Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಪಂತ್ ಹೃದಯವಂತ; ಬಂಗಾರ ಗೆದ್ದರೆ ಬಂಪರ್!

ಆಗಸ್ಟ್ 7 ಬುಧವಾರ, ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಮಂಗಳವಾರ ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಅವರು ಒಂದೇ ಎಸೆತದಲ್ಲಿ ಸಂಚಲನ ಮೂಡಿಸಿದರು. ಜಾವೆಲಿನ್‌ ಥ್ರೋ ಅರ್ಹತಾ ಸುತ್ತಿನಲ್ಲಿ ನೀರಜ್‌ ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲೇ 89.34 ಮೀಟರ್‌ ದೂರ ಎಸೆದು ನೇರವಾಗಿ ಫೈನಲ್‌ಗೆ ಪ್ರವೇಶಿಸಿದರು.

ಇದಾದ ನಂತರ ಸಾಮಾಜಿಕ ಜಾಲತಾಣದಲ್ಲಿ ನೀರಜ್ ಚೋಪ್ರಾ ಕುರಿತಾದ ಬಗ್ಗೆ ಆನೇಕ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದ ನೀರಜ್ ಮತ್ತೊಮ್ಮೆ ಪ್ಯಾರಿಸ್‌ನಲ್ಲಿ ಇಂತಹದ್ದೇ ದಾಖಲೆ ಮಾಡಲು ಹೊರಟಿದ್ದಾರೆ.

If Neeraj Chopra wins gold in Paris Olympics 2024 Rishabh Pant announces prize for fans

ಒಲಿಂಪಿಕ್ಸ್‌ ಫೈನಲ್‌ನಲ್ಲಿ ಭಾರತ vs ಪಾಕಿಸ್ತಾನ

ಜಾವೆಲಿನ್‌ ಥ್ರೋ ಫೈನಲ್‌ ಪಂದ್ಯದಲ್ಲಿ ನೀರಜ್ ಚೋಪ್ರಾ ಭಾರತದ ಕಡೆಯಿಂದ ಅರ್ಹತೆ ಪಡೆದರೆ, ಅರ್ಷದ್ ನದೀಮ್ ಪಾಕಿಸ್ತಾನದ ತಂಡದಿಂದ ಅರ್ಹತೆಗಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರೀಡಾಪಟುಗಳು ಮುಖಾಮುಖಿಯಾಗಲಿದ್ದು, ಉಭಯ ದೇಶಗಳಿಗೆ ಈ ಸ್ಪರ್ಧೆ ಪ್ರತಿಷ್ಠೆಯಾಗಿದೆ. ಫೈನಲ್ ಪಂದ್ಯ ಆಗಸ್ಟ್ 8ರಂದು ಭಾರತೀಯ ಕಾಲಮಾನ ಪ್ರಕಾರ ರಾತ್ರಿ 11.50 ಗಂಟೆಗೆ ಆರಂಭವಾಗಲಿದೆ.

ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಎಸೆದ ದೂರಕ್ಕೆ ಹತ್ತಿರವಾಗಲು ಎಲ್ಲಾ ಆಟಗಾರರು ಪ್ರಯತ್ನಿಸಿದರು. ಆದರೆ ಯಾರೂ ಆ ದೂರವನ್ನು ತಲುಪಲು ಸಾಧ್ಯವಾಗಲಿಲ್ಲ. ಎರಡನೇ ಸ್ಥಾನದಲ್ಲಿರುವ ಗ್ರೆನಡಾದ ಆಂಡರ್ಸನ್ ಪೀಟರ್ಸ್ ಅವರು ಜಾವೆಲಿನ್ ಅನ್ನು 88.63 ಮೀಟರ್‌ಗೆ ಎಸೆದರು. ಪಾಕಿಸ್ತಾನದ ಅರ್ಷದ್ ನದೀಮ್ ನಾಲ್ಕನೇ ಸ್ಥಾನಕ್ಕೆ ಅರ್ಹತೆ ಪಡೆದಿದ್ದು, 86.59 ಮೀಟರ್ ಎಸೆದಿದ್ದರು.

ರಿಷಬ್ ಪಂತ್ ಬಹುಮಾನ ಘೋಷಣೆ

ಪ್ಯಾರಿಸಗ ಒಲಿಂಪಿಕ್ಸ್‌ ಜಾವೆಲಿನ್‌ ಥ್ರೋ ಫೈನಲ್‌ನಲ್ಲಿ ಸ್ಪರ್ಧೆಸಲಿರುವ ನೀರಜ್ ಚೋಪ್ರಾ ಅವರನ್ನು ಬೆಂಬಲಿಸುವ ಅಭಿಮಾನಿಗಳಿಗೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಮತ್ತು ಬ್ಯಾಟರ್ ರಿಷಬ್ ಪಂತ್ ಬಹುಮಾನ ಘೋಷಣೆ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.

ತಮ್ಮ ಅಧಿಕೃತ ಟ್ವೀಟರ್ (ಎಕ್ಸ್)ನಲ್ಲಿ ಪೋಸ್ಟ್ ಮಾಡಿರುವ ಪಂತ್, ನೀರಜ್ ಚೋಪ್ರಾ ನಾಳೆ (ಆಗಸ್ಟ್ 8) ಚಿನ್ನದ ಪದಕ ಗೆದ್ದರೆ, ಟ್ವೀಟ್ ಅನ್ನು ಅತಿಹೆಚ್ಚು ಲೈಕ್ ಮತ್ತು ಕಾಮೆಂಟ್ ಮಾಡುವ ಅದೃಷ್ಟಶಾಲಿ ವಿಜೇತರಿಗೆ ನಾನು 100089 ರೂಪಾಯಿಗಳನ್ನು ನೀಡುತ್ತೇನೆ.

ಜೊತೆಗೆ ಗಮನ ಸೆಳೆಯಲು ಪ್ರಯತ್ನಿಸುವ ಉಳಿದ ಟಾಪ್ 10 ಜನರು ವಿಮಾನ ಟಿಕೆಟ್‌ಗಳನ್ನು ಪಡೆಯುತ್ತಾರೆ. ನನ್ನ ಸಹೋದರನಿಗೆ ಭಾರತ ಮತ್ತು ಪ್ರಪಂಚದ ಹೊರಗಿನಿಂದ ಬೆಂಬಲಿಸೋಣ ಎಂದು ಬರೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಅಭಿಮಾನಿಗಳು ಈ ಟ್ವೀಟ್‌ಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ.

ಮತ್ತೊಂದೆಡೆ ರಿಷಭ್ ಪಂತ್ ಅವರ 'ಎಕ್ಸ್' ಖಾತೆ ಬುಧವಾರ ಬೆಳಗ್ಗೆ ಹ್ಯಾಕ್ ಆಗಿರಬಹುದು ಎಂಬ ಅನುಮಾನುಗಳು ಹುಟ್ಟಿಕೊಂಡಿವೆ. ಏಕೆಂದರೆ ಬೆಳಗ್ಗೆ 7 ಗಂಟೆ ಸಮಯಕ್ಕೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಂಬಂಧಿಸಿದ ಒಂದೆರಡು ಪೋಸ್ಟ್‌ಗಳನ್ನು ಮಾಡಲಾಗಿದೆ. ಅಲ್ಲದೆ, ಇದುವರೆಗೆ ಈ ಬಗ್ಗೆ ಕ್ರಿಕೆಟಿಗ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

Story first published: Wednesday, August 7, 2024, 10:24 [IST]
Other articles published on Aug 7, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+