ವಿಶ್ವಕಪ್: ಕಿವೀಸ್ ವಿರುದ್ಧ ಮೈದಾನಕ್ಕಿಳಿಯಲಿರುವ ಭಾರತದ XI ಆಟಗಾರರು

ನಾಟಿಂಗ್ಹ್ಯಾಮ್, ಜೂನ್ 12: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 36 ರನ್ ಜಯ ಗಳಿಸಿರುವ ವಿರಾಟ್ ಕೊಹ್ಲಿ ಬಳಗ ಗುರುವಾರ (ಜೂನ್ 13) ನ್ಯೂಜಿಲ್ಯಾಂಡ್ ವಿರುದ್ಧ ವಿಶ್ವಕಪ್ 3ನೇ ಪಂದ್ಯವನ್ನಾಡುತ್ತಿದೆ. ಸದ್ಯ ವಿಶ್ವಕಪ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಕೇನ್ಸ್ ವಿಲಿಯಮ್ಸನ್ ಬಳಗ ಭಾರತಕ್ಕೆ ಪ್ರಬಲ ಪೈಪೋಟಿ ನೀಡುವುದು ನಿರೀಕ್ಷಿತ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಬಲಿಷ್ಠ ತಂಡ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲ್ಲುವಲ್ಲಿ ಶಿಖರ್ ಧವನ್ ಪಾತ್ರ ಮುಮುಖವಾಗಿತ್ತು. ಆದರೆ ಮುಂದಿನ ಎರಡು ಪಂದ್ಯಗಳಲ್ಲಂತೂ ಧವನ್ ಆಡುತ್ತಿಲ್ಲ. ಎಡಗೈ ಬೆರಳಿಗೆ ಗಾಯ ಮಾಡಿಕೊಂಡಿರುವ ಧವನ್ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ವಿರುದ್ಧ ಪಂದ್ಯದಿಂದ ಹೊರಗಿರಲಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಗೆದ್ದರೆ ಸೆಮಿಫೈನಲ್ ಎಡೆಗಿನ ದಾರಿ ಸುಲಭವಾಗಲಿದೆ. ಆದರೆ ಧವನ್ ಗಾಯಾಳಾಗಿರುವುದರಿಂದ ನ್ಯೂಜಿಲ್ಯಾಂಡ್ ವಿರುದ್ಧ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಲಭ್ಯ ಮಹಿತಿಗಳ ಪ್ರಕಾರ ಕಿವೀಸ್ ವಿರುದ್ಧ ಆಡಲಿರುವ ಭಾರತ XI ಕೆಳಗಿನಂತಿರಲಿದೆ.

ಆರಂಭಿಕ ಆಟಗಾರರಾಗಿ ರಾಹುಲ್
ಕೈ ಬೆರಳಿಗೆ ತೀವ್ರ ಗಾಯ ಮಾಡಿಕೊಂಡು ಕೊಹ್ಲಿ ಬಳಗಕ್ಕೆ ಆತಂಕ ಮೂಡಿಸಿದ್ದ ಧವನ್ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲವಾದ್ದರಿಂದ ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆಗೆ ಕೆಎಲ್ ರಾಹುಲ್ ಬರಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಧವನ್-ಶರ್ಮಾ ಜೋಡಿ ಉತ್ತಮ ಜೊತೆಯಾಟ ಆಡಿತ್ತು. ರಾಹುಲ್ ಹೇಗೆ ಅವಕಾಶ ಬಳಸಿಕೊಳ್ಳಲಿದ್ದಾರೆ ನೋಡಬೇಕಿದೆ. ಇನ್ನು 3ನೇ ಕ್ರಮಾಂಕದಲ್ಲಿ ಎಂದಿನಂತೆ ನಾಯಕ ವಿರಾಟ್ ಕೊಹ್ಲಿ ಬರಲಿದ್ದಾರೆ (1. ರೋಹಿತ್ ಶರ್ಮಾ, 2. ಕೆಎಲ್ ರಾಹುಲ್, 3. ವಿರಾಟ್ ಕೊಹ್ಲಿ).

ಮಧ್ಯಮ ಕ್ರಮಾಂಕ
ಮಧ್ಯಮ ಕ್ರಮಾಂಕದ ಮೊದಲ ಆಯ್ಕೆಯ ಆಟಗಾರ, ಕನ್ನಡಿಗ ರಾಹುಲ್ ಆರಂಭಿಕರಾಗಿ ಬ್ಯಾಟ್ ಎತ್ತಿಕೊಳ್ಳಲಿರುವುದರಿಂದ ನಾಲ್ಕನೇ ಕ್ರಮಾಂಕದಲ್ಲಿ ಅನುಭವಿ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಕಾಣಿಸುವ ಸಾಧ್ಯತೆಯಿದೆ. ಇನ್ನು 5ನೇ ಕ್ರಮಾಂಕದಲ್ಲಿ ಮಾಜಿ ನಾಯಕ ಎಂಸ್ ಧೋನಿ ಎಂದಿನಂತೆ ಮೈದಾನಕ್ಕಿಳಿಯಲಿದ್ದಾರೆ ( 4. ದಿನೇಶ್ ಕಾರ್ತಿಕ್, 5. ಎಂಎಸ್ ಧೋನಿ)

ಆಲ್ ರೌಂಡರ್‌ಗಳು
ಆಲ್ ರೌಂಡರ್‌ಗಳಲ್ಲಿ 6ನೇ ಬ್ಯಾಟ್ಸ್ಮನ್ ಆಗಿ ಕೇದಾರ್ ಜಾಧವ್ ಬರುವ ನಿರೀಕ್ಷೆಯಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹೆಚ್ಚು ರನ್ ಗುರಿ ನೀಡುವ ಉದ್ದೇಶದಿಂದ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೊಂಚ ಏರುಪೇರಾಗಿದ್ದವು. ಜಾಧವ್ ಅಂದು 7ನೇ ಕ್ರಮಾಂಕದಲ್ಲಿ ಬಂದು ಒಂದೂ ಎಸೆತ ಎದುರಿಸಿರಲಿಲ್ಲ. 7ನೇ ಕ್ರಮಾಂಕ ವ್ಯಾಲ್ಯುಯೇಬಲ್ ಪ್ಲೇಯರ್ ಹಾರ್ದಿಕ್ ಪಾಂಡ್ಯ ಅವರದ್ದಾಗಿರಲಿದೆ (6. ಕೇದಾರ್ ಜಾಧವ್, 7. ಹಾರ್ದಿಕ್ ಪಾಂಡ್ಯ).

ಬೌಲರ್‌ಗಳು
ಇನ್ನುಳಿದಂತೆ ಬೌಲರ್‌ಗಳ ಬ್ಯಾಟಿಂಗ್ ಕ್ರಮಾಂಕ ಸಾಧಾರಣ ಎಂದಿನಂತೆಯೇ ಇರಲಿದೆ. ಕೊಂಚ ಬ್ಯಾಟ್ ಬೀಸಬಲ್ಲ ವೇಗಿ ಭುವನೇಶ್ವರ್ ಕುಮಾರ್ 8ನೇ ಕ್ರಮಾಂಕದಲ್ಲಿ ಕಾಣಿಸಿಕೊಂಡರೆ, ಸ್ಪಿನ್ನರ್ ಯುಜುವೇಂದ್ರ ಚಾಹಲ್ 9ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ, ಕುಲದೀಪ್ ಯಾದವ್ 10ನೇ ಕ್ರಮಾಂಕದಲ್ಲಿ ಮತ್ತು ಜಸ್‌ಪ್ರೀತ್ ಬೂಮ್ರಾ 11ನೇ ಕ್ರಮಾಂಕದಲ್ಲಿ ಬರಲಿದ್ದಾರೆ. ಆಲ್ ರೌಂಡರ್‌ಗಳಾದ ವಿಜಯ್ ಶಂಕರ್ ಮತ್ತು ರವಿಂದ್ರ ಜಡೇಜಾ ಕಿವೀಸ್ ವಿರುದ್ಧ ಭಾರತದ ಆಡುವ 11ರಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಕಡಿಮೆಯಿದೆ (8. ಭುವನೇಶ್ವರ್ ಕುಮಾರ್, 9. ಸ್ಪಿನ್ನರ್ ಯುಜುವೇಂದ್ರ, 10. ಕುಲದೀಪ್ ಯಾದವ್, 11. ಜಸ್‌ಪ್ರೀತ್ ಬೂಮ್ರಾ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications