ವಿಶ್ವಕಪ್: ಹಳದಿ ಬಣ್ಣದ 'ಲಕ್ಕಿ' ಜೆರ್ಸಿಯನ್ನೇ ಮುಂದುವರೆಸಲಿದೆ ಶ್ರೀಲಂಕಾ

ಲಂಡನ್, ಜೂನ್ 27: ಇಂಗ್ಲೆಂಡ್ ವಿರುದ್ಧ ಹಳದಿ ಶರ್ಟ್ ಧರಿಸಿ ಮೈದಾನಕ್ಕಿಳಿದಿದ್ದ ಶ್ರೀಲಂಕಾ ಆ ಪಂದ್ಯವನ್ನು ಜಯಿಸಿತ್ತು. ಹೀಗಾಗಿ ಮುಂದಿನ ಪಂದ್ಯಗಳಲ್ಲೂ ಅದೇ ಲಕ್ಕಿ ಜೆರ್ಸಿ ಧರಿಸಲು ಶ್ರೀಲಂಕಾ ನಿರ್ಧರಿಸಿದೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನಿಂದ ಇದಕ್ಕೆ ಅನುಮತಿಯೂ ಲಭಿಸಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಜೂನ್ 21ರಂದು ಲೀಡ್ಸ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ 20 ರನ್ ಗೆಲುವನ್ನಾಚರಿಸಿತ್ತು. ಇದಕ್ಕೂ ಮುನ್ನ ಶ್ರೀಲಂಕಾ ಕೇವಲ 1 ಪಂದ್ಯ ಗೆದ್ದು ಸೆಮಿಫೈನಲ್ ಆಸೆಯನ್ನೇ ಕೈ ಬಿಟ್ಟಿತ್ತು. ಆದರೆ ಇಂಗ್ಲೆಂಡ್ ಎದುರು ಗೆದ್ದಿದ್ದರಿಂದ ಲಂಕಾ ಸೆಮಿಫೈನಲ್ ಆಸೆಗೆ ಜೀವ ಬಂದಿತ್ತು.
'ಹಳದಿ ಬಣ್ಣದ ಜೆರ್ಸಿಯಲ್ಲೇ ಮುಂದುವರೆಯುವ ಶ್ರೀಲಂಕಾ ಕೋರಿಕೆಗೆ ನಾವು ಅನುಮೋದನೆ ನೀಡಿದ್ದೇವೆ' ಎಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ತಿಳಿಸಿದೆ. ಶ್ರೀಲಂಕಾ ತಂಡದ ಮೊದಲ ಆಯ್ಕೆಯ ಜೆರ್ಸಿ ಗಾಢ ನೀಲಿ ಬಣ್ಣದಿಂದ ಕೂಡಿತ್ತು. ಆದರೆ ವಿಶ್ವಕಪ್ ಇನ್ನುಳಿದ ಪಂದ್ಯಗಳಲ್ಲಿ ಲಂಕಾ ಹಳದಿ ಬಣ್ಣ ಎದ್ದು ತೋರುವ ಜೆರ್ಸಿಯಲ್ಲೇ ಮೈದಾನಕ್ಕಿಳಿಯಲಿದೆ.
ಟೂರ್ನಿ ಆರಂಭದಿಂದಲೂ ಎಲ್ಲಾ ತಂಡಗಳೂ ಎರಡು ವಿಭಿನ್ನ ಬಣ್ಣದ ಜೆರ್ಸಿ ಆಯ್ಕೆ ಇರಿಸಿಕೊಳ್ಳಲು ಐಸಿಸಿ ತಿಳಿಸಿತ್ತು. ಆದರೆ ಉಳಿದ ತಂಡಗಳು ನೂತನ ಜೆರ್ಸಿಯನ್ನು ಕೆಲ ಪಂದ್ಯಗಳಲ್ಲಷ್ಟೇ ಧರಿಸುತ್ತಿವೆ. 1996ರ ಚಾಂಪಿಯನ್ ತಂಡ ಶ್ರೀಲಂಕಾ ಮುಂದೆ ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ (ಜೂನ್ 28) ಪಂದ್ಯವನ್ನಾಡಲಿದೆ. ದಕ್ಷಿಣ ಆಫ್ರಿಕಾ ತಂಡ ಈಗಾಗಲೇ ಸೆಮಿಫೈನಲ್ ಅವಕಾಶವನ್ನು ಕೈತಪ್ಪಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications