ನಾಯಕ ಧೋನಿ ಮೇಲೆ ಅಶ್ವಿನ್ ತೋರಿದ ಅಭಿಮಾನದ ಅತಿರೇಕ!
ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಸಿನಿಮಾ ನಟರಿಗಾಗಿ ಏನು ಬೇಕಾದರೂ ತ್ಯಾಗ ಮಾಡಲು ಸಿದ್ದರಿರುವ ಹುಚ್ಚು ಅಭಿಮಾನಿಗಳನ್ನು ಕಾಣುತ್ತೇವೆ.
ಆದರೆ ಹಣದ ಸುನಾಮಿಯನ್ನೇ ಹರಿಸುವ ಕ್ರಿಕೆಟ್ ಆಟದಲ್ಲಿ ಈ ಮಟ್ಟಿನ ಅಭಿಮಾನದ ಪರಾಕಾಷ್ಠೆಯೇ? ಅದೂ ಒಬ್ಬ ಚಾಲ್ತಿಯಲ್ಲಿರುವ ಕ್ರಿಕೆಟ್ ಆಟಗಾರನಿಂದ.
ವೃತ್ತಿ ಬದುಕಿನ ತೂಗೊಯ್ಯಾಲೆಯಲ್ಲಿರುವ ಭಾರತ ತಂಡದ ನಾಯಕ ಎಂ ಎಸ್ ಧೋನಿ ಅವರ ಪರಮಾಪ್ತ ವಲಯದಲ್ಲಿ ಕಾಣಿಸಿಕೊಳ್ಳುವ ಕೆಲವೇ ಕೆಲವು ಆಟಗಾರರಲ್ಲಿ ತಮಿಳುನಾಡಿನ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಗ್ರಗಣ್ಯ.
ನಾಯಕ ಎಂಎಸ್, ಅದು ಒನ್ಡೇ ಕ್ರಿಕೆಟಿರಲಿ, ಐಪಿಎಲ್ ಮ್ಯಾಚೇ ಇರಲಿ ತನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಲೈಫ್ ಲಾಂಗ್ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ನುಡಿಮುತ್ತನ್ನು ಅಶ್ವಿನ್ ಉದುರಿಸಿದ್ದಾರೆ.
ನಾಯಕ ಧೋನಿಗಾಗಿ ಪ್ರಾಣ ಬೇಕಾದರೂ ಬಿಡುತ್ತೇನೆ ಎಂದು ರವಿಚಂದ್ರನ್ ಅಶ್ವಿನ್ ಬಾಂಗ್ಲಾ ದೇಶದಲ್ಲಿ ಹೇಳಿಕೆ ನೀಡುವ ಮೂಲಕ ನಾಯಕನ ಮೇಲಿನ ತನ್ನ ಅಭಿಮಾನವನ್ನು ಮೆರೆದಿದ್ದಾರೆ.
ಏಕದಿನ ಪಂದ್ಯದಲ್ಲಾಗಲಿ, ಸಿಎಸ್ಕೆ ಪರವಾಗಲಿ ಫಾರ್ಮಂನಲ್ಲಿ ಇಲ್ಲದಿದ್ದರೂ ಜಡೇಜಾ ಟೀಂನಲ್ಲಿ ಇರೋದು ಗ್ಯಾರಂಟಿ. ಹಾಗಂತ, ಅಶ್ವಿನ್ ಆಟದ ವಿಚಾರದಲ್ಲಿ ಕೀಳು ಮಟ್ಟದ ಫಾರಂನಲ್ಲೇನೂ ಇಲ್ಲ.
ಬಾಂಗ್ಲಾ ವಿರುದ್ದ ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಿಕೊಳ್ಳಲು ಟೀಂ ಇಂಡಿಯಾಗೆ ಇರುವ ಕೊನೆಯ ಅವಕಾಶದ ಏಕದಿನ ಪಂದ್ಯ ಇಂದು (ಜೂ 24) ನಡೆಯಲಿದೆ.
ಕೊನೆಯ ಪಂದ್ಯದ ಮುನ್ನಾ ದಿನವಾದ ಮಂಗಳವಾರದಂದು (ಜೂ 23) ರವಿಚಂದ್ರನ್ ಅಶ್ವಿನ್ ನಾಯಕ ಧೋನಿ ಮೇಲೆ ಅಭಿಮಾನದ ಪರಾಕಾಷ್ಠೆಯನ್ನೇ ಹರಿಸಿದ್ದಾರೆ. ಅದೇನೆಂದು ಸ್ಲೈಡಿನಲ್ಲಿ ಓದಿ..

ಡ್ರೆಸ್ಸಿಂಗ್ ರೂಮ್ ನಲ್ಲಿ ಏನಾಗುತ್ತಿದೆ?
ಕ್ಯಾಪ್ಟನ್ ಕೂಲ್ ಧೋನಿ ಮತ್ತು ಇತರ ಆಟಗಾರರ ನಡುವೆ ಡ್ರೆಸ್ಸಿಂಗ್ ರೂಮ್ ನಲ್ಲಿ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನಗಳು, ಗುಂಪುಗಾರಿಕೆಯ ಬಗ್ಗೆ ಈಗಾಗಲೇ ವರದಿಯಾಗಿದೆ. ಇದರ ಮಧ್ಯೆ, ಆಶ್ಚರ್ಯ ರೀತಿಯಲ್ಲಿ ಮಾಧ್ಯಮದವರ ಮುಂದೆ ಪ್ರತ್ಯಕ್ಷರಾದ ಅಶ್ವಿನ್ ನಾಯಕ ಧೋನಿ ಪರವಾಗಿ ಮಾತನಾಡಿದ್ದಾರೆ.

ಸೋಲಿಗೆ ಧೋನಿ ಮಾತ್ರ ಕಾರಣವಲ್ಲ
ಬಾಂಗ್ಲಾ ದೇಶದ ವಿರುದ್ದ ಸರಣಿ ಸೋಲಿಗೆ ನಾಯಕ ಧೋನಿ ಮಾತ್ರ ಕಾರಣರಲ್ಲ. ಇಡೀ ತಂಡ ಇದಕ್ಕೆ ಕಾರಣ. ಪ್ರತೀ ಪಂದ್ಯ ಆರಂಭವಾಗುವುದಕ್ಕೆ ಮುನ್ನ ಮ್ಯಾಚ್ ಗೆಲ್ಲಲೇ ಬೇಕು ಎನ್ನುವ ಉದ್ದೇಶದಿಂದ ಮೈದಾನಕ್ಕೆ ಇಳಿಯುತ್ತೇವೆ. ತಂಡದ ಸೋಲು, ನಾಯಕನೊಬ್ಬನ ಸೋಲಾಗಲು ಸಾಧ್ಯವಿಲ್ಲ - ಅಶ್ವಿನ್

ನಾಯಕನಿಗಾಗಿ ಪ್ರಾಣ ಬಿಡುತ್ತೇನೆ
ನಾಯಕನ ಬಗ್ಗೆ ನಿಮ್ಮ ಸಮರ್ಥನೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಅಶ್ವಿನ್, Off course man, ನಾಯಕನ ಪರವಾಗಿ ನಿಲ್ಲದಿದ್ದರೇ ಇನ್ಯಾವಾಗ ಅವರನ್ನು ಸಪೋರ್ಟ್ ಮಾಡುವುದು. ಒಂದು ವೇಳೆ ಧೋನಿ, ಮೈದಾನದಲ್ಲೇ ನೀನು ಸಾಯಿ ಎಂದರೆ ಅದಕ್ಕೆ ನಾನು ರೆಡಿ - ಅಶ್ವಿನ್

ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ..
ಇದುವರೆಗೆ ಇಡೀ ತಂಡ ಒಂದು ಆರ್ಮಿ ತರ ಇದ್ದೇವೆ. ನಾಯಕ ಧೋನಿ ಅಂತಾ ಈ ಮಾತನ್ನು ನಾನು ಹೇಳುತ್ತಿಲ್ಲ. ಯಾವುದೇ ನಾಯಕನನ್ನು ನಾವು ಹಿಂಬಾಲಿಸಿದಾಗ, ಅವರು ಹೇಳಿದಂತೆ ನಾವು ನಡೆದುಕೊಳ್ಳಬೇಕಾಗುತ್ತದೆ - ಅಶ್ವಿನ್

ಒಂದು ಗೆಲುವು, ಎಲ್ಲದಕ್ಕೂ ಪರಿಹಾರ
ನಾವು ಇತ್ತೀಚೆಗೆ ಆಡಿದ ಪಂದ್ಯಗಳಲ್ಲಿ ಶೇ. 75ರಷ್ಟು ಪಂದ್ಯವನ್ನು ಗೆದ್ದಿದ್ದೇವೆ. ಬಾಂಗ್ಲಾ ದೇಶದ ಜೊತೆಗಿನ ಕೊನೆಯ ಪಂದ್ಯದಲ್ಲಿ ನಾವು ಗೆದ್ದರೆ, ಎಲ್ಲಾ ಚರ್ಚೆಗೆ ಫುಲ್ ಸ್ಟಾಪ್ ಬೀಳಲಿದೆ - ಅಶ್ವಿನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications