ಧೋನಿ ಮಾತ್ರವಲ್ಲ, 'ಯೂನಿವರ್ಸ್ ಬಾಸ್' ಮನವಿಗೂ ಒಲ್ಲೆಯೆಂದ ಐಸಿಸಿ!

ಲಂಡನ್, ಜೂನ್ 9: ವಿಶ್ವಕಪ್ ಪಂದ್ಯದ ವೇಳೆ ಭಾರತದ ಆರ್ಮಿಯ ಮುದ್ರೆಯಿರುವ ಗ್ಲೌಸ್ ಧರಿಸಲು ಅನುಮತಿ ನೀಡುವಂತೆ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಾಡಿದ್ದ ಮನವಿಯನ್ನು ಮಾತ್ರ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಿರಸ್ಕರಿಸಿಲ್ಲ, ಕ್ರಿಸ್‌ಗೇಲ್ ಅವರ ಇಂಥದ್ದೇ ಕೋರಿಕೆಯನ್ನೂ ನಿರಾಕರಿಸಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಸ್ಫೋಟಕ ಬ್ಯಾಟಿಂಗ್‌ಗೆ ಖ್ಯಾತಿಯಾಗಿರುವ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್‌ಗೇಲ್‌ಗೆ 'ಯೂನಿವರ್ಸ್ ಬಾಸ್' ಎಂಬ ನಿಕ್ ನೇಮ್ ಇದೆ. ಹೀಗಾಗಿ ತಾನು ವಿಶ್ವಕಪ್ ಪಂದ್ಯದ ವೇಳೆ ಬ್ಯಾಟ್‌ನಲ್ಲಿ 'ಯೂನಿವರ್ಸ್ ಬಾಸ್' ಲೋಗೋ ಬಳಸಲು ಅನುಮತಿ ನೀಡಬೇಕೆಂದು ಗೇಲ್, ಐಸಿಸಿಯನ್ನು ಮನವಿ ಮಾಡಿಕೊಂಡಿದ್ದರು.
ಐಸಿಸಿ ಉಪಕರಣಗಳ ನಿಯಮದ ಪ್ರಕಾರ ಆಟಗಾರರು ಹೀಗೆ ತಮ್ಮಿಚ್ಛೆಯ ಚಿಹ್ನೆಗಳನ್ನು ಕ್ರೀಡಾ ಪರಿಕರಗಳಲ್ಲಿ ಬಳಸೋದು ನಿಯಮ ಉಲ್ಲಂಘನೆಯಾದಂತಾಗುತ್ತದೆ. ಐಸಿಸಿ ಅನುಮತಿ ನೀಡಿರುವ ಲೋಗೋಗಳಲ್ಲದೆ ಬೇರೆ ಲೋಗೋಗಳನ್ನು ಆಟಗಾರರು ಕ್ರೀಡಾ ಉಪಕರಣಗಳಲ್ಲಿ ಬಳಿಸುವಂತಿಲ್ಲ. ಹೀಗಾಗಿ ಧೋನಿ ಮತ್ತು ಗೇಲ್ ಇಬ್ಬರ ಮನವಿಗೂ ಐಸಿಸಿ ಒಲ್ಲೆಯೆಂದಿದೆ.
ಎಂಎಸ್ ಧೋನಿ ಭಾರತದ ಸೇನಾಪಡೆಯ ಗೌರವ ಲೆಫ್ಟಿನೆಂಟ್ ಆಗಿ ಗುರುತಿಸಿಕೊಂಡವರು. ಹೀಗಾಗಿ ಗ್ಲೌಸ್‌ನಲ್ಲಿ ಭಾರತೀಯ ಪ್ಯಾರಾ ವಿಶೇಷ ಸೇನಾಪಡೆಯ 'ಬಲಿದಾನ್' ಲೋಗೋ ಬಳಸಲು ಅನುಮತಿ ನೀಡಬೇಕೆಂದು ಬಿಸಿಸಿಐ ಕೂಡ ಐಸಿಸಿಯನ್ನು ಕೋರಿಕೊಂಡಿತ್ತು. ಆದರೆ ಐಸಿಸಿ, ಬಿಸಿಸಿಐ ಈ ಕೋರಿಕೆಯನ್ನು ತಿರಸ್ಕರಿಸಿತ್ತು. ಜೊತೆಗೆ ಯೂನಿವರ್ಸಲ್ ಬಾಸ್ ಮನವಿಯೂ ತಿರಸ್ಕರಿಸಲ್ಪಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications