ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ತಂಡಗಳ ಸಂಖ್ಯೆ ಹೆಚ್ಚಿಸಲು ಐಸಿಸಿ ಮಾಸ್ಟರ್ ಪ್ಲ್ಯಾನ್
ಐಸಿಸಿ ಶೀಘ್ರದಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಸ್ವರೂಪವನ್ನು ಬದಲಾಯಿಸಬಹುದು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸದ್ಯ 9 ತಂಡಗಳು ಭಾಗವಹಿಸುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಐಸಿಸಿ ಈ ಸಂಖ್ಯೆಗಳನ್ನು ಹೆಚ್ಚಿಸಲು ಯೋಚನೆ ನಡೆಸುತ್ತಿದೆ. ಕ್ರಿಕೆಟ್‌ನಲ್ಲಿ ಹೆಚ್ಚು ತಂಡಗಳನ್ನು ಸೇರಿಸಿಕೊಳ್ಳುವ ಮೂಲಕ ಹೆಚ್ಚಿ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಆಕರ್ಷಿಸುವ ಪ್ಲ್ಯಾನ್ ಮಾಡಿಕೊಳ್ಳಲಿದೆ. ಈ ಮೂಲಕ ಐಸಿಸಿ 2028ರ ಲಾಸ್ ಎಂಜಿಲೇಸ್ ಒಲಿಂಪಿಕ್ಸ್‌ಗೆ ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದೆ.
ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಭಾಗವಹಿಸುತ್ತವೆ. ಪ್ರತಿ ತಂಡಗಳು ಆರು ಸರಣಿಗಳನ್ನು ಆಡಲಾಗುತ್ತದೆ. ಇದೇ ವೇಳೆ ಮೂರು ತವರು ಹಾಗೂ ಮೂರು ವಿದೇಶಿ ಸರಣಿಗಳನ್ನು ಆಡಲಿದೆ. ಮಾಧ್ಯಮ ವರದಿಗಳ ಪ್ರಕಾರ, ಜಿಂಬಾಬ್ವೆ, ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ಸಹ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸ್ಥಾನ ಪಡೆಯಬಹುದು.

ಈ ವರ್ಷದ ಮೊದಲ ಐಸಿಸಿ ತ್ರೈಮಾಸಿಕ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಸಭೆ ಮಾರ್ಚ್ 25 ರಿಂದ 27 ರವರೆಗೆ ದೋಹಾನಲ್ಲಿ ನಡೆಯಬೇಕಿತ್ತು. ಮಧ್ಯಪ್ರಾಚ್ಯದಲ್ಲಿ ಸದ್ಯ ಉದ್ಬವಿಸಿರುವ ಉದ್ವಿಗ್ನತೆಯಿಂದ ಸಭೆಯನ್ನು ಮುಂದೂಡಲಾಗಿದೆ. ಈಗ ಅಧಿಕಾರಿಗಳು ವರ್ಚುವಲ್ ಸಭೆ ನಡೆಸಲಿದ್ದು, ಈ ಬಗ್ಗೆ ಇನ್ನು ಯಾವುದೇ ಪ್ರಕಟಣೆ ಹೊರ ಬಂದಿಲ್ಲ.
ಈ ನಿಟ್ಟಿನಲ್ಲಿ ಗಂಭೀರ ಚಿಂತನೆ
ಕ್ರಿಕೆಟ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮರಳಿ ತರುವ ಉದ್ದೇಶದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಗಂಭೀರವಾಗಿ ಯೋಚನೆ ನಡೆಸುತ್ತಿದೆ. ಈ ಒಲಿಂಪಿಕ್ಸ್‌ನಲ್ಲಿ ಮಹಿಳಾ ಹಾಗೂ ಪುರುಷರ ತಲಾ 6 ತಂಡಗಳು ಭಾಗವಹಿಸುತ್ತಿವೆ. ಅರ್ಹತಾ ಪ್ರಕ್ರಿಯೆಯು ಏಷ್ಯಾ, ಪೆಸಿಫಿಕ್, ಯುರೋಪ್ ಮತ್ತು ಆಫ್ರಿಕನ್ ಖಂಡದ ಅಗ್ರ ತಂಡಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಂತಿರಬಹುದು. ಒಲಿಂಪಿಕ್ಸ್‌ನಲ್ಲಿ ಆತಿಥ್ಯವನ್ನು ವಹಿಸುವ ಅಮೆರಿಕ ನೇರವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬಹುದು.
ಕಳೆದ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ದಕ್ಷಿಣ ಆಫ್ರಿಕಾ ಚೊಚ್ಚಲ ಬಾರಿಗೆ ಟ್ರೋಫಿಯನ್ನು ಮುತ್ತಿಟ್ಟು ದಾಖಲೆ ಬರೆದಿತ್ತು. ಇನ್ನು ಟೀಮ್ ಇಂಡಿಯಾ ಸಹ ಸತತ ಎರಡು ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಫೈನಲ್ ಗೆಲ್ಲುವಲ್ಲಿ ವಿಫಲವಾಗಿತ್ತು. ಹೀಗಾಗಿ ಈ ಬಾರಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಬಹುದಾ ಎಂಬ ಪ್ರಶ್ನೆಗಳು ಎದ್ದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications