧಿಸಿತು.

ಪಾಕಿಸ್ತಾನ ತನ್ನ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 155 ರನ್ ಗಳಿಸಿ ಸ್ಥಿರವಾಗಿದ್ದ ನಂತರ, 191 ರನ್‌ಗಳಿಗೆ ಸರ್ವಪತನವಾಯಿತು. ಕೇವಲ 36 ರನ್‌ಗಳಿಗೆ ನಂತರದ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿತು.

ಆ ಬಳಿಕ ಭಾರತ ತಂಡದ ಪರ ರೋಹಿತ್ ಶರ್ಮಾ ಆಕರ್ಷಕ 86 ರನ್ ಗಳಿಸಿ ಗೆಲುವಿಗೆ ಕಾರಣವಾದರು. ಇನ್ನು ಭಾರತದ ಬೌಲಿಂಗ್ ದಾಳಿಯು ಅಷ್ಟೇ ಅತ್ಯುತ್ತಮವಾಗಿತ್ತು. ಐವರು ಭಾರತೀಯ ಬೌಲರ್‌ಗಳು ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್ ಮತ್ತು ಬಾಬರ್ ಅಜಂ ಅವರನ್ನು ಔಟ್ ಮಾಡಿದ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ದಾಳಿ ಪಾಕಿಸ್ತಾನ ತಂಡದ ರನ್ ನಿಯಂತ್ರಣಕ್ಕೆ ಕಾರಣವಾಯಿತು.

icc-world-cup-2023


"ರೋಹಿತ್ ಶರ್ಮಾ ಆಡುವ ರೀತಿಯಿಂದಲೂ ನೀವು ಅದನ್ನು ನೋಡಬಹುದು. ಅವರು ಸಾಕಷ್ಟು ಲಕೋನಿಕ್ ರೀತಿಯ ಬ್ಯಾಟ್ಸ್‌ಮನ್ ಆಗಿದ್ದಾರೆ ಮತ್ತು ಮೈದಾನದ ಒಳಗೆ ಮತ್ತು ಹೊರಗೆ ಅವರು ಇರುವ ರೀತಿ ಇದು," ಎಂದರು.

"ಒಂದು ಹಂತದಲ್ಲಿ ಒತ್ತಡವು ನಮಗೆ ಬರುವುದಿಲ್ಲ ಅಥವಾ ಅದು ತಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಾವು ಕುಳಿತುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅದು ಪಂದ್ಯಾವಳಿಯ ಅಗಾಧತೆಯಿಂದ ಕೂಡಿರುತ್ತದೆ. ಆದರೆ ರೋಹಿತ್ ಶರ್ಮಾ ಅಥವಾ ಬಹುಶಃ ತಂಡದ ಯಾರೇ ಆಗಲಿ ಅದನ್ನು ತೆಗೆದುಕೊಳ್ಳುತ್ತಾರೆ ಮತ್ತು ಅದನ್ನು ನಿಭಾಯಿಸುತ್ತಾರೆ," ಎಂದು ರಿಕಿ ಪಾಂಟಿಂಗ್ ಅವರು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬಗ್ಗೆ ಹೇಳಿದರು.

ಡಿಸೆಂಬರ್ 2021ರಿಂದ ಎರಡೂ ವೈಟ್-ಬಾಲ್ ಫಾರ್ಮ್ಯಾಟ್‌ಗಳಲ್ಲಿ ವಿರಾಟ್ ಕೊಹ್ಲಿಯಿಂದ ಹಿಡಿತ ಸಾಧಿಸಿದ ನಂತರ, ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಆಟದ ಎಲ್ಲಾ ಸ್ವರೂಪಗಳಲ್ಲಿ ರೋಹಿತ್ ಶರ್ಮಾ ಭಾರತಕ್ಕೆ ಆದರ್ಶ ನಾಯಕ ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

"ವಿರಾಟ್‌ ಕೊಹ್ಲಿಯಂತಹವರು ಸ್ವಲ್ಪ ಹೆಚ್ಚು ಹೃದಯವಂತರು ಮತ್ತು ಬಹುಶಃ ಅಭಿಮಾನಿಗಳ ಮಾತುಗಳನ್ನು ಕೇಳುತ್ತಾರೆ. ಅಭಿಮಾನಿಗಳೊಂದಿಗೆ ಸ್ವಲ್ಪ ಹೆಚ್ಚು ಆಡುತ್ತಾರೆ, ಅವರ ವ್ಯಕ್ತಿತ್ವ ಹೊಂದಿರುವ ಯಾರಾದರೂ ಅದನ್ನು ಸ್ವಲ್ಪ ಕಷ್ಟಪಡುತ್ತಾರೆ," ಎಂದು ರಿಕಿ ಪಾಂಟಿಂಗ್ ತಿಳಿಸಿದರು.

"ರೋಹಿತ್ ಶರ್ಮಾ ಅದರೊಂದಿಗೆ ಚೆನ್ನಾಗಿರುತ್ತಾನೆ ಎಂದು ನಾನು ಭಾವಿಸುತ್ತೇನೆ. ಆತ ಅದ್ಭುತ ಆಟಗಾರ ಮತ್ತು ದೀರ್ಘಕಾಲದವರೆಗೆ ಶ್ರೇಷ್ಠ ಆಟಗಾರನಾಗಿರುತ್ತಾರೆ. ಅವರು ಭಾರತದ ನಾಯಕರಾಗಿ ಉತ್ತಮ ಕೆಲಸ ಮಾಡಿದ್ದಾರೆ," ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದರು.

2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಭಾರತದ ನಾಲ್ಕನೇ ಪಂದ್ಯ ಗುರುವಾರ, ಅಕ್ಟೋಬರ್ 19ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿದೆ.

Story first published: Tuesday, October 17, 2023, 14:52 [IST]
Other articles published on Oct 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+