ಟೆಸ್ಟ್ ಚಾಂಪಿಯನ್‌ಷಿಪ್ ಗೆಲ್ಲೋ ತಂಡ ಹೆಸರಿಸಿದ ಆಂಗ್ಲ ಮಾಜಿ ಕ್ರಿಕೆಟಿಗ

ಲಂಡನ್, ಸೆಪ್ಟೆಂಬರ್ 12: ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಕೆಲವೇ ತಿಂಗಳ ಹಳೆಯದು. ಆದರೆ ಈ ಚಾಂಪಿಯನ್‌ಷಿಪ್ ಗೆಲ್ಲೋ ತಂಡದತ್ತ ವಿಶ್ವದ ಚಿತ್ತವಿದೆ. ಈ ಬಾರಿಯ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಗೆಲ್ಲುವ ನೆಚ್ಚಿನ ತಂಡವನ್ನು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಹೆಸರಿಸಿದ್ದಾರೆ.
ಈಗಿನವರೆಗಿನ ಪ್ರದರ್ಶನಗಳನ್ನು ಪರಿಗಣಿಸಿದರೆ ಆಸ್ಟ್ರೇಲಿಯಾ ತಂಡ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಗೆಲ್ಲಲಿದೆ ಎಂದು ಪನೇಸರ್ ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ 4ನೇ ಆ್ಯಷಸ್ ಟೆಸ್ಟ್‌ನಲ್ಲಿ ಸ್ಟೀವ್ ಸ್ಮಿತ್ ಭರ್ಜರಿ ಬ್ಯಾಟಿಂಗ್ (211+82 ರನ್) ನೆರವಿನಿಂದ ಆಸೀಸ್, ಸರಣಿ ಉಳಿಸಿಕೊಂಡಿತ್ತು. ಆ್ಯಷಸ್‌ನಲ್ಲಿ ಆಸ್ಟ್ರೇಲಿಯಾ ಪ್ರದರ್ಶನ ಗಮನಿಸಿ ಮಾಂಟಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಆಸ್ಟ್ರೇಲಿಯಾ ಗೆಲ್ಲಲಿದೆ. ಆಸೀಸ್ ಆಡುವ, ಪಾರಮ್ಯ ಮೆರೆಯುತ್ತಿರುವ ರೀತಿ ಗಮನಿಸಿದರೆ ಈ ಬಾರಿ ಚಾಂಪಿಯನ್‌ಷಿಪ್‌ನಲ್ಲಿ ಖಂಡಿತಾ ಟಿಮ್ ಪೈನೆ ಪಡೆ ಗೆಲ್ಲಲಿದೆ ಎಂದು ಹೇಳಬಲ್ಲ,' ಎಂದು ಮಾಂಟಿ ಪನೇಸರ್ ಟೈಮ್ಸ್ ಆಫ್ ಇಂಡಿಯಾದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಗೊಳಿಸಿದ್ದ ವಿರಾಟ್ ಕೊಹ್ಲಿ ಬಳಗ ಸದ್ಯ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ 120 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ನ್ಯೂಜಿಲೆಂಡ್ (60 ಪಾಯಿಂಟ್ಸ್), ಶ್ರಿಲಂಕಾ (60), ಆಸ್ಟ್ರೇಲಿಯಾ (56), ಇಂಗ್ಲೆಂಡ್ (32) ಇನ್ನುಳಿದ ಸ್ಥಾನಗಳಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications