Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ಭಾರತ ಮಣಿಸಲು ಫರ್ಗುಸನ್ ಕೈಲೊಂದಿದೆ ಖತರ್ನಾಕ್ ಐಡಿಯಾ!

ICC World Cup: New Zealand’s Lockie Ferguson reveals plan

ನಾಟಿಂಗ್ಹ್ಯಾಮ್, ಜೂನ್ 12: ಸದ್ಯ ವಿಶ್ವಕಪ್‌ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್‌ಗೆ ಭಾರತವನ್ನು ಮಣಿಸೋದು ಸುಲಭವಲ್ಲ ಅನ್ನೋದು ಚೆನ್ನಾಗಿ ಗೊತ್ತು. ಆದರೆ ನ್ಯೂಜಿಲ್ಯಾಂಡ್ ಬಳಿ ಒಂದು ಖತರ್ನಾಕ್ ಐಡಿಯಾವಿದೆ. ಇದನ್ನು ಕಿಸೀಸ್ ವೇಗಿ ಲಾಕಿ ಫರ್ಗುಸನ್ ಹೇಳಿಕೊಂಡಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಮಂಗಳವಾರ (ಜೂನ್ 11) ಸುದ್ದಿಗಾರರೊಂದಿಗೆ ಮಾತನಾಡಿದ ಫರ್ಗುಸನ್, 'ಟೀಮ್ ಇಂಡಿಯಾದಲ್ಲಿ ವಿಶ್ವ ಶ್ರೇಷ್ಠ ಆಟಗಾರರಿದ್ದಾರೆ. ಅವರನ್ನು ಸುಲಭವಾಗಿ ಸೋಲಿಸಲಾಗಲ್ಲ. ಆದರೆ ತಂಡದ ಮೇಲೆ ಒತ್ತಡ ಹೇರಿದರೆ ನಾವು ಅರ್ಧ ಗೆದ್ದಂತೆಯೆ. ಅದೇ ಒತ್ತಡದ ಅನುಕೂಲವನ್ನು ನಾವು ವಿಕೆಟ್ ಮೂಲಕವೂ ಗಳಿಸಲು ಸಾಧ್ಯವಿದೆ' ಎಂದಿದ್ದಾರೆ.

ಲಾಕಿ ಫರ್ಗುಸನ್ ಯೋಜನೆಗಳೇನು? ಭಾರತವನ್ನು ಹೇಗೆ ಸೋಲಿಸಲು ಕಿವೀಸ್ ಯೋಜಿಸಿದೆ ಎಂಬುದಕ್ಕೆ ಸಂಬಂಧಿಸಿ ಒಂದಿಷ್ಟು ಅಂಶಗಳಿವೆ.

ಶ್ರೇಷ್ಠ ಬ್ಯಾಟ್ಸ್ಮನ್‌ಗಳು

ಶ್ರೇಷ್ಠ ಬ್ಯಾಟ್ಸ್ಮನ್‌ಗಳು

ನಾಟಿಂಗ್ಹ್ಯಾಮ್ ನ ಟ್ರೆಂಡ್ ಬ್ರಿಡ್ಜ್‌ನಲ್ಲಿ ಗುರುವಾರ (ಜೂನ್ 13) ನಡೆಯುವ ವಿಶ್ವಕಪ್ 18ನೇ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಕಾದಾಡಲಿವೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಸದ್ಯ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಿ ಬ್ಯಾಟ್ಸ್ಮನ್‌ ಆಗಿರುವುದರಿಂದ ಭಾರತವನ್ನೆದುರಿಸೋದು ಕಿವೀಸ್‌ಗೆ ಸಹಜವಾಗೇ ಸವಾಲೆನಿಸಿದೆ.

ಸೋಲಿಸುವ ಅಪೂರ್ವ ಅವಕಾಶ

ಸೋಲಿಸುವ ಅಪೂರ್ವ ಅವಕಾಶ

'ಶ್ರೇಷ್ಠ ಬ್ಯಾಟ್ಸ್ಮನ್‌ಗಳಿರುವುದರಿಂದ ಟೂರ್ನಿಯ ಬಲಿಷ್ಠ ತಂಡವಾಗಿ ವಿರಾಟ್ ಕೊಹ್ಲಿ ಬಳಗ ಗುರುತಿಸಿಕೊಂಡಿದೆ. ಆದರೆ ಇಂಗ್ಲೆಂಡ್‌ನಲ್ಲಿ ಭಾರತವನ್ನು ಸೋಲಿಸುವ ಅಪೂರ್ವ ಅವಕಾಶವನ್ನು ನಾವು ಮುಂದೆ ನೋಡುತ್ತಿದ್ದೇವೆ. ಇಂಗ್ಲೆಂಡ್‌ನಲ್ಲಿ ಬಹಳ ದಿನಗಳ ನಂತರ ನಾವು ಭಾರತದೆದುರು ಆಡುತ್ತಿದ್ದೇವೆ. ಖಂಡಿತಾ ನಾವು ಗೆಲುವಿನ ನಿರೀಕ್ಷೆ ಹೊಂದಿದ್ದೇವೆ' ಎಂದು ಫರ್ಗುಸನ್ ಹೇಳಿದರು.

ಹಿಂದಿನ ಪಂದ್ಯದ ಲೆಕ್ಕಾಚಾರ

ಹಿಂದಿನ ಪಂದ್ಯದ ಲೆಕ್ಕಾಚಾರ

ಆಸೀಸ್ ವಿರುದ್ಧ ಭಾರತ ಮೊದಲ 10 ಓವರ್‌ಗಳಲ್ಲಿ 41 ರನ್ ಕಲೆ ಹಾಕಿತ್ತು. ಆದರೆ ಅಂತಿಮ 10 ಓವರ್‌ಗಳಲ್ಲಿ ಭರ್ಜರಿ 116 ರನ್ ಸೇರಿಸಿದ್ದ ಭಾರತ, ಹಾಲಿ ಚಾಂಪಿಯನ್ನರನ್ನು 36 ರನ್‌ಗಳಿಂದ ಸೋಲಿಸಿತ್ತು. ಈ ಅಂಕಿ-ಅಂಶಗಳನ್ನು ಲೆಕ್ಕ ಹಾಕಿರುವ ನ್ಯೂಜಿಲ್ಯಾಂಡ್, ಭಾರತವನ್ನು ಸೋಲಿಸುವ ಯೋಚನೆಯಲ್ಲಿದೆ. ಆದರೆ ಕಿವೀಸ್ ಗೆಲ್ಲೋಕೆ ಕೊಹ್ಲಿ ಬಳಗ ಬಿಟ್ಟೀತಾ?!

ಒತ್ತಡ ಹೇರಿ ಗೆಲ್ಲುತ್ತೇವೆ

ಒತ್ತಡ ಹೇರಿ ಗೆಲ್ಲುತ್ತೇವೆ

ಮಾತು ಮುಂದುವರೆಸಿದ ಲಾಕಿ, 'ಅಂದರೆ ನಾವು ಭಾರತ ವಿರುದ್ಧ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆಯಲು ಯೋಚಿಸಿದ್ದೇವೆ. ಅಲ್ಲದೆ ವಿಕೆಟ್‌ ಕೂಡ ಉರುಳಿಸಿ ಎದುರಾಳಿಗೆ ಒತ್ತಡ ಹೇರಿ ಪಂದ್ಯ ಗೆದ್ದುಕೊಳ್ಳೋದು ನಮ್ಮ ಯೋಜನೆ' ಎಂದು ವಿವರಿಸಿದರು.

Story first published: Wednesday, June 12, 2019, 15:17 [IST]
Other articles published on Jun 12, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+