ವಿಶ್ವಕಪ್: ಎಂಎಸ್ ಧೋನಿ ಮಾದರಿ ಆಟಗಾರ ಎಂದ ಪಾಕ್ ಮಾಜಿ ನಾಯಕ

ಇಸ್ಲಮಾಬಾದ್, ಜೂನ್ 5: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಅವರು ಭಾರತ ಕ್ರಿಕೆಟ್ ಆಟಗಾರರಲ್ಲಿ ಎಂಎಸ್ ಧೋನಿ ನನಗೆ ಮಾದರಿ ಆಟಗಾರ ಎಂದಿದ್ದಾರೆ. ಐಸಿಸಿ ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಆರಂಭಿಕ ಪಂದ್ಯಕ್ಕೂ ಮುನ್ನ ಮಿಸ್ಬಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಇಂಡಿಯಾ ಟುಡೇಯ ವಿಶ್ವಕಪ್ ವಿಶೇಷ ಶೋನಲ್ಲಿ ಮಿಸ್ಬಾ ಅವರಲ್ಲಿ ಭಾರತದ ಮಾದರಿ ಆಟಗಾರರನ್ನು ಆರಿಸಲು ಸೂಚಿಸಲಾಗಿತ್ತು. ಆಗ ಆರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಆರಿಸಿದ ಮಿಸ್ಬಾ, ಮರುಕ್ಷಣವೇ ವರಸೆ ಬದಲಿಸಿದರು. ಮಾಸ್ಟರ್ ಬ್ಲಾಸ್ಟರ್ ಬ್ಯಾಟಿಂಗ್‌ನಲ್ಲಿ ಮಾದರಿ ಆಟಗಾರ, ಆದರೆ ಧೋನಿ ಎಲ್ಲದರಲ್ಲೂ ಮಾದರಿ ಆಟಗಾರ ಎಂದರು.
'ಬ್ಯಾಟ್ಸ್ಮನ್ ಆದರೆ ನಾನು ಸಚಿನ್ ತೆಂಡೂಲ್ಕರ್ ಅವರನ್ನು ಆರಿಸುತ್ತೇನೆ. ಆದರೆ ಎಲ್ಲವನ್ನೂ ಸೇರಿಸಿದರೆ ನಾನು ಎಂಎಸ್ ಧೋನಿಯನ್ನು ಹೆಕ್ಕುತ್ತೇನೆ. ಎಂದು ಮಿಸ್ಬಾ ಹೇಳಿದರು. ಕಳೆದ ವಿಶ್ವಕಪ್‌ನಲ್ಲಿ ಮಿಸ್ಬಾ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಕ್ವಾರ್ಟರ್ ಫೈನಲ್‌ವರೆಗೂ ಬಂದಿತ್ತು.
ಭಾರತ ಕ್ರಿಕೆಟ್ ಬಗ್ಗೆ ಮಾತನಾಡಿದ ಮಿಸ್ಬಾ ಉಲ್ ಹಕ್, 'ಬದಲಾವಣೆಗಾಗಿ ನಾನು ಧೋನಿಯನ್ನು ಆರಿಸಿದೆ. ಯಾಕೆಂದರೆ ಭಾರತದ ಕ್ರಿಕೆಟ್‌ನಲ್ಲಿ ಅಪರೂಪದ ಸಾಧನೆಗಳಿಗೆ ಧೋನಿ ನಾಯಕತ್ವ ಸಾಕ್ಷಿಯಾಗಿದೆ. ಟೀಮ್ ಇಂಡಿಯಾಕ್ಕೆ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಅವರಂತವರ ಕೊಡುಗೆಯೂ ತುಂಬಾ ದೊಡ್ಡದು ಎನ್ನುವುದರಲ್ಲಿ ಎರಡು ಮಾತಿಲ್ಲ' ಎಂದೂ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications