
ಲಂಡನ್, ಜೂನ್ 5: ಐಸಿಸಿ ವಿಶ್ವಕಪ್ ನಲ್ಲಿ ತಂಡದ ಪ್ರಚಂಡ ಬಲವಾಗಬೇಕಿದ್ದ ವೇಗಿ ಡೇಲ್ ಸ್ಟೇನ್ ಇಲ್ಲದಿರುವುದು ದಕ್ಷಿಣ ಆಫ್ರಿಕಾಕ್ಕೆ ದೊಡ್ಡ ಸಮಸ್ಯೆಯಾಗಿದೆ. ಡೇಲ್ ಸ್ಟೇನ್ ವಿಶ್ವಕಪ್‌ನಿಂದ ಹೊರಗುಳಿದಿರುವುದಕ್ಕೆ ದಕ್ಷಿಣ ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ದೂರಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಸೌತಾಂಪ್ಟನ್ ನಲ್ಲಿ ಜೂನ್ 5ರಂದು ನಡೆಯಲಿರುವ ಭಾರತ vs ದಕ್ಷಿಣ ಆಫ್ರಿಕಾ ವಿಶ್ವಕಪ್ ಪಂದ್ಯದ ವೇಳೆ 35ರ ಹರೆಯದ ವೇಗಿ ಡೇಲ್ ಸ್ಟೇನ್ ಭುಜದ ಗಾಯದ ಸಮಸ್ಯೆಯಲ್ಲಿ ಬಳಲುತ್ತಿದ್ದಾರೆ. ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾ ವಿರುದ್ಧ ಸೋತಿದ್ದರಿಂದ ದಕ್ಷಿಣ ಆಫ್ರಿಕಾ ಇನ್ನೂ ಒತ್ತಡದಲ್ಲಿದೆ.
ಭಾರತ vs ದಕ್ಷಿಣ ಆಫ್ರಿಕಾ, ಜೂನ್ 5, Live ಸ್ಕೋರ್‌ಕಾರ್ಡ್ ಇಲ್ಲಿದೆ
ಭಾರತ ವಿರುದ್ಧದ ಪಂದ್ಯಕ್ಕಾಗಿ ಡೇಲ್ ಸ್ಟೇನ್ ಬದಲಿಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಎಡಗೈ ವೇಗಿ ಬ್ಯೂರಾನ್ ಹೆಂಡ್ರಿಕ್ಸ್ ಅವರನ್ನು ಹೆಸರಿಸಲಾಗಿದೆ. ಆದರೆ ಡು ಪ್ಲೆಸಿಸ್, ಸ್ಟೇನ್ ಗಾಯಕ್ಕೆ ಐಪಿಎಲ್ ಟೂರ್ನಿಯನ್ನು ಹೊಣೆಯನ್ನಾಗಿಸಿದ್ದಾರೆ. ಯಾಕೆಂದರೆ ಐಪಿಎಲ್ ವೇಳೆ ಸ್ಟೇನ್ ಗಾಯಕ್ಕೀಡಾಗಿ ಟೂರ್ನಿಯಿಂದ ಹೊರ ನಡೆದಿದ್ದರು.
'ದುರದೃಷ್ಟವೆಂದರೆ ಸ್ಟೇನ್‌ಗೆ ಗಾಯದ ಸಮಸ್ಯೆ ಐಪಿಎಲ್ ವೇಳೆ ಶುರುವಾಯ್ತು. ಐಪಿಎಲ್ ನಲ್ಲಿ ಎರಡು ಪಂದ್ಯಗಳಲ್ಲಿ ಆಡಿದ ಡೇಲ್ ಗಾಯಕ್ಕೀಡಾದರು. ಡೇಲ್ ಒಂದುವೇಳೆ ಅಲ್ಲಿ ಆಡದಿದ್ದರೆ, ಇವತ್ತು ನಮ್ಮ ಜೊತೆ ಅವರು ತಂಡದಲ್ಲಿರುತ್ತಿದ್ದರು' ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಡು ಪ್ಲೆಸಿಸ್ ಹೇಳಿಕೊಂಡಿದ್ದಾರೆ.
ಐಪಿಎಲ್‌ನ ದ್ವಿತೀಯಾರ್ಧದ ವೇಳೆಗೆ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ತಂಡವನ್ನು ಪ್ರತಿನಿಧಿಸಿದ್ದ ಡೇಲ್ ಸ್ಟೇನ್ ಎರಡು ಪಂದ್ಯಗಳಲ್ಲಿ ಚೆಂಡು ಎಸೆದಿದ್ದರು. ಆ ಎರಡೂ ಪಂದ್ಯಗಳಲ್ಲೂ ಆರ್ಸಿಬಿ ಗೆಲುವಿಗೆ ಕಾರಣವೂ ಆಗಿದ್ದರು. ಆದರೆ ಮತ್ತೆ ಗಾಯದ ಸಮಸ್ಯೆಗೀಡಾದ ಸ್ಟೇನ್ ಟೂರ್ನಿಯಿಂದಲೇ ಹೊರ ಬೀಳಬೇಕಾಗಿ ಬಂದಿತ್ತು.