For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ನಿಂದ ಶುಭ್ಮನ್ ಗಿಲ್ ಔಟ್? ಈ ಮೂವರಲ್ಲಿ ಒಬ್ಬರು ಬಹುತೇಕ ಫೈನಲ್

By ನಾಗೇಶ್

ಟೀಮ್ ಇಂಡಿಯಾ ತವರಿನಲ್ಲಿ ವಿಶ್ವಕಪ್ ಆಡುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆಲುವು ಸಾಧಿಸಿರುವ ಭಾರತ, ಮೂರನೇ ಬಾರಿ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿದೆ. ತಂಡಗಳಿಗೆ ಗಾಯ ಬಹುವಾಗಿ ಕಾಡುತ್ತಿದೆ.

ಏಷ್ಯಾ ಕಪ್ ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದ ಅಕ್ಷರ್ ಪಟೇಲ್, ಈ ಬಾರಿಯ ವಿಶ್ವಕಪ್ ನಿಂದ ಹೊರಗುಳಿದರು. ಇವರ ಸ್ಥಾನದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದರು. ಈಗ ಇಂತಹದ್ದೇ ಒಂದು ಅವಕಾಶ ಇನ್ನೊಬ್ಬ ಆಟಗಾರನಿಗೆ ಒಲಿಯುವ ಸೂಚನೆ ನೀಡಿದೆ.

icc-world-cup-2023

ಟೀಮ್ ಇಂಡಿಯಾದ ಸ್ಟಾರ್ ಓಪನರ್ ಡೆಂಗ್ಯೂ ನಿಂದ ಬಳಲುತ್ತಿದ್ದಾರೆ. ಅವರು ಇನ್ನು ಚೇತರಿಸಿಕೊಂಡಿಲ್ಲ. ಹೀಗಾಗಿ ಪಾಕಿಸ್ತಾನದ ವಿರುದ್ಧದ ಮೂರನೇ ಪಂದ್ಯದಲ್ಲಿ ಶುಭ್ಮನ್ ಗಿಲ್ ಅಂಗಳಕ್ಕೆ ಇಳಿಯುವುದಿಲ್ಲ. ಇಷ್ಟೇ ಅಲ್ಲ, ಗಿಲ್ ವಿಶ್ವಕಪ್ ನಿಂದ ಹೊರಗುಳಿಯುವ ಸಾಧ್ಯತೆ ಕಾಣುತ್ತಿದೆ. ಒಬ್ಬ ಪ್ಲೇಯರ್ ನ ಅನುಪಸ್ಥಿತಿ ಇನ್ನೊಬ್ಬರಿಗೆ ಅವಕಾಶದ ಬಾಗಿಲು ತೆರೆಯಲಿದೆ ಎಂಬುದನ್ನು ಅರ್ಥ ಮಾಡಿಕೊಂಡಿರುವ ಉಳಿದ ಪ್ಲೇಯರ್ಸ್, ಅಭ್ಯಾಸ ಆರಂಭಿಸಿದ್ದಾರೆ.

ಒಂದು ವೇಳೆ ಶುಭ್ಮನ್ ಗಿಲ್ ವಿಶ್ವಕಪ್ ನಿಂದ ಹೊರಗುಳಿದಿದ್ದೇ ಆದಲ್ಲಿ ಟೀಮ್ ಇಂಡಿಯಾಕ್ಕೆ ದೊಡ್ಡ ಪೆಟ್ಟು ಬೀಳುವುದು ನಿಶ್ಚಿತ. ಏಕೆಂದರೆ ಗಿಲ್ ಈ ವರ್ಷ ಭರ್ಜರಿ ಫಾರ್ಮ್ ಹೊಂದಿರುವ ಆಟಗಾರ. ಮೈದಾನದಲ್ಲಿ ನಿಂತು ಎದುರಾಳಿಗಳನ್ನು ಕಾಡಬಲ್ಲ ಓಪನರ್.. ಒಂದೇ ವರ್ಷ ಶತಕಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಂಡ ಪ್ಲೇಯರ್. ರನ್ ದಾಹವನ್ನು ಪಂದ್ಯದಿಂದ ಪಂದ್ಯಕ್ಕೆ ಹೆಚ್ಚಿಸಿಕೊಂಡವರು.

ಯಂಗ್ ಪ್ಲೇಯರ್ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್

ಈ ಯಂಗ್ ಪ್ಲೇಯರ್ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಆಗಬಹುದು ಎಂದೇ ಖ್ಯಾತ ಕ್ರಿಕೆಟ್ ಪಂಡಿತರು ವಿಶ್ಲೇಷಿಸಿದ್ದರು. ಆದರೆ, ಡೆಂಗ್ಯೂ ಎಲ್ಲರ ಆಸೆಗೆ ಪೆಟ್ಟು ನೀಡಿದೆ. ಹಾಗಿದ್ದರೆ, ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಸೇರುವ ಆ ಓಪನರ್ ಯಾರು ಎಂಬ ಪ್ರಶ್ನೆ ಕಾಡುತ್ತಲೆ ಇದೆ.

ಗಿಲ್ ಫಿಟ್ ಆಗದೇ ಇರುವುದರಿಂದ ಯಂಗ್ ಪ್ಲೇಯರ್ ಗಳಾದ ಋತುರಾಜ್ ಗಾಯಕ್ವಡ್ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಗ್ ಪ್ಯಾಕ್ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಆದರೆ, ಇವರನ್ನು ಬಿಟ್ಟು ಮತ್ತೊಬ್ಬ ಆಟಗಾರ ಸಹ ಈ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾನೆ. ಒಂದು ವೇಳೆ ಈ ಪ್ಲೇಯರ್ ಗೆ ಅವಕಾಶ ಸಿಕ್ಕಲ್ಲಿ, ಈ ವಿಶ್ವಕಪ್ ಇವರ ಕ್ರಿಕೆಟ್ ವೃತ್ತಿ ಜೀವನದ ಕೊನೆಯ ವಿಶ್ವಕಪ್ ಆಗಲಿದೆ.

ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಶಿಖರ್ ಧವನ್

ವಿಶ್ವಕಪ್ ಆರಂಭಕ್ಕೂ ಮುನ್ನ ಈ ಪ್ಲೇಯರ್ ಒಬ್ಬ ತಂಡದಲ್ಲಿ ಇದ್ದರೇ ಒಳ್ಳೆಯದಿತ್ತು ಎಂದು ಹೇಳಿದವರೇ ಹೆಚ್ಚು.. ಅವರೇ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಶಿಖರ್ ಧವನ್.. ದೆಹಲಿಯ ಬ್ಯಾಟರ್ ಐಸಿಸಿ ಟೂರ್ನಿಯ ಬಿಗ್ ಮ್ಯಾಚ್ ಪ್ಲೇಯರ್. ಐಸಿಸಿ ನಿಯೋಜಿತ ಟೂರ್ನಿಗಳಲ್ಲಿ ಶಿಖರ್ ಧವನ್ ಬ್ಯಾಟ್ ಆರ್ಭಟಿಸುತ್ತದೆ. ಇದನ್ನೇ ಮನಗೊಂಡು ಟೀಮ್ ಇಂಡಿಯಾ ಆಯ್ಕೆ ಸಮಿತಿ ಶಿಖರ್ ಧವನ್ ಅವರತ್ತ ಮುಖ ಮಾಡಿದರೂ ಅಚ್ಚರಿಯಿಲ್ಲ.

Story first published: Wednesday, October 11, 2023, 10:56 [IST]
Other articles published on Oct 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+