Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಬಿಸಿಸಿಐ ಆಯ್ಕೆಗಾರರು ಆತನನ್ನು ಮರೆಯಬಾರದು'; ಭುವಿ ಆಯ್ಕೆಯಾಗದಿರುವುದಕ್ಕೆ ಮಾಜಿ ವಿಶ್ವಕಪ್ ವಿಜೇತ ಬೇಸರ!

ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ನಂತರ, ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾದ ಕಠಿಣ ಪ್ರವಾಸ ಕೈಗೊಳ್ಳಲಿದೆ. ಟೀಮ್ ಇಂಡಿಯಾಗೆ ಯಾವಾಗಲೂ ದಕ್ಷಿಣ ಆಫ್ರಿಕಾ ಪ್ರವಾಸ ಕಷ್ಟಕರವಾಗಿರುತ್ತದೆ.

ಹರಿಣ ಪಡೆಯ ವಿರುದ್ಧ ಭಾರತ ಕ್ರಿಕೆಟ್ ತಂಡ ಮೂರು ಮಾದರಿಯ ಸರಣಿಗಳನ್ನಾಡಲಿದ್ದು, ಮೂರು ಟಿ20, ಮೂರು ಏಕದಿನ ಮತ್ತ ಎರಡು ಟೆಸ್ಟ್ ಪಂದ್ಯಗಳನ್ನು ಎದುರಿಸಲಿದೆ. ಮೂರು ಮಾದರಿಯ ಸರಣಿಗಳಿಗೆ ಮೂರು ವಿಭಿನ್ನ ನಾಯಕರು ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲ ನಿದರ್ಶನವಾಗಿದೆ.

ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಭಾರತ ತಂಡದ ನಾಯಕರಾಗಲಿದ್ದರೆ, ಕೆಎಲ್ ರಾಹುಲ್ ಏಕದಿನ ಸರಣಿಯಲ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಕೊನೆಗೆ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವ ವಹಿಸಲಿದ್ದಾರೆ.

ICC World Cup Winner Disappointed by BCCI Selector Ignoring of Bhuvneshwar Kumar

ಹೆಚ್ಚಿನ ಯುವಕರಿಗೆ ಅವಕಾಶ ನೀಡಿರುವುದರಿಂದ ವೈಟ್ ಬಾಲ್ ತಂಡವು ವಿಶಿಷ್ಟ ನೋಟವನ್ನು ಹೊಂದಿದೆ. ಆ ನಿಟ್ಟಿನಲ್ಲಿ ಇದು ಬಿಸಿಸಿಐ ಆಯ್ಕೆ ಸಮಿತಿಯ ​​ಹೊಸ ವಿಧಾನವಾಗಿದೆ.

"ಆಯ್ಕೆಗಾರರು ಮೂರು ವಿಭಿನ್ನ ತಂಡಗಳನ್ನು ಆಯ್ಕೆ ಮಾಡಿರುವುದು ನನಗೆ ಆಶ್ಚರ್ಯವೇನಿಲ್ಲ. ಬಹುತೇಕ ಎಲ್ಲರ ಹೆಸರುಗಳು ಬಂದಿವೆ. ಅದರಲ್ಲಿ ಕೆಲವು ಆಟಗಾರರ ಹೆಸರಿಲ್ಲದಿರಬಹುದು," ಎಂದು 2011ರ ವಿಶ್ವಕಪ್ ವಿಜೇತ ಆಟಗಾರ ಆಶಿಶ್ ನೆಹ್ರಾ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಅವರು ಗುಜರಾತ್ ಟೈಟನ್ಸ್‌ಗೆ ಕೋಚ್ ಆಗಿದ್ದಾರೆ. ಭುವನೇಶ್ವರ್ ಕುಮಾರ್ ಒಬ್ಬ ವೇಗದ ಬೌಲರ್ ಆಗಿದ್ದು, ಅವರು ದಕ್ಷಿಣ ಆಫ್ರಿಕಾದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ನೋಡಬಹುದಿತ್ತು ಎಂದು ತಿಳಿಸಿದ್ದಾರೆ.

"ನನ್ನ ಮನಸ್ಸಿಗೆ ಒಂದೇ ಒಂದು ಹೆಸರು ಬರುತ್ತದೆ, ಏಕೆಂದರೆ ನೀವು ದಕ್ಷಿಣ ಆಫ್ರಿಕಾಕ್ಕೆ ಹೋಗುತ್ತಿದ್ದೀರಿ ಮತ್ತು ನೀವು ಸಾಕಷ್ಟು ವೇಗದ ಬೌಲರ್‌ಗಳನ್ನು ಆರಿಸಿದ್ದೀರಿ. ಆದರೆ ಮಿಸ್ ಆಗಿರುವ ಆ ಹೆಸರು ಭುವನೇಶ್ವರ್ ಕುಮಾರ್. ನಿಮಗೆ ಬೇರೆ ಹೊಸ ಬಾಲ್ ಆಯ್ಕೆಗಳಿವೆ. ಅರ್ಶ್‌ದೀಪ್ ಸಿಂಗ್ ಮತ್ತು ಮುಖೇಶ್ ಕುಮಾರ್ ಆಡುತ್ತಿದ್ದಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ," ಎಂದು ಆಶಿಶ್ ನೆಹ್ರಾ ಅಭಿಪ್ರಾಯಪಟ್ಟರು.

"ಆದಾಗ್ಯೂ, ನೀವು ಎಲ್ಲಾ ಆಯ್ಕೆಗಳನ್ನು ನೋಡಿದರೆ, ಭುವನೇಶ್ವರ್ ಕುಮಾರ್ ಅನುಭವಿ ಬೌಲರ್ ಆಗಿದ್ದು, ಅವರು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ನಾನು ಹೇಳುತ್ತೇನೆ. ಆಯ್ಕೆದಾರರು ಭುವಿ ಮೇಲೆ ನಿಗಾ ಇಡಬೇಕು. ವಿಶೇಷವಾಗಿ ನೀವು ಟಿ20 ಮತ್ತು 50-ಓವರ್‌ಗಳ ಸ್ವರೂಪಗಳ ಬಗ್ಗೆ ಮಾತನಾಡುವಾಗ ಆತನನ್ನು ಮರೆಯಬಾರದು," ಎಂದು ಆಶಿಶ್ ನೆಹ್ರಾ ತಿಳಿಸಿದರು.

3 ಟಿ20 ಪಂದ್ಯಗಳಿಗೆ ಭಾರತ ತಂಡ

ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹಾರ್.

3 ಏಕದಿನ ಪಂದ್ಯಗಳಿಗೆ ಭಾರತ ತಂಡ

ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ/ ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಶ್‌ದೀಪ್ ಸಿಂಗ್, ದೀಪಕ್ ಚಹಾರ್.

2 ಟೆಸ್ಟ್‌ ಪಂದ್ಯಗಳಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಮೊಹಮ್ಮದ್ ಶಮಿ*, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ.

Story first published: Sunday, December 3, 2023, 10:17 [IST]
Other articles published on Dec 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+