For Quick Alerts
ALLOW NOTIFICATIONS  
For Daily Alerts
 

ಐಸಿಸಿ ವಿಶ್ವಕಪ್: ಟೂರ್ನಿಯ ಅತೀ ಬಲಿಷ್ಠ ತಂಡ ಹೆಕ್ಕಿದ ವಿರಾಟ್ ಕೊಹ್ಲಿ

ವಿಶ್ವಕಪ್ ನಲ್ಲಿ ಬಲಿಷ್ಠ ತಂಡ ಯಾವುದು ಗೊತ್ತಾ..? | Oneindia Kannada
ICC World Cup: Virat Kohli picks the ‘strongest’ side of the tournament

ಲಂಡನ್, ಮೇ 23: ಮೇ 30ರಿಂದ ಆರಂಭಗೊಳ್ಳುತ್ತಿರುವ ಪುರುಷರ ಐಸಿಸಿ ವಿಶ್ವಕಪ್ ಟೂರ್ನಿಯ ಅತೀ ಬಲಿಷ್ಠ ತಂಡವನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೆಕ್ಕಿ ತೆಗೆದಿದ್ದಾರೆ. ತವರಿನಲ್ಲೇ ಪಂದ್ಯ ನಡೆಯುತ್ತಿರುವುದರಿಂದ ಇಂಗ್ಲೆಂಡ್‌ ತಂಡ ಟೂರ್ನಿಯ ಅತೀ ಬಲಿಷ್ಠ ತಂಡವೆನಿಸಿದೆ ಕೊಹ್ಲಿ ಹೇಳಿದ್ದಾರೆ.

'ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಈ ಪಂದ್ಯಾಟ ನಡೆಯುತ್ತಿರುವುದರಿಂದ ಇಂಗ್ಲೆಂಡ್‌ ಪ್ರಬಲ ತಂಡವಾಗಿ ಕಾಣಿಸಿದೆ. ಹಾಗೆ ನೋಡಿದರೆ ಎಲ್ಲಾ ತಂಡಗಳೂ ಬಲಿಷ್ಠ ಮತ್ತು ಸಮತೋಲಿತವಾದುದು' ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಕೊಹ್ಲಿ ತಿಳಿಸಿದರು.

ರೌಂಡ್ ರಾಬಿನ್ ಮಾದರಿಯ ಟೂರ್ನಿಯಲ್ಲಿ ಎಲ್ಲಾ 10 ತಂಡಗಳೂ ಲೀಗ್ ಹಂತದಲ್ಲಿ ಪರಸ್ಪರ ಒಮ್ಮೆ ಕಾದಾಡುತ್ತಿವೆ. ಈ ಬಗ್ಗೆಯೂ ಮಾತನಾಡಿದ ಕೊಹ್ಲಿ, ಪ್ರತೀ 10 ತಂಡಗಳೂ ಲೀಗ್ ಹಂತದಲ್ಲಿ ಒಮ್ಮೆ ಮುಖಾಮುಖಿಯಾಗುತ್ತಿರುವುದರಿಂದ ಈ ಬಾರಿಯ ವಿಶ್ವಕಪ್ ಭಾರೀ ಜಿದ್ದಾಜಿದ್ದಿಯದ್ದಾಗಲಿದೆ' ಎಂದು ಎಂದರು.

ಏಕದಿನ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದುಕೊಂಡು ಇಂಗ್ಲೆಂಡ್ ತಂಡ ವಿಶ್ವಕಪ್‌ ಕಣಕ್ಕಿಳಿಯುತ್ತಿದೆ. ಭಾರತ ತಂಡ ದ್ವಿತೀಯ ರ್ಯಾಂಕ್‌ನಲ್ಲಿದ್ದುಕೊಂಡು ಕಾದಾಡುತ್ತಿದೆ. ವಿಶ್ವಕಪ್ ಉದ್ಘಾಟನಾ ಪಂದ್ಯವಾಗಿ ಮೇ 30ರಂದು ಆತಿಥೇಯ ಇಂಗ್ಲೆಂಡ್, ದಕ್ಷಿಣ ಆಫ್ರಿಕಾದ ಸವಾಲು ಸ್ವೀಕರಿಸಲಿದೆ.

Story first published: Friday, May 24, 2019, 19:46 [IST]
Other articles published on May 24, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+