Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ 2019: ಮಾರ್ಟಿನ್ ಗಪ್ಟಿಲ್ ಪ್ರಕಾರ ಭಾರತ ಈ ಸಾರಿ ಕಪ್‌ ಗೆಲ್ಲಲ್ವಾ?!

ICC World Cup: Will do everything to win the trophy this time, says Guptill

ಲಂಡನ್, ಮೇ 27: ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ವಾರ್ಮ್ ಅಪ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಭಾರತದ ವಿರುದ್ಧ 77 ಎಸೆತಗಳು ಬಾಕಿಯಿರುವಾಗಲೇ 6 ವಿಕೆಟ್ ಗೆಲುವನ್ನಾಚರಿಸಿತ್ತು. ಅದೇ ಜೋಶಿನಲ್ಲಿರುವ ಕಿವೀಸ್ ಸ್ಫೋಟಕ ಬ್ಯಾಟ್ಸ್ಮನ್‌ ಮಾರ್ಟಿನ್ ಗಪ್ಟಿಲ್ 'ಈ ಸಾರಿ ಕಪ್ ಬಿಡಲ್ಲ' ಎಂದಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಪಿಟಿಐ ಜೊತೆ ಮಾತನಾಡಿದ ಗಪ್ಟಿಲ್, 'ಈ ಬಾರಿ ನಮ್ಮದು ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡವೆಂದು ನಾನು ಹೇಳುತ್ತಿಲ್ಲ. ಆದರೆ ನಾವು ಬಲಿಷ್ಠ ತಂಡಗಳ ಸಾಲಿನಲ್ಲಿದ್ದೇವೆ. ಈ ವಿಶ್ವಕಪ್ ಅತ್ಯಂತ ಕಠಿನ ಸವಾಲಿನ ಟೂರ್ನಿ ಹೌದು. ಆದರೆ ನಮ್ಮ ಕೈ ಮೀರಿ ನಾವು ಈ ಸಾರಿ ಟ್ರೋಫಿ ಗೆಲ್ಲೋ ಎಲ್ಲಾ ಪ್ರಯತ್ನ ಮಾಡುತ್ತೇವೆ' ಎಂದಿದ್ದಾರೆ.

ಇಂಗ್ಲೆಂಡ್‌ನದ್ದು ಬ್ಯಾಟಿಂಗ್ ಪಿಚ್ ಆಗಿರೋದ್ರಿಂದ ಮಾರ್ಟಿನ್ ಗಪ್ಟಿಲ್ ಅವರಂತ ಆಟಗಾರರು ತಂಡಕ್ಕೆ ರನ್ ಕೊಡುಗೆ ನೀಡುವುದನ್ನು ಸಹಜವಾಗೇ ನಿರೀಕ್ಷಿಸಬಹುದಾಗಿದೆ. ಭಾರತ ವಿರುದ್ಧದ ವಾರ್ಮ್ ಅಪ್ ಪಂದ್ಯದಲ್ಲಿ ಗಪ್ಟಿಲ್ 22 ರನ್‌ಗೆ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಕೇನ್ ವಿಲಿಯಮ್ಸನ್ (67 ರನ್) ಮತ್ತು ರಾಸ್ ಟೇಲರ್ (71) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರಿಂದ ಪಂದ್ಯವನ್ನು ಕಿವೀಸ್ ಗೆದ್ದಿತ್ತು.

ವಿಶ್ವಕಪ್ ಟ್ರೋಫಿ ಗೆದ್ದ ತಂಡಗಳಲ್ಲಿ ನ್ಯೂಜಿಲ್ಯಾಂಡ್ ಇಲ್ಲ. ಇದೇ ಕಾರಣಕ್ಕೆ ಗಪ್ಟಿಲ್ ಈ ಸಾರಿ ಶತಾಯ ಗತಾಯ ಟ್ರೋಫಿ ಗೆದ್ದುಕೊಳ್ಳಲು ಯತ್ನಿಸುತ್ತೇವೆ. ಈ ಸಾರಿ ಮಾತ್ರ ಪ್ರಶಸ್ತಿ ಬಿಟ್ಟು ಕೊಡೋಲ್ಲ ಎಂದಿದ್ದಾರೆ. ಹಾಗೊಂದು ವೇಳೆ ಕಿವೀಸ್ ಈ ಸಾರಿ ಚಾಂಪಿಯನ್ ಆದರೆ, ಭಾರತದ ಕಪ್ಪಿನಾಸೆಗೆ ತಣ್ಣೀರಲ್ಲವೆ? ಹಾಗಂತ ಟೀಮ್ ಇಂಡಿಯಾ ಅಷ್ಟು ಸುಲಭವಾಗಿ ಟ್ರೋಫಿ ಬಿಟ್ಟುಕೊಡಲಾರದು ಅನ್ನೋದಂತೂ ಖರೆ.

Story first published: Monday, May 27, 2019, 18:29 [IST]
Other articles published on May 27, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+