Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ದ.ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಲಕ್ಷ್ಮಣ್ ನೆಚ್ಚಿನ ಭಾರತ ತಂಡವಿದು!

ICC World Cup: VVS Laxman picks India’s Playing XI for South Africa match

ನವದೆಹಲಿ, ಜೂನ್ 1: ಜೂನ್ 5ರಂದು ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡುವ ಮೂಲಕ ಐಸಿಸಿ ವಿಶ್ವಕಪ್ 2019ರ ಸ್ಪರ್ಧೆ ಆರಂಭಿಸಲಿದೆ. ಈ ಪಂದ್ಯಕ್ಕೆ ಸಂಬಂಧಿಸಿ ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ನೆಚ್ಚಿನ ತಂಡ ಹೆಕ್ಕಿ ತೆಗೆದಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಲಕ್ಷ್ಮಣ್ ಆರಿಸಿರುವ ಈ ತಂಡ ಬಲಿಷ್ಠವಾಗಿದೆಯಾದರೂ ಇಲ್ಲಿ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಅವರನ್ನು ತಂದು ಲಕ್ಷ್ಮಣ್ ಅಚ್ಚರಿ ಮೂಡಿಸಿದ್ದಾರೆ. ಯಾಕೆಂದರೆ ಈ ತಂಡದಲ್ಲಿ ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ಹೀಗೆ ಒಟ್ಟು ಮೂವರು ಸ್ಪಿನ್ನರ್‌ಗಳು ಕಾಣಿಸಿಕೊಂಡಿದ್ದಾರೆ.

ಇನ್ನು ವೇಗಿಗಳನ್ನು ಗಮನಿಸಿದರೆ ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ ಇದ್ದರೆ, ಹಾರ್ದಿಕ್ ಪಾಂಡ್ಯ ಮೂರನೇ ಆಯ್ಕೆಯ ವೇಗಿಯಾಗಿ ತಂಡದಲ್ಲಿದ್ದಾರೆ. ಮತ್ತೊಬ್ಬ ಆಲ್ ರೌಂಡರ್ ವಿಜಯ್ ಶಂಕರ್, ಕೇದಾರ್ ಜಾಧವ್, ಭುವನೇಶ್ವರ್ ಕುಮಾರ್ ದಿನೇಶ್ ಕಾರ್ತಿಕ್ ಇವರ್ಯಾರೂ ಲಕ್ಷ್ಮಣ್ ಆಯ್ಕೆಯ ತಂಡದಲ್ಲಿಲ್ಲ. ಉಳಿದಂತೆ ಟೀಮ್ ಇಂಡಿಯಾ ಎಂದಿನಂತಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ 'ವೆರಿ ವೆರಿ ಸ್ಪೆಷಲ್' ತಂಡ
ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಸಿ), ಕೆಎಲ್ ರಾಹುಲ್, ಎಂಎಸ್ ಧೋನಿ (ವಿ.ಕೆ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್‌ ಬುಮರಾ, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್.

Story first published: Saturday, June 1, 2019, 23:56 [IST]
Other articles published on Jun 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+