Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ಸಚಿನ್ ತೆಂಡೂಲ್ಕರ್ ದಾಖಲೆ ಸರಿದೂಗಿಸಲಿದ್ದಾರೆ ವಿರಾಟ್ ಕೊಹ್ಲಿ!

ICC World Cup 2019 : ರೋಹಿತ್ ಔಟ್..! ವಿರಾಟ್ ಇನ್..! | Oneindia Kannada
ICC World Cup: Virat Kohli on verge of equalling Sachin Tendulkar’s record

ಲಂಡನ್, ಜೂನ್ 8: ಕ್ರಿಕೆಟ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ವಿರಾಟ್ ಕೊಹ್ಲಿ ಭಾನುವಾರ (ಜೂನ್ 9) ನಡೆಯಲಿರುವ ಭಾರತ vs ಆಸ್ಟ್ರೇಲಿಯಾ ಪಂದ್ಯದಲ್ಲಿ ಮತ್ತೊಂದು ಅಪರೂಪದ ದಾಖಲೆಗೆ ಕಾರಣರಾಗಲಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿಗೆ ಸಚಿನ್ ದಾಖಲೆ ಸರಿದೂಗಿಸಲು ಅವಕಾಶವಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯಲಿರುವ ವಿಶ್ವಕಪ್ 14ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದರೆ ಸಚಿನ್ ದಾಖಲೆ ಸರಿಸಮವಾಗಲಿದೆ. ಯಾಕೆಂದರೆ ಕೊಹ್ಲಿ ಈ ಸಾಧನೆ ಮೂಲಕ ಆಸೀಸ್ ವಿರುದ್ಧ ಹೆಚ್ಚು ಏಕದಿನ ಶತಕ ಬಾರಿಸಿದ ಭಾರತದ ಬ್ಯಾಟ್ಸ್ಮನ್‌ ಆಗಿ ಸಚಿನ್ (9 ಶತಕ) ಜೊತೆ ಸ್ಥಾನ ಹಂಚಿಕೊಳ್ಳಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಬಾರಿಸಿದ ಏಕದಿನ ಒಟ್ಟು ರನ್ ಗಮನಿಸಿದರೆ, 34 ಪಂದ್ಯಗಳಲ್ಲಿ 53.06ರ ಸರಾಸರಿಯಂತೆ ಕೊಹ್ಲಿ 1,645 ರನ್ ಗಳಿಸಿದ್ದಾರೆ. ಇದರೊಂದಿಗೆ ಆಸೀಸ್ ಎದುರು ಏಕದಿನ ಅತ್ಯಧಿಕ ರನ್ ಬಾರಿಸಿದ ಮೂರನೇ ಭಾರತೀಯನಾಗಿಯೂ ವಿರಾಟ್ ಗುರುತಿಸಿಕೊಂಡಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಒಟ್ಟು 5 ಸಾರಿ ಚಾಂಪಿಯನ್ ಪಟ್ಟಿ ಅಲಂಕರಿಸಿದ್ದರೆ, ಭಾರತ 2 ಸಾರಿ ಟ್ರೋಫಿ ಗೆದ್ದಿದೆ. ಹೀಗಾಗಿ ಈಬಾರಿ ವಿಶ್ವಕಪ್ ಪ್ರಮುಖ ಸ್ಪರ್ಧಿ ತಂಡಗಳಲ್ಲಿರುವ ಆಸೀಸ್-ಭಾರತ ಕಾಳಗ ಕುತೂಹಲ ಮೂಡಿಸಿದೆ. ಪಂದ್ಯ 3 pmಗೆ ಆರಂಭಗೊಳ್ಳಲಿದೆ.

{headtohead_cricket_3_1}

Story first published: Saturday, June 8, 2019, 22:25 [IST]
Other articles published on Jun 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+