Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC Test Championship: ಜೂನ್ 2ಕ್ಕೆ ಭಾರತ ತೊರೆಯಲಿದೆ ಟೀಮ್ ಇಂಡಿಯಾ

ICC World Test Championship: Team India to leave for UK on June 2, players will have families for company

ನವದೆಹಲಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕಾಗಿ ಮತ್ತು ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡ ಜೂನ್ 2ರಂದು ಭಾರತ ತೊರೆಯಲಿದೆ. ಟೀಮ್ ಇಂಡಿಯಾ ಯುಕೆಗೆ ಹೋಗುವುದಕ್ಕೂ ಮುನ್ನ ಮುಂಬೈನಲ್ಲಿ ಎಂಟು ದಿನಗಳ ಕ್ವಾರಂಟೈನ್ ಪಾಲಿಸಲಿದೆ.

ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸ್ಪರ್ಧಿಸಲಿವೆ. ಜೂನ್ 18ಕ್ಕೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯಲಿದೆ. ಅದಾಗಿ ಆಗಸ್ಟ್ 4ರಿಂದ ಐದು ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ.

'ಟೀಮ್ ಇಂಡಿಯಾ ಭಾರತದಲ್ಲಿ 8 ದಿನಗಳ ಕಟ್ಟುನಿಟ್ಟಿನ ಕ್ವಾರಂಟೈನ್ ಪಾಲಿಸಲಿದೆ. ಈ ವೇಳೆ 2, 4 ಮತ್ತು 7ನೇ ದಿನಕ್ಕೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಯಲಿದೆ. ಇವು ವಿಮಾನಯಾನಕ್ಕೆ ಅನಿವಾರ್ಯವಾಗಿದೆ,' ಎಂದು ಬಿಸಿಸಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯುಕೆ ತಲುಪಿದ ಬಳಿಕ ಭಾರತ 10 ದಿನಗಳ ಕ್ವಾರಂಟೈನ್‌ ಪಾಲಿಸಲಿದೆ. ಜೂನ್ 13ರ ಬಳಿಕ ಸಿಟಿಗೆ ಪ್ರವೇಶಿಸಲು ಮತ್ತು ಅಭ್ಯಾಸಕ್ಕೆ ಅನುಮತಿ ಲಭಿಸಲಿದೆ. ಭಾರತದಿಂದ ತಂಡ ಹೊರಡುವಾಗ ಅವರ ಕುಟುಂಬಸ್ಥರೂ ಜೊತೆಗೆ ತೆರಳಲು ಅನುಮತಿಯಿದೆ.

Story first published: Saturday, May 8, 2021, 19:34 [IST]
Other articles published on May 8, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+