ಧೋನಿ ಟೀಮ್ ಇಂಡಿಯಾಗೆ ಮರಳಲೇಬೇಕು ಎಂದು ಅಚ್ಚರಿ ಮೂಡಿಸಿದ ಗೌತಮ್ ಗಂಭೀರ್!

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ಸುದ್ದಿಕೇಂದ್ರಕ್ಕೆ ಬಂದಿದ್ದಾರೆ. ವಿಶ್ವಕಪ್ ಮುಂದೂಡಿಕೆಯಾಗಿರುವ ಕಾರಣ ಐಪಿಎಲ್‌ಗೆ ವೇದಿಕೆ ದೊರೆತಿದೆ. ಈ ಮಧ್ಯೆ ಧೋನಿ ಟೀಮ್ ಇಂಡಿಯಾ ಮರಳುವ ಚರ್ಚೆ ಮತ್ತೆ ಗರಿಗೆದರಿದೆ. ಈ ಚರ್ಚೆಗೆ ಗೌತಮ್ ಗಂಭೀರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಟೀಮ್ ಇಂಡಿಯಾಗೆ ಮರಳುವ ವಿಚಾರದಲ್ಲಿ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಮಾಜಿ ನಾಯಕ ದೋನಿಯ ಬೆಂಬಲಕ್ಕೆ ನಿಂತಿದ್ದಾರೆ. ಧೋನಿ ನಾಯಕತ್ವದಲ್ಲಿ ಸಾಕಷ್ಟು ಪಂದ್ಯಗಳಲ್ಲಿ ಆಡಿರುವ ಗೌತಮ್ ಗಂಭೀರ್, ಆತ ಅತ್ಯುತ್ತಮ ಫಾರ್ಮ್‌ನಲ್ಲಿದ್ದರೆ ಉತ್ತಮ ಹೊಡೆತಗಳನ್ನು ಬಾರಿಸಬಲ್ಲವರಾಗಿದ್ದರೆ ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಹೇಳಿದ್ದಾರೆ.

ತಂಡಕ್ಕೆ ಮರಳಬೇಕು ಧೋನಿ
ಎಂಎಸ್ ಧೋನಿ ನಿಜವಾಗಿಯೂ ಅತ್ಯುತ್ತಮವಾಗಿ ಚೆಂಡನ್ನು ಬಾರಿಸಬಲ್ಲವರಾಗಿದ್ದರೆ, ಅತ್ಯುತ್ತಮ ಫಾರ್ಮ್‌ನಲ್ಲಿದ್ದರೆ, ಅವರ ಆಟವನ್ನು ಆನಂದಿಸುತ್ತಿದ್ದರೆ ಹಾಗೂ ಅವರ ಕ್ರಮಾಂಕದಲ್ಲಿ ಕಣಕ್ಕಿಳಿದು ತಂಡವನ್ನು ಗೆಲ್ಲಿಸಬಲ್ಲವರಾಗಿದ್ದರೆ ಅವರು ತಂಡಕ್ಕೆ ಮರಳಲೇಬೇಕು ಎಂದಿದ್ದಾರೆ ಗೌತಮ್ ಗಂಭೀರ್

ನಿವೃತ್ತಿಗೆ ಯಾರೂ ಒತ್ತಾಯಿಸಬಾರದು
ಧೋನಿ ಅತ್ಯುತ್ತಮ ಫಿಟ್‌ನೆಸ್ ಮತ್ತು ಅತ್ಯುತ್ತಮ ಫಾರ್ಮ್‌ಅನ್ನು ಹೊಂದಿದ್ದರೆ ಅವರ ಆಟವನ್ನು ಮುಂದುವರಿಸಬೇಕು. ಯಾಕೆಂದರೆ ಯಾರು ಯಾರನ್ನು ಕೂಡ ನಿವೃತ್ತಿಗೆ ಒತ್ತಾಯಿಸಬಾರದು ಎಂದು ಗೌತಮ್ ಗಂಭೀರ್ ಧೋನಿಗೆ ಬೆಂಬಲವನ್ನು ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದಾರೆ.

ನಿವೃತ್ತಿ ವೈಯಕ್ತಿಕ ನಿರ್ಧಾರ
ಧೋನಿಯಂತಾ ಆಟಗಾರರ ಮೇಲೆ ತಜ್ಞರು ವಯಸ್ಸಿನ ಕಾರಣದಿಂದಾಗಿ ಸಾಕಷ್ಟು ಒತ್ತಡವನ್ನು ಹಾಕುತ್ತಾರೆ. ಆದರೆ ಅದೊಂದು ವೈಯಕ್ತಿಕ ನಿರ್ಧಾರ. ಕ್ರಿಕೆಟ್ ಆಡುವುದನ್ನು ಆರಂಭಿಸವುದು ಕೂಡ ನಿಮ್ಮ ವೈಯಕ್ತಿಕ ನಿರ್ಧಾರವೇ ಆಗಿರುವ ಕಾರಣ ನಿವೃತ್ತಿಗೆ ಒತ್ತಡ ಸರಿಯಲ್ಲ ಎಂದಿದ್ದಾರೆ.

ಐಪಿಎಲ್ ಬಗ್ಗೆಯೂ ಗಂಭೀರ್ ಮಾತು
ಇನ್ನು ಇದೆ ಸಂದರ್ಭದಲ್ಲಿ ಗೌತಮ್ ಗಂಭೀರ್ ಯುಎಇನಲ್ಲಿ ಐಪಿಎಲ್ ನಡೆಯುವ ಬಗ್ಗೆ ಪ್ರತಿಕ್ರಿತಿಸಿದರು. ಯುಎಇ ಎಲ್ಲಾ ಮಾದರಿಯ ಕ್ರಿಕೆಟ್ ಆಡಲು ಅತ್ಯಂತ ಪ್ರಶಸ್ತವಾದ ಸ್ಥಳ. ಮಾತ್ರವಲ್ಲದೆ ಇಂತಾ ಸಂದರ್ಭದಲ್ಲಿ ಕ್ರಿಕೆಟ್ ಆಡುವುದು ದೇಶದ ಜನರ ಮನಸ್ಥಿತಿಯನ್ನು ಬದಲಾಯಿಸಲು ಪ್ರಮುಖ ಕಾರಣವಾಗುತ್ತದೆ ಎಂದ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications