For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಬಲಿಷ್ಠ ನ್ಯೂಜಿಲೆಂಡ್ ಸೋಲಿಸುತ್ತಾ ದಕ್ಷಿಣ ಆಫ್ರಿಕಾ?

ICC World Cup: New Zealand vs South Africa, Match 25-Preview

ಬರ್ಮಿಂಗ್‌ಹ್ಯಾಮ್, ಜೂನ್ 19: ಆಟಗಾರರ ಗಾಯದ ಸಮಸ್ಯೆಯ ಬಿಸಿಗೆ ಸಲುಕಿ ಹೆಚ್ಚು ಹಿನ್ನಡೆ ಅನುಭವಿಸಿದ್ದು ದಕ್ಷಿಣ ಆಫ್ರಿಕಾ ತಂಡ. ಐಸಿಸಿ ಏಕದಿನ ರ್ಯಾಕಿಂಗ್‌ನಲ್ಲ ನಾಲ್ಕನೇ ಸ್ಥಾನದಲ್ಲಿರುವ ಫಾ ಡು ಪ್ಲೆಸಿಸ್ ಬಳಗ, ವಿಶ್ವಕಪ್ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ. ಆಡಿರುವ 5 ಪಂದ್ಯಗಳಲ್ಲಿ ಕೇವಲ 1ರಲ್ಲಷ್ಟೇ ದಕ್ಷಿಣ ಆಫ್ರಿಕಾ ಜಯಿಸಿದೆ.

ಆರಂಭಿಕ ಪಂದ್ಯಗಳನ್ನು ಸೋತಿದ್ದರಿಂದ ಮುಂದಿನ ಗೆಲುವುಗಳು ದಕ್ಷಿಣ ಆಫ್ರಿಕಾ ತಂಡಕ್ಕೆ ಸುಲಭವಿಲ್ಲ. ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನಕ್ಕೆ ಮುನ್ನುಗ್ಗಲು ಉಳಿದ 9 ತಂಡಗಳೂ ಹವಣಿಸುತ್ತಿರುವುದರಿಂದ ಆಫ್ರಿಕಾ ಮೇಲೇಳೋದು ಸವಾಲಿನ ಮಾತು. ಬುಧವಾರ (ಜೂನ್ 19) ದಕ್ಷಿಣ ಆಫ್ರಿಕಾ ತಂಡ, ವಿಶ್ವಕಪ್ ಅಂಕಪಟ್ಟಿಯ 3ನೇ ಸ್ಥಾನಿ ನ್ಯೂಜಿಲ್ಯಾಂಡ್ ಸವಾಲು ಸ್ವೀಕರಿಸಲಿದೆ. ತೇವ ನೆಲದ ಕಾರಣ ಟಾಸ್ ವಿಳಂಬಗೊಂಡಿದೆ.

ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ, ಜೂನ್ 19, Live ಸ್ಕೋರ್‌ಕಾರ್ಡ್

1
43668

ಈ ಪಂದ್ಯದ ಗೆಲುವು ಎರಡೂ ತಂಡಗಳಿಗೂ ಪ್ರಮುಖವಾಗಿರುವುದರಿಂದ ಪಂದ್ಯ ಕುತೂಹಲ ಮಾಡಿಸಲಿದೆ. ದಕ್ಷಿಣ ಆಫ್ರಿಕಾ ಸ್ಪಿನ್ನರ್ ಇಮ್ರಾನ್ ತಾಹಿರ್‌ಗೆ 2 ವಿಕೆಟ್ ಲಭಿಸಿದರೆ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಅತ್ಯಧಿಕ ವಿಕೆಟ್ ದಾಖಲೆಗೆ ಕಾರಣರಾಗಲಿದ್ದಾರೆ. ಪಂದ್ಯ 3 pmಗೆ ಆರಂಭಗೊಳ್ಳಲಿದೆ.

ನ್ಯೂಜಿಲೆಂಡ್ ತಂಡ: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮುನ್ರೊ, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಟಾಮ್ ಲಾಥಮ್ (ವಿಕೆ), ಜೇಮ್ಸ್ ನೀಶಮ್, ಕಾಲಿನ್ ಡೆ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಇಶ್ ಸೋಧಿ / ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.

ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆ), ಹಾಶಿಮ್ ಆಮ್ಲಾ, ಐಡೆನ್ ಮಾರ್ಕ್ರಮ್, ಫಾ ಡು ಪ್ಲೆಸಿಸ್ (ಸಿ), ರಾಸ್ಸಿ ವಾನ್ ಡೆರ್ ಡುಸೆನ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಕ್ರಿಸ್ ಮೋರಿಸ್, ಕಗಿಸೊ ರಬಾಡಾ, ಲುಂಗಿ ಎನ್‌ಗಿಡಿ, ಇಮ್ರಾನ್ ತಾಹಿರ್.

{headtohead_cricket_4_6}

Story first published: Wednesday, June 19, 2019, 16:29 [IST]
Other articles published on Jun 19, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+