ಮಿಂಚಿನ ವೇಗದ ಕ್ಯಾಚ್‌ಗಾಗಿ ಬೆರಗು ಮೂಡಿಸಿದ ಗಪ್ಟಿಲ್-ಸ್ಮಿತ್: ವಿಡಿಯೋ

ಲಂಡನ್, ಜೂನ್ 30: ಶನಿವಾರ (ಜೂನ್ 29) ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ತಂಡವನ್ನು 86 ರನ್‌ನಿಂದ ಸೋಲಿಸಿತು. ಆದರೆ ಪಂದ್ಯದಲ್ಲಿನ ಮಾರ್ಟಿನ್ ಗಪ್ಟಿಲ್ ಮತ್ತು ಸ್ಟೀವ್ ಸ್ಮಿತ್ ಅವರ ಅದ್ಭುತ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಯಾಕೆ ಈ ಎರಡು ಅದ್ಭುತ ಕ್ಯಾಚ್‌ಗಳು ವೈರಲ್ ಆಗಿವೆ ಎಂದರೆ ಇತ್ತಂಡಗಳ ಈ ಪಂದ್ಯದಲ್ಲಿ ಸ್ಮಿತ್ ಅವರನ್ನು ಗಪ್ಟಿಲ್ ವಿಶೇಷ ರೀತಿಯ ಕ್ಯಾಚ್ ಮುಖಾಂತರ ಪೆವಿಲಿಯನ್‌ಗಟ್ಟಿದ್ದರೆ, ಸ್ಮಿತ್ ಕೂಡ ಭರ್ಜರಿ ಕ್ಯಾಚ್ ಮೂಲಕ ಟಾಮ್ ಲ್ಯಾಥಮ್ ಅವರನ್ನು ಔಟ್ ಮಾಡಿದ್ದರು. ಒಂದೇ ಪಂದ್ಯದಲ್ಲಿ ಎರಡು ತಂಡಗಳ ಆಟಗಾರರು ಅದ್ಭುತ ಕ್ಯಾಚ್‌ಗಾಗಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.
ಆಸೀಸ್ ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಲಾಕಿ ಫಾರ್ಗುಸನ್ ಎಸೆತಕ್ಕೆ ರನ್ ಕದಿಯಲು ಸ್ಮಿತ್ ಯತ್ನಿಸಿದಾಗ ಲೆಗ್ ಗಲ್ಲಿಯಲ್ಲಿ ನಿಂತಿದ್ದ ಗಪ್ಟಿಲ್ ಛಂಗನೆ ಜಿಗಿದು ಚೆಂಡನ್ನು ಹಿಡಿದುಕೊಂಡರು. ಪರಿಣಾಮ ಸ್ಮಿತ್ ಕೇವಲ 5 ರನ್‌ಗೆ ನಿರ್ಗಮಿಸುವಂತಾಗಿತ್ತು.
ಅದೇ ನ್ಯೂಜಿಲೆಂಡ್ ಇನ್ನಿಂಗ್ಸ್‌ನಲ್ಲಿ ಲ್ಯಾಥಮ್ ಅವರನ್ನು ಸ್ಮಿತ್ ಹೀಗೇ ಮಿಂಚಿನ ವೇಗದಲ್ಲಿ ಔಟ್ ಮಾಡಿದ್ದು ವಿಶೇಷವೆನಿಸಿತು. 35.3ನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆತಕ್ಕೆ ಟಾಮ್ ಲ್ಯಾಥಮ್ ಬ್ಯಾಟ್ ಬೀಸಿದಾಗ ಸ್ಮಿತ್ ಜಿಗಿದು ಚೆಂಡು ಹಿಡಿದಿದ್ದರು. ಲ್ಯಾಥಮ್ 14 ರನ್‌ಗೆ ನಿರ್ಗಮಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications