Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫಿಂಚ್ ಆಡದಿದ್ದರೆ ವಿರಾಟ್ ಕೊಹ್ಲಿ ಓಪನ್ ಮಾಡುತ್ತಾರೆ: ಆಶಿಷ್ ನೆಹ್ರಾ

If Aaron Finch not playing, Virat Kohli should open for RCB: Ashish Nehra

ದುಬೈ: ಹಿಂದಿನ ನಾಲ್ಕೂ ಪಂದ್ಯಗಳಲ್ಲಿ ಸೋತ ಹೊರತಾಗಿಯೂ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ. ಕೋಲ್ಕತ್ತಾ ನೈಟ್ ರೈಸರ್ಸ್‌ಗಿಂತ ನೆಟ್ ರನ್‌ರೇಟ್ ಉತ್ತಮಗೊಳಿಸಿದ್ದರಿಂದ ಆರ್‌ಸಿಬಿ ಸದ್ಯ ನಿರಾಳವಾಗಿದೆ.

ಸೋಮವಾರ (ನವೆಂಬರ್ 2) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್‌ಗಳ ಸೋಲನುಭವಿಸಿತ್ತು. ಆದರೆ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳಲ್ಲಿ ಆರ್‌ಸಿಬಿ ಗಟ್ಟಿಯಾಗಿದೆ. ಆರ್‌ಸಿಬಿ ನಾಲ್ಕು ವರ್ಷಗಳ ಬಳಿಕ ಇದು ಮೊದಲನೇ ಸಾರಿ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ.

ಈ ಐಪಿಎಲ್‌ ಸೀಸನ್‌ನಲ್ಲಿ ಆರ್‌ಸಿಬಿಗೆ ಆರಂಭಿಕರಾಗಿ ಆ್ಯರನ್ ಫಿಂಚ್ ಮತ್ತು ದೇವದತ್ ಪಡಿಕ್ಕಲ್ ಆಡುತ್ತಿದ್ದರು. ಆದರೆ ಪಿಂಚ್ ಫಾರ್ಮ್‌ನಲ್ಲಿ ಇಲ್ಲದಿರುವುದರಿಂದ ಲೀಗ್ ಹಂತದ ಕೊನೇ ಪಂದ್ಯಗಳಲ್ಲಿ ಫಿಂಚ್ ಬದಲು ಜೊಶುವಾ ಫಿಲಿಪ್ ಆರಂಭಿಕರಾಗಿ ಆಡಿದ್ದರು. ಬೆಂಗಳೂರು ಆರಂಭಿಕ ಬ್ಯಾಟಿಂಗ್‌ ಬಗ್ಗೆ ಆರ್‌ಸಿಬಿ ಮಾಜಿ ಬೌಲಿಂಗ್ ಕೋಚ್ ಆಶಿಷ್ ನೆಹ್ರಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಪರಿಸ್ಥಿತಿಗಳಿಗೆ ಅವಲಂಬಿಸಿ ವಿರಾಟ್ ಕೊಹ್ಲಿಗೆ ತುಂಬಾ ಒತ್ತಡವಿತ್ತು. ಅಕ್ಸರ್ ಪಟೇಲ್ ಅಥವಾ ಆರ್‌ ಅಶ್ವಿನ್‌ಗೆ ಹೊಡೆಯೋದು ಸುಲಭವಲ್ಲ. ಕೊಹ್ಲಿಯನ್ನು ದೊಡ್ಡ ಹೊಡೆತ ಹೊಡೆಯದಂತೆ ತಡೆದ ಶ್ರೇಯಸ್ಸು ಡೆಲ್ಲಿಗೆ ಸಲ್ಲಬೇಕು. ಮುಂಬರುವ ಪಂದ್ಯಗಳಲ್ಲಿ ಒಂದು ವೇಳೆ ಫಿಂಚ್ ಆಡದಿದ್ದರೆ, ಕೊಹ್ಲಿ ಆರ್‌ಸಿಬಿಗೆ ಆರಂಭಿಕರಾಗಿ ಆಡುತ್ತಾರೆ ಎಂದು ನನಗನ್ನಿಸುತ್ತದೆ,' ಎಂದು ನೆಹ್ರಾ ಹೇಳಿದ್ದಾರೆ.

Story first published: Tuesday, November 3, 2020, 17:33 [IST]
Other articles published on Nov 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+