ಅಪ್ಪನಾಗಿ ಬದುಕಿನ ಖುಷಿಯ ಕ್ಷಣಗಳನ್ನು ಸಂಭ್ರಮಿಸುತ್ತಿದ್ದೇನೆ: ರೋಹಿತ್

ಲಂಡನ್, ಜೂನ್ 17: ಶಾಂತ ಸ್ವಭಾವ ರೋಹಿತ್ ಶರ್ಮಾ ಅವರ ಬಹುದೊಡ್ಡ ಆಸ್ತಿ. ಮಗುವಿಗೆ ತಂದೆಯಾದ ಖುಷಿಯಲ್ಲಿರುವ ಟೀಮ್ ಇಂಡಿಯಾ ಉಪ ನಾಯಕ ರೋಹಿತ್, ಕ್ರಿಕೆಟ್ ಅಂಗಳದಲ್ಲಿ ಅದ್ಭುತ ಪ್ರದರ್ಶನವನ್ನೂ ನೀಡುತ್ತಿದ್ದಾರೆ. ಭಾರತ vs ಪಾಕಿಸ್ಥಾನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಹಿಟ್‌ಮ್ಯಾನ್ ರೋಹಿತ್ ಒಂದಿಷ್ಟು ಖುಷಿಯ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
'ಸಂಭ್ರಮಿಸೋದಕ್ಕೆ ಇದೊಂದು ಪ್ರಮುಖ ಹಂತ. ಈ ಹಂತದಲ್ಲಿ ನಾನೀಗ ಇದ್ದೇನೆ ಎಂದು ನನಗನ್ನಿಸುತ್ತಿದೆ. ಬದುಕಿನ ಅತ್ಯಂತ ಉತ್ತಮ ಘಟ್ಟದಲ್ಲಿ ನಾನೀಗ ಇದ್ದೇನೆ. ಪುತ್ರಿಯ ಜನನ ನನ್ನನ್ನು ಈ ಖುಷಿಯ ಹಂತಕ್ಕೆ ತಂದು ನಿಲ್ಲಿಸಿಬಿಟ್ಟಿದೆ' ಎಂದು ಭಾರತ-ಪಾಕ್ ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಹೇಳಿದರು.
ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಭಾನುವಾರ (ಜೂನ್ 16) ನಡೆದ ಭಾರತ-ಪಾಕ್ ಪಂದ್ಯದಲ್ಲಿ 113 ಎಸೆತಗಳಿಗೆ 140 ರನ್ ಸಿಡಿಸಿ, ರೋಹಿತ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ತೀವ್ರ ಕುತೂಹಲ ಮೂಡಿಸಿದ್ದ ಈ ಪಂದ್ಯದಲ್ಲಿ ಭಾರತ ಗೆದ್ದು ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಸತತ 7ನೇ ಜಯದ ದಾಖಲೆ ನಿರ್ಮಿಸಿತ್ತು.
'ಒಂದು ತಂಡವಾಗಿ ನಾವು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇವೆ ಎಂಬುದು ನನ್ನ ಭಾವನೆ. ನಮ್ಮ ಮುಂದಿರುವ ಸವಾಲುಗಳನ್ನೆಲ್ಲಾ ನಾವು ಎದುರುಗೊಳ್ಳೋದು ತುಂಬಾ ಪ್ರಮುಖವೆಂಬುದು ನನ್ನನಿಸಿಕೆ. ನಾವು ಇದನ್ನೇ ಹೆಚ್ಚಿನ ಸಾರಿ ಮಾಡಿ ತೋರಿಸಿದ್ದೇವೆ. ಮುನ್ನಡೆ ಕಂಡಿದ್ದೇವೆ' ಎಂದು ರೋಹಿತ್ ಅಭಿಪ್ರಾಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications