Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಕ್ರಿಕೆಟ್ ವಿಶ್ವಕಪ್ 2019: ಡೇವಿಡ್ ವಾರ್ನರ್ ಕೈಯಲ್ಲಿದೆ ಸೆನ್ಸರ್ ಬ್ಯಾಟ್!

ICC World Cup: Warner using bat ‘sensor’ to counter opposition threat

ಬೆಂಗಳೂರು, ಜೂನ್ 9: ವಿಶ್ವಕಪ್‌ಗೆ ಅತ್ಯುತ್ತಮ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ತಮ್ಮ ಬ್ಯಾಟ್‌ಗೆ ಸೆನ್ಸರ್ (ಸಂವೇದಕ) ಅಳವಡಿಸಿಕೊಂಡಿದ್ದಾರೆ. ಆಟದ ವೇಳೆ ಬ್ಯಾಕ್ ಲಿಫ್ಟ್ ಆ್ಯಂಗಲ್ ಮತ್ತು ಬ್ಯಾಟ್‌ನ ಅತ್ಯಧಿಕ ವೇಗ ಗಮನಿಸಲು ಈ ಸೆನ್ಸರ್ ನೆರವಾಗಲಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಬೆಂಗಳೂರಿನ 'ಸ್ಮಾರ್ಟ್ ಕ್ರಿಕೆಟ್' ಎನ್ನುವ ಕಂಪನಿ ಈ ಸೆನ್ಸರನ್ನು ಪರಿಚಯಿಸಿದೆ. ಚಿಪ್ ಮಾದರಿಯಲ್ಲಿರುವ ಸೆನ್ಸರ್ ಸಾಧನವಿದು. ಈ ಸೆನ್ಸರ್ ಚಿಪ್ಪನ್ನು ಬ್ಯಾಟ್ ಮೇಲ್ಭಾಗದಲ್ಲಿ ಅಳವಡಿಸಲಾಗುತ್ತದೆ. ಜಸ್‌ಪ್ರೀತ್ ಬೂಮ್ರಾ ಅವರಂತ ಖ್ಯಾತ ವೇಗಿಗಳ ಎದುರು ಆಡುವಾಗ ಬ್ಯಾಟ್ ಚಲಿಸುವಿಕೆಯನ್ನು ಗಮನಿಸಲು ಈ ಸಂವೇದಕ ನೆರವಾಗುತ್ತದೆ.

ಭಾರತ vs ಆಸ್ಟ್ರೇಲಿಯಾ ಪಂದ್ಯ, ಜೂನ್ 9, Live ಸ್ಕೋರ್‌ಕಾರ್ಡ್

1
43657

ಉದಾಹರಣೆಗೆ ಏಕದಿನದಲ್ಲಿ ನಂ.1 ಸ್ಥಾನದಲ್ಲಿರುವ ಬೌಲರ್ ಜಸ್‌ ಪ್ರೀತ್ ಬೂಮ್ರಾ ಅವರ ಯಾರ್ಕರ್ ಎಸೆತಕ್ಕೆ ಲಭ್ಯ ಡೇಟಾದ ಪ್ರಕಾರ ಬ್ಯಾಟ್ ಬೀಸುವಿಕೆಯ ವೇಗ ಗಂಟೆಗೆ 70-75 ಕಿ.ಮೀ. ಇದ್ದರೆ, ವಾರ್ನರ್ ಇದೇ ಎಸೆತಕ್ಕೆ 85-90 ಕಿ.ಮೀ. ವೇಗದಲ್ಲಿ ಬ್ಯಾಟ್ ಬೀಸುತ್ತಿದ್ದಾರೆ ಎಂಬ ಮಾಹಿತಿಯನ್ನು ಈ ಸೆನ್ಸರ್ ಸಾಧನ ಮೊಬೈಲ್ ಆ್ಯಪ್‌ನಲ್ಲಿ ದಾಖಲಿಸುತ್ತದೆ.

ಸೆನ್ಸರ್ ನಿಂದ ಬ್ಯಾಟಿಂಗ್ ನಲ್ಲಿ ಸುಧಾರಣೆ ಕಾಣಲು ಸಹಾಯವಾಗುತ್ತದೆ. ಈ ಕಾರಣಕ್ಕಾಗಿಯೇ 2017ರಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬ್ಯಾಟ್ ಸೆನ್ಸರ್‌ಗೆ ಅನುಮತಿ ನೀಡಿತ್ತು. ಆದರೆ ಕಳೆದೆರಡು ವರ್ಷಗಳಿಂದಲೂ ಹೆಚ್ಚಿನ ಬ್ಯಾಟ್ಸ್ಮನ್‌ಗಳು ಬ್ಯಾಟ್ ಸೆನ್ಸರ್‌ನತ್ತ ಆಸಕ್ತಿ ತೋರಿರಲಿಲ್ಲ.

ಭಾನುವಾರ (ಜೂನ್ 9) ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ 14ನೇ ಪಂದ್ಯದ ಸವಾಲು ಸ್ವೀಕರಿಸಿವೆ. ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಸೆನ್ಸರ್ ಬ್ಯಾಟ್ ಬಳಸಲಿದ್ದಾರೆ ಎನ್ನಲಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತ್ತು.

Story first published: Sunday, June 9, 2019, 16:47 [IST]
Other articles published on Jun 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+