ವಿಶ್ವಕಪ್: ಭಾರತದೆದುರು ಪಂದ್ಯವನ್ನಾಡಲು ಕಾತರರಾಗಿದ್ದಾರೆ ಅಲೆಕ್ಸ್ ಕ್ಯಾರಿ

ಲಂಡನ್, ಜೂನ್ 7: ಚೊಚ್ಚಲ ವಿಶ್ವಕಪ್‌ನಲ್ಲಿ ಆಡುತ್ತಿರುವುದರಿಂದ ವೆಸ್ಟ್ ಇಂಡೀಸ್ ಎದುರು ಸಹಜವಾಗೇ ಕೊಂಚ ಮಜುಗರ ಅನ್ನಿಸಿತ್ತು. ಆದರೆ ಈಗ ಭಾರತಕ್ಕೆ ಸವಾಲೆಸೆಯಲು ಯಾವುದೇ ಅಂಜಿಕೆಯಿಲ್ಲ. ಭಾರತದೆದುರು ಆಡಲು ಕಾತರನಾಗಿದ್ದೇನೆ ಎಂದು ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಹೇಳಿದ್ದಾರೆ.
ನಾಟಿಂಗ್ಹ್ಯಾಮ್ ನಲ್ಲಿ ಗುರುವಾರ (ಜೂನ್ 6) ನಡೆದಿದ್ದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕ್ಯಾರಿ 55 ಎಸೆತಗಳಿಗೆ 45 ರನ್, ನೇಥನ್ ಕೌಲ್ಟರ್-ನೈಲ್ 60 ಎಸೆತಗಳಿಗೆ 92 ರನ್ ಪೇರಿಸಿದ್ದರಿಂದ ಆಸೀಸ್ ಸೋಲೋ ಪಂದ್ಯವನ್ನು ಗೆದ್ದುಕೊಂಡಿತ್ತು. ಈ ಪಂದ್ಯದ ಬಳಿಕ ಕ್ಯಾರಿ ಆತ್ಮವಿಶ್ವಾಸದ ಮಾತುಗಳನ್ನಾಡಿದರು.
'ಭಾರತ vs ಆಸ್ಟ್ರೇಲಿಯಾ ಪಂದ್ಯದಲ್ಲಿ ಧೋನಿಯನ್ನು ಗಮನಿಸಿದ್ದೇನೆ. ಅವರು ತುಂಬಾ ಶಾಂತವಾಗಿರುತ್ತಾರೆ. ಈ ಶಾಂತತೆಯೊಂದಿಗೆ ಧೋನಿ ಆಟವನ್ನು ಮುಗಿಸಲು ಅವಕಾಶ ಮಾಡಿಕೊಡುತ್ತಾರೆ. ಧೋನಿಯ ಶಾಂತ ಸ್ವಭಾವವನ್ನು ನಾನೂ ಕಲಿಯುತ್ತಿದ್ದೇನೆ' ಎಂದು ಐಸಿಸಿ ಅಧಿಕೃತ ವೆಬ್‌ಸೈಟ್‌ವೊಂದರ ಜೊತೆ ಮಾತನಾಡುತ್ತ ಅಲೆಕ್ಸ್ ಹೇಳಿದ್ದಾರೆ.
ಈ ವಿಶ್ವಕಪ್‌ನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಅಂದರೆ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಆಸೀಸ್ ಜಯ ದಾಖಲಿಸಿ ಗೆಲುವಿನ ಹುಮ್ಮಸ್ಸಿನಲ್ಲಿದೆ. ಜೂನ್ 9ರ ಭಾನುವಾರ ಭಾರತ ಮತ್ತು ಆಸೀಸ್ ತಂಡಗಳು 14ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications