ಆಸೀಸ್ ಎದುರು ಭಾರತ ಈ ಬಾರಿ ಗೆಲ್ಲದಿದ್ದರೆ ಇನ್ಯಾವತ್ತೂ ಗೆಲ್ಲೋಲ್ಲ: ಜೋನ್ಸ್

ಸಿಡ್ನಿ, ನವೆಂಬರ್ 30: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ಇಳಿಯಲಿರುವ ಭಾರತ ಈ ಬಾರಿ ಸರಣಿ ಜಯಿಸದಿದ್ದರೆ ಇನ್ನು ಯಾವತ್ತಿಗೂ ಗೆಲ್ಲಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ಮನ್ ಡೀನ್ ಜೋನ್ಸ್ ಹೇಳಿದ್ದಾರೆ. ಭಾರತಕ್ಕೆ ಗೆಲ್ಲಲು ಇರುವ ಅಪೂರ್ವ ಅವಕಾಶವಿದು ಎಂದು ಜೋನ್ಸ್ ತಿಳಿಸಿದ್ದಾರೆ.
ಕ್ರಿಕೆಟ್ ರಂಗದಲ್ಲಿ ಬಲಿಷ್ಟ ತಂಡವಾಗಿ ಗುರುತಿಸಿಕೊಂಡಿದ್ದ ಆಸ್ಟ್ರೇಲಿಯಾಕ್ಕೀಗ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಬೆಂಬಲವಿಲ್ಲ. ಈ ಇಬ್ಬರು ಪ್ರಮುಖ ಬ್ಯಾಟ್ಸ್ಮನ್‌ಗಳ ಬೆಂಬಲವಿರುತ್ತಿದ್ದರೆ ಆಸೀಸ್ ತಂಡ ಭಾರತಕ್ಕೆ ಸವಾಲಾಗುವುದರಲ್ಲಿತ್ತು ಎಂಬರ್ಥದಲ್ಲಿ ಡೀನ್ ಮಾತನಾಡಿದ್ದಾರೆ.
ಡಿಸೆಂಬರ್ 6ರಂದು ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಈ ನಡುವೆ 52 ಟೆಸ್ಟ್ ಪಂದ್ಯಗಳಲ್ಲಿ 3,631 ರನ್ ಕಲೆ ಹಾಕಿರುವ ಡೀನ್ ಮಾತುಗಳು ಸಹಜವಾಗೇ ತನ್ನ ತವರು ನೆಲದ ಪರವಾಗಿದೆ. 164 ಏಕದಿನ ಪಂದ್ಯಗಳಲ್ಲಿ 6,068 ರನ್ ಗಳಿಸಿರುವ ಜೋನ್ಸ್ ಟೆಸ್ಟ್ ನಲ್ಲಿ 216 ಅಧಿಕ ರನ್ ಸಾಧನೆ ಹೊಂದಿದ್ದಾರೆ.

ಉತ್ತಮ ಎನ್ನುವ ನಂಬಿಕೆ ಭಾರತದ್ದು
'ಒಂದುವೇಳೆ ಈ ಬಾರಿ ಭಾರತ ಸರಣಿಗಳನ್ನು ಗೆಲ್ಲದಿದ್ದರೆ ಅದು ಇನ್ಯಾವತ್ತೂ ಆಸ್ಟ್ರೇಲಿಯಾದಲ್ಲಿ ಗೆಲ್ಲಲು ಸಾಧ್ಯವಿಲ್ಲ. ಆಸ್ಟ್ರೇಲಿಯಾಕ್ಕೆ ಹೋಲಿಸಿದರೆ ಭಾರತ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಎಷ್ಟೋ ಪಟ್ಟು ಉತ್ತಮವಾಗಿದೆ ಎಂಬ ನಂಬಿಕೆ ಅವರದ್ದು. ಆದರೆ ಭಾರತದ ವೇಗಿಗಳು ಇದನ್ನು ಕಾರ್ಯ ರೂಪಕ್ಕೆ ತರಲಿದ್ದಾರೆಯೇ? ಎಂದು ಜೋನ್ಸ್ 'ಸಿಡ್ನಿ ಮಾರ್ನಿಂಗ್ ಹೆರಾಲ್ಡ್' ನಲ್ಲಿ ಹೇಳಿಕೊಂಡಿದ್ದಾರೆ.

ಸಂಪೂರ್ಣ ನ್ಯಾಯ ಸಮ್ಮತವಲ್ಲ
ಸರಣಿಯನ್ನು ಭಾರತ 2-0ಯಿಂದಲೋ ಅಥವಾ 3-0ಯಿಂದಲೋ ಗೆದ್ದುಕೊಳ್ಳಬಹುದು. ಆಸ್ಟ್ರೇಲಿಯಾ ಒಂದೇ ಒಂದು ಪಂದ್ಯವನ್ನೂ ಗೆಲ್ಲದೆ ಇರಬಹುದು. ಆದರೆ ಈ ಸರಣಿ ಗೆಲುವು ಭಾರತದ ಇತಿಹಾಸದಲ್ಲಿ ಅಷ್ಟೇನೂ ನ್ಯಾಯಸಮ್ಮತ ಗೆಲುವಾಗಿ ಗುರುತಿಸಿಕೊಳ್ಳಲಾರದು' ಎಂದು ಡೀನ್ ಅಭಿಪ್ರಾಯಿಸಿದ್ದಾರೆ.

ಉತ್ತಮ ಪ್ರದರ್ಶನ ನೀಡಿಲ್ಲ
ಇದು ಭಾರತದ್ದೊಂದೇ ಕತೆಯಲ್ಲ. ಬಹುತೇಕ ದೇಶಗಳು ಅಂತಾರಾಷ್ಟ್ರೀಯ ಪ್ರವಾಸದ ವೇಳೆ ಪಾರಮ್ಯ ಮೆರೆಯೋದು ಕಡಿಮೆ. ತವರು ನೆಲದಲ್ಲಿ ನಡೆಯುವ ಪಂದ್ಯಗಳ ವೇಳೆ ಆಯಾ ದೇಶಗಳು ಕೊಂಚ ಹೆಚ್ಚೆ ಆತ್ಮವಿಶ್ವಾಸ ಹೊಂದಿರುತ್ತವೆ. ಭಾರತವೂ ಅಂತಾರಾಷ್ಟ್ರೀಯ ಸರಣಿಗಳಲ್ಲಿ ಪ್ರಾಬಲ್ಯ ಮೆರೆದಿದ್ದು ಕಡಿಮೆಯೆ.

ಹೆಚ್ಚು ರನ್ ಗಳಿಸುತ್ತಿದ್ದವರೇ ಇಲ್ಲ
'ಸಾಮಾನ್ಯವಾಗಿ ತವರಿನಲ್ಲಿ ನಡೆಯುವ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸೋದು ಸುಲಭದ ಮಾತಲ್ಲ. ಆದರೆ ಆಸ್ಟ್ರೇಲಿಯಾ ತಂಡದ ಮೊತ್ತದಲ್ಲಿ ಸುಮಾರು 40 ಶೇ. ರನ್ ಕೊಡುಗೆ ನೀಡುವ ಸ್ಮಿತ್, ವಾರ್ನರ್ ಅವರೇ ಈಗ ತಂಡಲ್ಲಿ ಇಲ್ಲ. ಆಸೀಸ್ ನಲ್ಲೀಗ ಅವರ ಸ್ಥಾನ ತುಂಬುವವರು ಯಾರಿದ್ದಾರೆ?' ಎಂದು ಡೀನ್ ಜೋನ್ಸ್ ಪ್ರಶ್ನಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications