T20 World Cup 2024: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಐಸಿಎಸ್ ಉಗ್ರರ ಕರಿನೆರಳು
ಮೇ 30 ಗುರುವಾರ, ಜೂನ್ 2 ರಿಂದ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ದೇಶಗಳಲ್ಲಿ 2024ರ ಐಸಿಸಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಮೆಗಾ ಟೂರ್ನಿಗೆ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಸಿಎಸ್) ಉಗ್ರರ ಕರಿನೆರಳು ಬಿದ್ದಿದೆ.
ಮುಂದಿನ ತಿಂಗಳು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದ ಮೇಲೆ ಐಸಿಸ್-ಕೆ "ಲೋನ್ ವುಲ್ಫ್" ದಾಳಿಗೆ ನಡೆಸುವುದಾಗಿ ಬೆದರಿವೊಡ್ಡಿದೆ. ಈ ಬೆದೆರಿಕೆ ಕರೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದಾದ ಬಳಿಕ ನ್ಯೂಯಾರ್ಕ್ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

ಮೂಲಗಳ ವರದಿ ಪ್ರಕಾರ, ಐಸಿಸಿ-ಕೆ ಕೇವಲ ಜೂನ್ 6 ರಂದು ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಾತ್ರ ಬೆದರಿಕೆಯೊಡ್ಡಿದ್ದು, ಈ ಪಂದ್ಯದ ವೇಳೆ ಲೋನ್ ವುಲ್ಫ್ (ಒಂಟಿ ತೋಳ- ಒಬ್ಬ ದಾಳಿಕೋರ) ದಾಳಿಯನ್ನು ನಡೆಸುವಂತೆ ತನ್ನ ಸಂಘಟನೆಯ ಸದಸ್ಯರಲ್ಲಿ ಕೇಳಿಕೊಂಡಿದೆ.
ಹೀಗಾಗಿ ನ್ಯೂಯರ್ಕ್ ನಗರದ ಸುತ್ತಮುತ್ತ ಕಟ್ಟೆಚ್ಚರವಹಿಸಲಾಗಿದೆ. ಜೊತೆಗೆ ಇಂಡೋ-ಪಾಕ್ ಪಂದ್ಯಕ್ಕೆ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ ಎಂದು ನಸ್ಸೌ ಕೌಂಟಿಯ ಪೊಲೀಸ್ ಕಮಿಷನರ್ ಪ್ಯಾಟ್ರಿಕ್ ರೈಡರ್ ಹೇಳಿದ್ದಾರೆ.
ಮತ್ತೊಂದೆಡೆ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಅವರು ನಾವು ಪರಿಸ್ಥಿತಿಗಳನ್ನು ನಿರಂತರವಾಗಿ ಮೇಲ್ವಿಚರಣೆ ಮಾಡುತ್ತಿದ್ದೆವೆ. ಇಂಡೋ-ಪಾಕ್ ಪಂದವನ್ನು ನೋಡಲು ಬರುವ ಪ್ರೇಕ್ಷಕರ ಸುರಕ್ಷತೆಯನ್ನು ದೃಷ್ಟಿಯಿಂದ ಅಲ್ಲದೆ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಿಗಿಗೊಳಿಸುವಂತೆ ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ
ಡ್ರೋನ್ ಹಾರಾಟಕ್ಕೆ ನಿರ್ಬಂಧ!
ಭಯೋತ್ಪಾದಕ ಸಂಘಟನೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಸ್ಟೇಡಿಯಂ ಮೇಲೆ ಡ್ರೋನ್‌ಗಳು ಹಾರುತ್ತಿರುವುದನ್ನು ತೋರಿಸಲಾಗಿದೆ. ಜೊತೆಗೆ ದಿನಾಂಕ 9-06-2024 ಎಂದು ಬರೆಯಲಾಗಿದೆ. ಅ ದಿನದಂದೆ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಆಡಲಿದೆ.
ಅಂದರೆ ಈ ದಿನದಂದು ಡ್ರೋನ್ ಮೂಲಕ ದಾಳಿ ನಡೆಸಲು ಭಯೋತ್ಪಾದಕ ಸಂಘಟನೆ ಯೋಜನೆ ಹಾಕಿರುವುದನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುವ ಸ್ಟೇಡಿಯಂ ಸುತ್ತಮುತ್ತನ ಡ್ರೋನ್ ಹಾರಾಟವನ್ನು ನಿರ್ಬಂಧಿಸುವಂತೆ (ನೋ-ಫ್ಲೈ ಝೋನ್) ನ್ಯೂಯಾರ್ಕ್ ಪೊಲೀಸ್ ಯುಎಸ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ಗೆ ಮನವಿ ಮಾಡಲಾಗಿದೆ.
ಟೀಮ್ ಇಂಡಿಯಾ ಜೂನ್ 5 ರಂದು ಐರ್ಲೆಂಡ್ ವಿರುದ್ಧ ಕಣಕ್ಕೀಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಶುರು ಮಾಡಲಿದೆ. ಇನ್ನು ಜೂನ್ 9 ರಂದು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಆಡಲಿದೆ. ಇದೇ ಪಂದ್ಯಕ್ಕೆ ಉಗ್ರರರು ಬೆದರಿಕೆ ಹಾಕಿರುವುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications