WTC final prize money: ಗೆಲ್ಲುವ ತಂಡಕ್ಕೆ ಸಿಗುವ ನಗದು ಬಹುಮಾನವೆಷ್ಟು ಗೊತ್ತಾ?!

ಲಂಡನ್: ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಇನ್ನು ಕೇವಲ ಕೆಲವೇ ದಿನಗಳು ಬಾಕಿ ಉಳಿದಿವೆ. ಜೂನ್ 18-22ರ ವರೆಗೆ ಸೌತಾಂಪ್ಟನ್‌ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಭಾರತ-ನ್ಯೂಜಿಲೆಂಡ್ ಮಧ್ಯೆ ಕುತೂಹಲಕಾರಿ ಕದನ ನಡೆಯಲಿದೆ. ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಚೊಚ್ಚಲ ಆವೃತ್ತಿಯ ಫೈನಲ್‌ನಲ್ಲಿ ಗೆಲ್ಲುವ ತಂಡ ಇತಿಹಾಸ ನಿರ್ಮಿಸಲಿದೆ. ವಿರಾಟ್ ಕೊಹ್ಲಿ ಪಡೆ ಮತ್ತು ಕೇನ್ ವಿಲಿಯಮ್ಸನ್ ಬಳಗ ಕದನಕ್ಕೆ ಸಿದ್ಧವಾಗಿದೆ.
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಗೆಲ್ಲುವ ತಂಡಕ್ಕೆ ನಗದು ಪುರಸ್ಕಾರ ಘೋಷಿಸಲ್ಪಟ್ಟಿದೆ. ಚಾಂಪಿಯನ್ಸ್ ತಂಡ ದೊಡ್ಡ ಮಟ್ಟದ ನಗದು ಪುರಸ್ಕಾರ ಪಡೆದುಕೊಳ್ಳಲಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಬಹುಮಾನದ ಮೊತ್ತಗಳ ಮಾಹಿತಿ ಕೆಳಗಿದೆ.

ಗೆದ್ದೋರಿಗೆ ಭರ್ಜರಿ ಹಣ
ಚೊಚ್ಚಲ ಆವೃತ್ತಿ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಗೆದ್ದೋರಿಗೆ ದೊಡ್ಡ ಮೊತ್ತದ ಹಣ ಸಿಗಲಿದೆ. ಚಾಂಪಿಯನ್ಸ್ ತಂಡ ಬರೋಬ್ಬರಿ 1.6 ಮಿಲಿಯನ್ ಡಾಲರ್ (11,71,75,120 ರೂ.) ನಗದು ಪುರಸ್ಕಾರ ಪಡೆದುಕೊಳ್ಳಲಿದೆ ಎಂದು ಐಸಿಸಿ ಸಿಇಒ ಜೆಫ್ ಅಲ್ಲಾರ್ಡೈಸ್ ಸೋಮವಾರ (ಜೂನ್ 14) ಘೋಷಿಸಿದ್ದಾರೆ.

ಪಂದ್ಯ ಡ್ರಾ ಆದ್ರೆ ಏನ್ ಕತೆ?
ಫೈನಲ್‌ನಲ್ಲಿ ಗೆಲ್ಲೋ ತಂಡ 1.6 ಮಿಲಿಯನ್ ಡಾಲರ್ ನಗದು ತನ್ನದಾಗಿಸಿಕೊಂಡರೆ, ರನ್ನರ್ಸ್ ತಂಡ 800000 ಡಾಲರ್ (ಸುಮಾರು 58,38,8434 ರೂ.) ಪುರಸ್ಕಾರ ಗೆಲ್ಲಲಿದೆ. ಹಾಗಾದರೆ ಪಂದ್ಯ ಡ್ರಾ ಆದರೆ ಏನ್ ಕತೆ? ಪಂದ್ಯ ಡ್ರಾ ಆದರೆ ನಗದು ಪುರಸ್ಕಾರ ಎರಡೂ ತಂಡಗಳಿಗೂ ಹಂಚಿ ಹೋಗಲಿದೆ.

ಯಾವ ತಂಡ ಗೆಲ್ಲುತ್ತೆ?
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಯಾವ ತಂಡ ಗೆಲ್ಲಲಿದೆ ಎಂದು ಪ್ರಶ್ನಿಸಿದರೆ ಹೆಚ್ಚಿನವರು ನ್ಯೂಜಿಲೆಂಡ್ ಎನ್ನುತ್ತಿದ್ದಾರೆ. ಆದರೆ ಭಾರತ ಕೂಡ ಉತ್ತಮ ತಯಾರಿ ನಡೆಸಿದೆ. ಅಭ್ಯಾಸ ಪಂದ್ಯದಲ್ಲಿ ಇಶಾಂತ್ ಶರ್ಮಾ, ರವೀಂದ್ರ ಜಡೇಜಾ, ಶುಬ್ಮನ್ ಗಿಲ್ ಮತ್ತು ರಿಷಭ್ ಪಂತ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಫೈನಲ್ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಜೂನ್ 18ರಿಂದ ಭಾರತೀಯ ಕಾಲಮಾನ 3 PMಗೆ ಪಂದ್ಯ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications