
ನವದೆಹಲಿ, ಜೂನ್ 27: ವಿರಾಟ್ ಕೊಹ್ಲಿ ಮುಂದಾಳತ್ವದ ಟೀಮ್ ಇಂಡಿಯಾ ಐಸಿಸಿ ಪುರುಷರ ಏಕದಿನ ರ್ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಪಟ್ಟ ಅಲಂಕರಿಸಿದೆ. ಈ ಮೊದಲು ಇಂಗ್ಲೆಂಡ್ ಅಗ್ರ ಸ್ಥಾನದಲ್ಲಿತ್ತು. ಇಂಗ್ಲೆಂಡ್ ಗಿಂತ 1 ಹೆಚ್ಚುವರಿ ರೇಟಿಂಗ್ ಪಾಯಿಂಟ್ ಕಲೆ ಹಾಕಿರುವ ಭಾರತ, ಆಂಗ್ಲರನ್ನು ಕೆಳಗಿಳಿಸಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಜೂನ್ 25ರ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆತಿಥೇಯ ಇಂಗ್ಲೆಂಡ್ 64 ರನ್ ಸೋಲನುಭವಿಸಿತ್ತು. ಈ ಪಂದ್ಯದ ಪರಾಭವದೊಂದಿಗೆ ಆಂಗ್ಲರು ಏಕದಿನ ನಂ.1 ಪಟ್ಟವನ್ನು ಬಿಟ್ಟುಕೊಟ್ಟಂತಾಗಿದೆ. ಸದ್ಯ ಭಾರತ 123 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ದ್ವಿತೀಯ ಸ್ಥಾನದಲ್ಲಿರುವ ಇಂಗ್ಲೆಂಡ್ 122 ಪಾಯಿಂಟ್ ಕಲೆ ಹಾಕಿದೆ.
ವೆಸ್ಟ್ ಇಂಡೀಸ್ vs ಭಾರತ, ಜೂನ್ 27, Live ಸ್ಕೋರ್‌ಕಾರ್ಡ್
ಗುರುವಾರ (ಜೂನ್ 27) ಪ್ರಕಟಿಸಲಾದ ಐಸಿಸಿ ರ್ಯಾಂಕ್ ಪಟ್ಟಿಯಲ್ಲಿ ಭಾರತ, ಇಂಗ್ಲೆಂಡ್ ಮೊದಲೆರಡು ಸ್ಥಾನಗಳಲ್ಲಿದ್ದರೆ, 3ನೇ ಸ್ಥಾನದಲ್ಲಿ ನ್ಯೂಜಿಲೆಂಡ್ (114 ಪಾಯಿಂಟ್ಸ್), 4ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ (112), 5ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ (109) ತಂಡಗಳು ಸ್ಥಾನ ಪಡೆದುಕೊಂಡಿವೆ.
ಜೂನ್ 27ರಂದು ವಿಶ್ವಕಪ್ 34ನೇ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕಾದಾಡುತ್ತಿವೆ. ಈ ಪಂದ್ಯದಲ್ಲಿ ಭಾರತವೇನಾದರೂ ಸೋತರೆ 2 ಅಂಕಗಳನ್ನು ಕಳೆದು 121 ಅಂಕಗಳೊಂದಿಗೆ ಭಾರತ ಮತ್ತೆ ಇಂಗ್ಲೆಂಡ್‌ಗೆ ನಂ.1 ಸ್ಥಾನ ಬಿಟ್ಟುಕೊಡಲಿದೆ!
ಇನ್ನು ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ವೆಸ್ಟ್ ಇಂಡೀಸ್ ಅಫ್ಘಾನಿಸ್ತಾನ ತಂಡಗಳು 6ರಿಂದ 10ನೇ ಸ್ಥಾನಗಳಲ್ಲಿವೆ. ಜೂನ್ 30ರಂದು ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗುತ್ತಿದ್ದು ಈ ಪಂದ್ಯ ಸೆಮಿಫೈನಲ್ ನಿಟ್ಟಿನಲ್ಲಿ ಎರಡೂ ತಂಡಗಳಿಗೂ ಪ್ರಮುಖವಷ್ಟೇ ಅಲ್ಲ, ಏಕದಿನ ದಿನ ರ್ಯಾಂಕಿಂಗ್ ವಿಚಾರದಲ್ಲೂ ಈ ಪಂದ್ಯದ ಫಲಿತಾಂಶ ಪ್ರಭಾವ ಬೀರಲಿದೆ.