ಸ್ಮಿತ್-ವಾರ್ನರ್‌ಗಾಗಿ ಅಭಿಮಾನಿಗಳಲ್ಲಿ ಮನಮುಟ್ಟಿ ಮನವಿ ಮಾಡಿದ ಅಲಿ

ಲಂಡನ್, ಮೇ 21: ಇಂಗ್ಲೆಂಡ್ ಆಲ್ ರೌಂಡರ್ ಮೊಯೀನ್ ಅಲಿ ಕ್ರಿಕೆಟ್/ಆಟಗಾರರ ಮೇಲಿನ ಪ್ರೀತಿ-ಕಾಳಜಿಗಾಗಿ ಕ್ರಿಕೆಟ್ ಪ್ರಿಯರ ಮನ ಗೆದ್ದಿದ್ದಾರೆ. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್‌ಗಳಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಕುರಿತು ವಿಶ್ವಕಪ್ ಅಭಿಮಾನಿಗಳಲ್ಲಿ ಅಲಿ ಮನಮುಟ್ಟುವ ಹಾಗೆ ಮನವಿಯೊಂದನ್ನು ಮಾಡಿದ್ದಾರೆ.
ವಿಶ್ವಕಪ್ ವೀಕ್ಷಿಸುತ್ತಿರುವ ಕ್ರಿಕೆಟ್ ಅಭಿಮಾನಿಗಳು ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಮೇಲಿನ ನಿಷೇಧ ಶಿಕ್ಷೆಗೆ ಸಂಬಂಧಿಸಿ ಅವರನ್ನು ನೋಯಿಸುವ ಗೋಜಿಗೆ ಹೋಗಬೇಡಿ. ಆ ವಿಚಾರವನ್ನು ಬದಿಗಿಟ್ಟು ಇಬ್ಬರೂ ಆಟಗಾರರನ್ನು ಗೌರವದಿಂದ ಕಾಣಿ ಎಂದು ಮೊಯೀನ್ ಅಲಿ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
ಇಂಗ್ಲೆಂಡ್ ಆಟಗಾರ ಅಲಿ ಅಭಿಮಾನಿಗಳಲ್ಲಿ ಮಾಡಿಕೊಂಡಿರುವ ಮನವಿ, ಅದರ ಹಿಂದಿರುವ ಭಾವ ಸೂಕ್ಷ್ಮತೆಯ ಎಳೆ ಒಂದುಕ್ಷಣ ನಮ್ಮ ಏಳು-ಬೀಳುಗಳನ್ನೇ ನೆನಪಿಸುವಂತಿದೆ.

ನಾವೆಲ್ಲರೂ ಭಾವನಾತ್ಮಕ ಜೀವಿಗಳು
'ನಾವೆಲ್ಲರೂ ತಪ್ಪು ಮಾಡುವವರೆ. ನಾವು ಮನುಷ್ಯರು, ನಮ್ಮಲ್ಲಿ ಭಾವನೆಗಳಿವೆ. ನಾನವರಿಬ್ಬರನ್ನೂ (ಸ್ಮಿತ್-ವಾರ್ನರ್) ಹತ್ತಿರದಿಂದ ನೋಡಿದ್ದೇನೆ. ಇಬ್ಬರೂ ನಿಜಕ್ಕೂ ಒಳ್ಳೆಯವರು. ಟೂರ್ನಿಯ ವೇಳೆ ಅವರನ್ನು ಯೋಗ್ಯವಾಗಿ-ಗೌರವದಿಂದ ಕಾಣುತ್ತೀರಿ ಎಂದು ಭಾವಿಸುತ್ತೇನೆ' ಎಂದು ಅಲಿ ಅಭಿಮಾನಿಗಳಲ್ಲಿ ಕೋರಿಕೊಂಡಿದ್ದಾರೆ.

ಒಂದು ವರ್ಷದ ನಿಷೇಧ ಶಿಕ್ಷೆ
ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಆತಿಥೇಯರ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿ ವೇಳೆ ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ಸ್ಮಿತ್, ವಾರ್ನರ್ ಇಬ್ಬರೂ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ವರ್ಷದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಈ ವರ್ಷ ಇಬ್ಬರ ಮೇಲಿನ ಶಿಕ್ಷೆಯೂ ಕೊನೆಗೊಂಡಿದೆ. ಇಬ್ಬರೂ ದಾಂಡಿಗರು ನಿಷೇಧ ಶಿಕ್ಷೆ ಮುಗಿಯುತ್ತಲೇ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ಇಬ್ಬರೂ ಆಸೀಸ್ ವಿಶ್ವಕಪ್ ತಂಡದಲ್ಲಿ ಸ್ಥಾನವೂ ಗಿಟ್ಟಿಸಿಕೊಂಡಿದ್ದಾರೆ.

ಹುಳುಕು ಬದಿಗಿಟ್ಟು ಹುರಿದುಂಬಿಸೋಣ
ವಿಶ್ವಕಪ್ ನಂತ ದೊಡ್ಡ ಟೂರ್ನಿ ನಮ್ಮ ಮುಂದಿರುವಾಗ ನಾವಿಲ್ಲಿ ಕ್ರಿಕೆಟ್ ಬಗ್ಗೆ ಮಾತ್ರ ಮಾತಾಡೋಣ. ಉಳಿದ ಹುಳುಕುಗಳನ್ನು ಬದಿಗಿಡೋಣ' ಎಂದು ಮೊಯೀನ್ ಅಲಿ ಅಭಿಮಾನಿಗಳನ್ನು ಉದ್ದೇಶಿಸಿ ಹೇಳಿದ್ದಾರೆ. ಜೂನ್ 1ರಂದು ಬ್ರಿಸ್ಟಲ್ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ತಂಡಗಳು ಟೂರ್ನಿಯಲ್ಲಿ ಮೊದಲ ಮುಖಾಮುಖಿಯಾಗುತ್ತಿವೆ.

ಮಾನಸಿಕವಾಗಿ ಗಟ್ಟಿಯಾಗಬೇಕಿದೆ
ಸ್ಮಿತ್-ವಾರ್ನರ್ ನಿಷೇಧ ಶಿಕ್ಷೆಯ ಕುರಿತು ಮಾತನಾಡಿದ್ದ ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್, 'ಮುಂಬರಲಿರುವ ವಿಶ್ವಕಪ್ ಟೂರ್ನಿಯ ವೇಳೆ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಇಬ್ಬರೂ ಮಾನಸಿಕವಾಗಿ ಗಟ್ಟಿಯಾಗಬೇಕಿದೆ ಎಂದಿದ್ದರು. ಇದರ ಬೆನ್ನಲ್ಲೇ ಮೊಯೀನ್ ಅಲಿ ಕೂಡ ಆಸ್ಟ್ರೇಲಿಯಾ ಆಟಗಾರರ ಪರ ವಿನಂತಿ ಮಾಡಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications