Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಂದು ಸರಣಿ ಸೋತ ಬೆನ್ನಲ್ಲೆ ಭಾರತದ ಟಿ20 ವಿಶ್ವ ಚಾಂಪಿಯನ್ ಕೋಚ್‌ ಗಂಭೀರ್‌ಗೆ ಅವಮಾನಿಸಿದ ಐಸ್‌ಲ್ಯಾಂಡ್‌ ಕ್ರಿಕೆಟ್‌

ಟೀಮ್ ಇಂಡಿಯಾ ಐರ್ಲೆಂಡ್ ಪ್ರವಾಸ ಕೈಗೊಳ್ಳುವ ಮುನ್ನ ಇದ್ದೆ ಆಸೆಗಳೆಲ್ಲವೂ ನುಚ್ಚುನೂರಾಗಿದೆ. ಪ್ರವಾಸದಲ್ಲಿ ವೈಟ್ ವಾಷ್ ಸಾಧನೆ ಮಾಡಿ ಸಾಧನೆ ಮಾಡಬೇಕೆಂಬ ಭಾರತ ತಂಡದ ಕನಸಿಗೆ ಪೆಟ್ಟು ಬಿದ್ದಿದೆ. ಟಿ20 ವಿಶ್ವಕಪ್‌ ವಿಜೇತ ತಂಡ ಐರ್ಲೆಂಡ್‌ ವಿರುದ್ಧ ನೀಡಿದ ಪ್ರದರ್ಶನ ಈಗ ಟೀಕೆಗೆ ಗುರಿಯಾಗಿದೆ. ಐಸ್‌ಲ್ಯಾಂಡ್‌ ಕ್ರಿಕೆಟ್‌ ಭಾರತ ತಂಡದ ಕೋಚ್‌ ಗೌತಮ್ ಗಂಭೀರ್‌ ಅವರನ್ನು ಟ್ರೋಲ್ ಮಾಡಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್‌ 1 ರನ್‌ ರೋಚಕ ಜಯ ಸಾಧಿಸಿದೆ. ಈ ಮೂಲಕ ಟೀಮ್ ಇಂಡಿಯಾ ಪ್ರವಾಸದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಕೈ ಚೆಲ್ಲಿದೆ. ಈ ಸರಣಿ ಸೋಲಿನ ಬಳಿಕ ಟೀಮ್ ಇಂಡಿಯಾ ಕೋಚ್‌ನ್ನು ಐಸ್‌ಲ್ಯಾಂಡ್‌ ಕ್ರಿಕೆಟ್‌ ತನ್ನ ಸಾಮಾಜಿಕ ತಾಣದಲ್ಲಿ ಟ್ರೋಲ್ ಮಾಡಿದೆ.

Iceland Cricket

ಐರ್ಲೆಂಡ್‌ ವಿರುದ್ಧ ಟೀಮ್ ಇಂಡಿಯಾ ಸರಣಿ ಸೋಲಿನ ಬೆನ್ನಲ್ಲೆ ಕೋಚ್‌ ಗಂಭೀರ್ ಅವರನ್ನು ವ್ಯಂಗ್ಯಮಾಡಿದೆ. ಕೋಚ್ ಗಂಭೀರ್ ಅವರನ್ನು ನಮ್ಮ ಕೋಚಿಂಗ್ ಸ್ಟಾಫ್‌ ಆಗಿ ನೇಮಿಸಿಕೊಳ್ಳಲುವ ಯಾವುದೇ ಆಲೋಚನೆ ಇಲ್ಲ. ಸ್ಟಾರ್ ಆಟಗಾರರು ಹಾಗೂ ಸ್ಟಾರ್ ಕೋಚ್‌ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧ ಸೋತಿರುವುದು ಅಮೋಘ ಸಾಧನೆ ಎಂದು ಟ್ರೋಲ್ ಮಾಡಿದೆ.

ತಂಡದಲ್ಲಿ ಉತ್ತಮ ಪ್ರತಿಭೆ ಇದ್ದರೂ, ಗೌತಮ್ ಗಂಭೀರ್ ಅವರನ್ನು ಕೋಚಿಂಗ್ ಸಿಬ್ಬಂದಿಯನ್ನಾಗಿ ನೇಮಕ ಮಾಡಿಕೊಳ್ಳುವ ಆಲೋಚನೆಯಿಲ್ಲ ಎಂದು ಖಚಿತಪಡಿಸಿದೆ. ಭಾರತದಂತಹ ಸ್ಟಾರ್ ಆಟಗಾರರನ್ನು ಕರೆದುಕೊಂಡು ಐರ್ಲೆಂಡ್‌ನಲ್ಲಿ ನೀಡಿದ ಪ್ರದರ್ಶನ ಅಮೋಘ ಸಾಧನೆಯಾಗಿದೆ ಎಂದು ಬರೆದುಕೊಂಡಿದೆ.

ಟಿ20 ವಿಶ್ವಚಾಂಪಿಯನ್

ಭಾರತದಲ್ಲಿ ಈ ವರ್ಷದ ಆರಂಭದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿತ್ತು. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಿದ್ದರು. ಸೂರ್ಯ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದರಿಂದ ಅವರನ್ನು ತಂಡದಿಂದ ಕೈ ಬಿಟ್ಟು, ಶ್ರೇಯಸ್ ಅಯ್ಯರ್‌ಗೆ ಪಟ್ಟ ಕಟ್ಟಲಾಯಿತು. ಆದರೆ ಶ್ರೇಯಸ್‌ ಮೊದಲ ನಾಯಕತ್ವದಲ್ಲಿ ನಿರಾಸೆ ಅನುಭವಿಸಿದ್ದಾರೆ.

Iceland Cricket

ಐರ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಆಡಿದ ಎರಡೂ ಪಂದ್ಯಗಳಲ್ಲಿ ನಿರಾಸೆ ಕಂಡಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ 183 ರನ್‌ ಸೇರಿಸಿ, 34 ರನ್ ಹೀನಾಯ ಸೋಲು ಕಂಡಿದೆ. ಇನ್ನು ಎರಡನೇ ಪಂದ್ಯದಲ್ಲಿ ಗೆಲುವಿನ ಕನಸು ಕಂಡಿದ್ದ ಭಾರತಕ್ಕೆ ಆಘಾತ ಕಾದಿತ್ತು. ಭಾನುವಾರ ನಡೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್‌ ಪಡೆ 1 ರನ್‌ ಸೋಲು ಕಂಡಿದ್ದು, 2023ರ ಆಗಸ್ಟ್ ಬಳಿಕ ಇದೇ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿಯನ್ನು ಕೈ ಚೆಲ್ಲಿದ ಕಳಪೆ ದಾಖಲೆ ಬರೆಯಿತು.

Story first published: Monday, June 29, 2026, 16:25 [IST]
Other articles published on Jun 29, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+