ವಿಶ್ವಕಪ್ 2019: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾರ್ನರ್ ಮತ್ತೆ ಪಾದಾರ್ಪಣೆ?!

ಲಂಡನ್, ಮೇ 31: ಕಾಲಿನ ಗಾಯಕ್ಕೀಡಾಗಿರುವ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಗುರುವಾರ (ಮೇ 30) ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಿದ್ದಾರೆ. ಈ ವಾರದ ಅಂತ್ಯಕ್ಕೆ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಯಾದ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ವಾರ್ನರ್ ಪಾಲ್ಗೊಳ್ಳುವುದನ್ನು ನಿರೀಕ್ಷಿಸಲಾಗಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಸೋಮವಾರ (ಮೇ 27) ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾದ ಕಡೇ ಅಭ್ಯಾಸ ಪಂದ್ಯದಲ್ಲೂ ಡೇವಿಡ್ ವಾರ್ನರ್ ಆಡಿರಲಿಲ್ಲ. ಶನಿವಾರ (ಜೂನ್ 1) ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತೆ ಕಾಲಿಡುವ ಇಂಗಿತ ವಾರ್ನರ್ ಅವರದ್ದಾಗಿತ್ತಾದರೂ ಬುಧವಾರ (ಮೇ 29) ಅಭ್ಯಾಸ ಪಂದ್ಯದಲ್ಲಿ ವಾರ್ನರ್ ಅನುಪಸ್ಥಿತಿ ಅನುಮಾನ ಮೂಡಿಸಿತ್ತು.
32ರ ಹರೆಯದ ವಾರ್ನರ್, ಕಳೆದ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಪರ 49.28ರ ಸರಾಸರಿಯಲ್ಲಿ 345 ರನ್ ಬಾರಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಆತಿಥೇಯರ ವಿರುದ್ಧದ ಟೆಸ್ಟ್ ನಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ, ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ವರ್ಷದ ನಿಷೇಧ ಶಿಕ್ಷೆ ಅನುಭವಿಸಿದ ವಾರ್ನರ್, ವಿಶ್ವಕಪ್ ಮೂಲಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿಯಾಗುವುದರಲ್ಲಿದ್ದಾರೆ.
ವಾರ್ನರ್ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿದ ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್, '15 ಆಟಗಾರರೂ ಆಡಲು ಇಷ್ಟಪಡುವಂತೆ ವಾರ್ನರ್ ಕೂಡ ಮೊದಲ ಪಂದ್ಯದಲ್ಲಿ ಆಡುವ ಇಂಗಿತ ಹೊಂದಿದ್ದಾರೆ. ಆರಂಭಿಕ ಪಂದ್ಯದಲ್ಲಿ ಕಣಕ್ಕಿಳಿಯಲು ವಾರ್ನರ್ ತಯಾರಿದ್ದಾರೆ' ಎಂದಿದ್ದಾರೆ. ಒಟ್ಟಿನಲ್ಲಿ ಶನಿವಾರ (ಜೂನ್ 1) ಬೆಳಗ್ಗೆ ವಾರ್ನರ್, ಅಫ್ಘಾನ್ ಎದುರು ಆಡುತ್ತಾರಾ ಇಲ್ಲವಾ ಎಂಬುದು ಖಾತ್ರಿಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications