ICC World Test Championship: ಫೈನಲ್‌ಗೇರಲು ಭಾರತ, ಇಂಗ್ಲೆಂಡ್, ಆಸೀಸ್ ಮಧ್ಯೆ ಫೈಟ್!

ಬೆಂಗಳೂರು: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಉದ್ಘಾಟನಾ ಆವೃತ್ತಿಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಫೈನಲ್‌ಗೆ ಪ್ರವೇಶಿಸಿದೆ. ಸದ್ಯ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಟೇಬಲ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಕೇನ್ ವಿಲಿಯಮ್ಸನ್ ಪಡೆ ಫೈನಲ್‌ಗೆ ಪ್ರವೇಶಿಸಿದೆ. ಫೈನಲ್‌ಗೇರಲು ಇನ್ನು ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮಧ್ಯೆ ಪೈಪೋಟಿ ನಡೆಯಲಿದೆ. ಮುಂಬರಲಿರುವ ಭಾರತ-ಇಂಗ್ಲೆಂಡ್ ಸರಣಿ ಫೈನಲ್ ಸ್ಪರ್ಧಿಯನ್ನು ನಿರ್ಧರಿಸಲಿದೆ.
ಕೊರೊನಾವೈರಸ್ ಕಾರಣದಿಂದ ಆಸ್ಟ್ರೇಲಿಯಾ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಲ್ಪಟ್ಟಿದೆ. ಹೀಗಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳಿಗೆ ಇನ್ನು ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳಿಲ್ಲ. ಆದರೆ ಈಗಾಗಲೇ ದ್ವಿತೀಯ ಸ್ಥಾನದಲ್ಲಿರುವುದರಿಂದ ಕಿವೀಸ್ ತಂಡದ ಫೈನಲ್ ಪ್ರವೇಶ ಖಾತರಿಗೊಂಡಿದೆ.
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನ ಟಾಪ್ ಎರಡರಲ್ಲಿ ಕಾಣಿಸಿಕೊಳ್ಳಲು ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಧ್ಯೆ ಭರ್ಜರಿ ಫೈಟ್ ನಡೆಯಲಿದೆ. ಅದರ ಕುತೂಹಲಕಾರಿ ಲೆಕ್ಕಾಚಾರದ ವಿವರಣೆ ಇಲ್ಲಿದೆ.

ಅಗ್ರಸ್ಥಾನದಲ್ಲಿ ಟೀಮ್ ಇಂಡಿಯಾ
ಸದ್ಯದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 71.7% ಪಾಯಿಂಟ್ಸ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ ನ್ಯೂಜಿಲೆಂಡ್ (70.0%), ತೃತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾ (69.2%), 4ನೇ ಸ್ಥಾನದಲ್ಲಿ ಇಂಗ್ಲೆಂಡ್ ಇಂಗ್ಲೆಂಡ್ (68.7%) ತಂಡಗಳಿವೆ. ಈಗ ಅಗ್ರಸ್ಥಾನದಲ್ಲಿರುವ ಮಾತ್ರಕೆ ಭಾರತ ತಂಡ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸುತ್ತದೆ ಎನ್ನಲಾಗದು.

ಹೀಗಾದರೆ ಭಾರತ ಫೈನಲ್‌ಗೆ
ಫೆಬ್ರವರಿ 5ರಿಂದ ಆರಂಭಗೊಳ್ಳಲಿರುವ ಭಾರತ-ಇಂಗ್ಲೆಂಡ್ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಮತ್ತೊಬ್ಬ ಫೈನಲ್ ಸ್ಪರ್ಧಿಯನ್ನು ನಿರ್ಧರಿಸಲಿದೆ. ಭಾರತ ತಂಡ ಫೈನಲ್‌ಗೆ ಪ್ರವೇಶಿಸಬೇಕಾದರೆ ಇಂಗ್ಲೆಂಡ್ ವಿರುದ್ಧ ಕನಿಷ್ಠ 2 ಪಂದ್ಯಗಳನ್ನು ಗೆಲ್ಲಲೇಬೇಕು. ಇಂಗ್ಲೆಂಡ್ ಸರಣಿಯನ್ನು ಭಾರತ 2-1ರಿಂದ ಗೆದ್ದರೂ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕೊಹ್ಲಿ ಪಡೆ ಫೈನಲ್‌ಗೇರಲಿದೆ.
(ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ 4-0 or 3-0 or 3-1 or 2-0 or 2-1ನಿಂದ ಗೆದ್ದರೆ ಮಾತ್ರ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅವಕಾಶ ಸಿಗಲಿದೆ)

ಇಂಗ್ಲೆಂಡ್‌ನ ಫೈನಲ್ ಅವಕಾಶ
ಭಾರತ-ಇಂಗ್ಲೆಂಡ್ ಸರಣಿ ಮೂಲಕ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶ ಪಡೆದುಕೊಳ್ಳಲು ಇಂಗ್ಲೆಂಡ್‌ಗೆ ಅವಕಾಶವಿದೆ. ಜೋ ರೂಟ್ ಪಡೆ ಭಾರತದ ವಿರುದ್ಧ ಕನಿಷ್ಠ 3 ಪಂದ್ಯಗಳನ್ನು ಗೆದ್ದರೆ ಇಂಗ್ಲೆಂಡ್ ತಂಡ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸಲಿದೆ.
(ಇಂಗ್ಲೆಂಡ್ ತಂಡ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸಬೇಕಾದರೆ ಭಾರತದ ವಿರುದ್ಧ 4-0 or 3-0 or 3-1ನಿಂದ ಟೆಸ್ಟ್ ಸರಣಿ ಗೆಲ್ಲಬೇಕು)

ಆಸ್ಟ್ರೇಲಿಯಾ ಫೈನಲ್‌ಗೆ
ಮೇಲಿನ ಎರಡೂ ಸಾಧ್ಯತೆಗಳು ನಡೆಯದಿದ್ದರೆ ಮಾತ್ರ ಆಸ್ಟ್ರೇಲಿಯಾ ತಂಡ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಳ್ಳಲಿದೆ. ಅಂದರೆ ಭಾರತ-ಇಂಗ್ಲೆಂಡ್ ಸರಣಿ ಡ್ರಾ ಆದರೆ ಆಸ್ಟ್ರೇಲಿಯಾ ಫೈನಲ್‌ಗೆ ಹೋಗಲಿದೆ. ಭಾರತ 2ಕ್ಕೂ ಹೆಚ್ಚು ಪಂದ್ಯ ಸೋತರೆ ಅಥವಾ ಇಂಗ್ಲೆಂಡ್ ಕನಿಷ್ಠ 3 ಪಂದ್ಯಗಳನ್ನು ಗೆಲ್ಲದಿದ್ದರೆ ಕೂಡ ಟಿಮ್ ಪೈನೆ ಪಡೆ ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸ್ಪರ್ಧಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications