ರಾಹುಲ್‌ಗೆ ವಿಶ್ರಾಂತಿ ನೀಡಬಹುದು, ಚಾಹರ್ ಕಾಯಬೇಕಾಗಬಹುದು: ದೀಪ್‌ದಾಸ್‌ಗುಪ್ತ

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯಕ್ಕೆ ಈಗ ಎರಡು ತಂಡಗಳು ಸಜ್ಜಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಎರಡು ತಂಡಗಳು ಕೂಡ ಸೋಲು ಗೆಲುವಿನ ರುಚಿ ಕಂಡಿದ್ದು ಸರಣಿ ಸಮಬಲಗೊಂಡಿದೆ. ಭಾರತದ ಆಡುವ ಬಳಗದ ಸಂಯೋಜನೆ ಈಗ ಸಾಕಷ್ಟು ಚರ್ಚೆಯಾಗುತ್ತಿದೆ. ಮಾಜಿ ಕ್ರಿಕೆಟಿಗ ದೀಪ್‌ದಾಸ್ ಗುಪ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಟೀಮ್ ಇಂಡಿಯಾ ಪರವಾಗಿ ಚೊಚ್ಚಲ ಬಾರಿಗೆ ಕಣಕ್ಕಿಳಿದು ಅರ್ಧ ಶತಕವನ್ನು ಬಾರಿಸಿ ಮಿಂಚಿದ ಇಶಾನ್ ಕಿಶನ್ ಇನ್ನೊಂದು ಅವಕಾಶವನ್ನು ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳಬೇಕಾದರೆ ಕೆಎಲ್ ರಾಹುಲ್‌ಗೆ ವಿಶ್ರಾಂತಿ ನೀಡುವುದು ತರ್ಕಬದ್ದವಾಗಿದೆ ಎಂದು ದೀಪ್‌ದಾಸ್ ಗುಪ್ತ ಹೇಳಿದ್ದಾರೆ.

ರಾಹುಲ್ ಅದ್ಭುತ ಆಟಗಾರ
ಕೆಎಲ್ ರಾಹುಲ್ ಓರ್ವ ಅದ್ಭುತವಾದ ಆಟಗಾರ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಅವರು ಎಡವಿದರು. ಕೆಲ ಸಮಯಗಳಿಂದ ಅವರು ಸ್ಪರ್ಧಾತ್ಮಕ ಕ್ರಿಕೆಟ್ ಆಡದಿರುವುದು ಅದಕ್ಕೆ ಕಾರಣವಾಗಿರಬಹುದು. ಆದರೆ ಆತ ಶೀಘ್ರವಾಗಿ ಇದರಿಂದ ಹೊರಬರಬಲ್ಲವರಾಗಿದ್ದಾರೆ. ಅವರು ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕ್ರಿಕೆಟ್ ಆಡಿದ್ದರು. ಇದೆಲ್ಲವನ್ನೂ ನಾವು ಅರ್ಥ ಮಾಡಿಕೊಳ್ಳಬೇಕು ಎಂದು ದೀಪ್‌ದಾಸ್‌ಗುಪ್ತ ಹೇಳಿದ್ದಾರೆ.

ಭುವಿ ಪ್ರದರ್ಶನ ಅದ್ಭುತ
ಇನ್ನು ಭಾರತದ ಬೌಲಿಂಗ್ ವಿಭಾಗದ ಬಗ್ಗೆಯೂ ದೀಪ್‌ದಾಸ್ ಗುಪ್ತ ಅಭಿಪ್ರಾಯವನ್ನು ಹಂಚಿಕೊಂಡರು. ಭುವನೇಶ್ವರ್ ಕುಮಾರ್ ಅದ್ಭುತವಾಗಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅವರ ಲಭ್ಯತೆಯಲ್ಲಿ ದೀಪಕ್ ಚಾಹರ್ ತನ್ನ ಅವಕಾಶಕ್ಕಾಗಿ ಇನ್ನೂ ಕಾಯಬೇಕಾಬಹುದು ಎಂದು ಹೇಳಿದ್ದಾರೆ. ಇನ್ನು ಮೂರನೇ ಟಿ20 ಪಂದ್ಯ ಕೆಂಪು ಮಣ್ಣಿನಲ್ಲಿ ಆಡಲಾಗುತ್ತದೆ. ಇದು ಸ್ಪಿನ್ನರ್‌ಗಳಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಯಿದೆ ಎಂದು ದೀಪ್‌ದಾಸ್‌ಗುಪ್ತ ಅಭಿಪ್ರಾಯಪಟ್ಟಿದ್ದಾರೆ.

ತಂಡಕ್ಕೆ ಮರಳಲಿರುವ ರೋಹಿತ್
ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಮಂಗಳವಾರ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಭಾರತ ಎರಡನೇ ಪಂದ್ಯದ ತಂಡವನ್ನು ಬಹುತೇಕ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ರೋಹಿತ್ ಶರ್ಮಾ ಆಡುವ ಬಳಗದಲ್ಲಿ ಸೇರಿಸಿಕೊಳ್ಳುವುದರಿಂದ ಕೆಎಲ್ ರಾಹುಲ್ ಈ ಪಂದ್ಯದಲ್ಲಿ ವಿಶ್ರಾಂತಿ ಪಡೆಯುವ ಸಾಧ್ಯತೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications