IPL 2025: ಹರಾಜಿಗೂ ಮುನ್ನ ಕನಸಿನ ತಂಡ ಸೇರ್ತಾರಾ ರಿಂಕು ಸಿಂಗ್?
ಆಗಸ್ಟ್ 19 ಸೋಮವಾರ, 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಸಿದ್ಧತೆ ಆರಂಭಿಸಿದೆ. ಮುಂದಿನ ಐಪಿಎಲ್ ಆವೃತ್ತಿಗೂ ಮೊದಲು ಮೆಗಾ ಹರಾಜು ನಡೆಯಲಿದೆ. ಈ ಸಂಬಂಧ ಐಪಿಎಲ್ ಫ್ರಾಂಚೈಸಿಗಳು ಬಿಸಿಸಿಐ ಜತೆ ಸಭೆ ನಡೆಸಿವೆ.
ಇಷ್ಟೆಲ್ಲಾ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಅಂತಿಮವಾಗಿಲ್ಲ. ಸದ್ಯದ ನಿಯಮಗಳ ಪ್ರಕಾರ ತಂಡವೊಂದು 4 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು. ಕೆಲವು ತಂಡಗಳು ಅದರ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಬಿಸಿಸಿಐ ಮುಂದೆ ಪ್ರಸ್ತಾಪವನ್ನು ಇಟ್ಟಿವೆ. ಆದರೆ ಇನ್ನುಳಿದ ತಂಡಗಳ ಫ್ರಾಂಚೈಸಿಗಳು ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಐಪಿಎಲ್ 2024ರ ಫೈನಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಸ್ಪೋಟಕ ಯುವ ಬ್ಯಾಟರ್ ರಿಂಕು ಸಿಂಗ್ ಈ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದರು. ಇದೀಗ ರಿಂಕು ಸಿಂಗ್ ಮುಂದಿನ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಾರೋ? ಇಲ್ಲವೋ? ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಕೆಕೆಆರ್ ರಿಂಕು ಅವರನ್ನು ಉಳಿಸಿಕೊಂಡಿದೆಯೇ ಅಥವಾ ಇಲ್ಲವೇ ಎಂಬುದು ಕೂಡ ಎಲ್ಲರಲ್ಲಿ ಕುತೂಹಲ ಹೆಚ್ಚಿಸಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ರಿಂಕುಗೆ ಪ್ರಶ್ನೆ ಕೇಳಿದಾಗ ಅವರು ತಮ್ಮ ಉತ್ತರ ನೀಡಿದ್ದಾರೆ. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ.
ಕನಸಿನ ತಂಡ
ಸ್ಪೋರ್ಟ್ಸ್ ಟಾಕ್‌ನೊಂದಿಗಿನ ವಿಶೇಷ ಸಂದರ್ಶನದಲ್ಲಿ ರಿಂಕು ಸಿಂಗ್ ತಮ್ಮನ್ನು ಕೆಕೆಆರ್ ರಿಟೇನ್ ಮಾಡದೇ ಇದ್ದಲ್ಲಿ, ಯಾವ ತಂಡದ ಪರ ಆಡುತ್ತೇನೆ ಎಂಬುದನ್ನು ತಿಳಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ನನ್ನನ್ನು ಬಿಡುಗಡೆ ಮಾಡಿದರೆ, ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಇರುವುದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸೇರಲು ಬಯಸುತ್ತೇನೆ ಎಂದು ರಿಂಕು ಸಿಂಗ್ ಹೇಳಿದ್ದಾರೆ.
2018ರಲ್ಲಿ ಕೆಕೆಆರ್ ಪರ ರಿಂಕು ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಐಪಿಎಲ್ 2023ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಯಶ್ ದಯಾಳ್ ಬೌಲಿಂಗ್‌ನಲ್ಲಿ ಸತತ ಐದು ಸಿಕ್ಸರ್‌ಗಳನ್ನು ಹೊಡೆಯುವ ಸಂಚಲನ ಮೂಡಿಸಿದ್ದರು.
ಒಂದು ವೇಳೆ ರಿಂಕು ಸಿಂಗ್‌ರನ್ನು ಕೆಕೆಆರ್ ರಿಟೇನ್ ಮಾಡದಿದ್ದರೆ, ಹರಾಜಿನಲ್ಲಿ ಆರ್‌ಸಿಬಿ ಅವರನ್ನು ಖರೀದಿ ಮಾಡುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಅನುಭವಿ ದಿನೇಶ್ ಕಾರ್ತಿಕ್ ವಿದಾಯದ ನಂತರ ಆರ್‌ಸಿಬಿ ತಂಡಕ್ಕೆ ಫಿನಿಶರ್ ಪಾತ್ರ ನಿರ್ವಹಿಸುವ ಆಟಗಾರನ ಅವಶ್ಯಕತೆ ಇದೆ.
ಹೀಗಾಗಿ ರಿಂಕು ಸಿಂಗ್ ಆರ್‌ಸಿಬಿಗೆ ಬಂದರೆ ಡಿಕೆ ಸ್ಥಾನವನ್ನು ತುಂಬಬಹುದು. ಅಲ್ಲದೆ ವಿರಾಟ್ ಕೊಹ್ಲಿಯೊಂದಿಗೆ ರಿಂಕು ಉತ್ತಮ ಸ್ನೇಹವನ್ನು ಸಂಪಾದಿಸಿದ್ದು, ಇದು ಕೂಡ ತಂಡಕ್ಕೆ ಅನುಕೂಲಕರವಾಗಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications