ಟಿ20 ವಿಶ್ವಕಪ್‌ಗಾಗಿ ಈಗಾಗಲೇ ಭರ್ಜರಿ ತಯಾರಿ ನಡೆದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ತಂಡಗಳು ಸಿದ್ಧತೆಗಳನ್ನು ನಡೆಸಿವೆ. ವಿಶ್ವದ ಸ್ಟಾರ್ ಆಟಗಾರರು ಈಗ ಐಪಿಎಲ್ ಆಡುತ್ತಿದ್ದು, ಎಲ್ಲರ ಕಣ್ಣು ಈ ಆಟಗಾರರ ಮೇಲೆ ನೆಟ್ಟಿದೆ. ಈ ಆಟಗಾರರು ಈ ಲೀಗ್‌ನಲ್ಲಿ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ತಂಡದಲ್ಲಿ ಅವಕಾಶ ನೀಡುವ ಆಶಯ ಹೊಂದಿದೆ.
ಈಗಾಗಲೇ ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ದೇಶಗಳು ಟಿ20 ವಿಶ್ವಕಪ್ ಆಯೋಜಿಸುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಇನ್ನು ಭಾರತದಲ್ಲಿ ಐಪಿಎಲ್ ನಡೆಯುತ್ತಿದ್ದು, ಈ ಲೀಗ್‌ನ ಪ್ಲೇ ಆಫ್ ಆಡುವ ಸಮಯದಲ್ಲೇ, ತಂಡಗಳು ಆತಿಥ್ಯ ನೀಡಿರುವ ರಾಷ್ಟ್ರಕ್ಕೆ ಹೋಗಬೇಕಾಗುತ್ತದೆ. ಪ್ಲೇ ಆಫ್‌ಗೆ ಅರ್ಹತೆ ಪಡೆದ ತಂಡಗಳಲ್ಲಿನ ಆಟಗಾರರು ತಂಡ ಸೇರುವುದು ಯಾವಾಗ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಐಪಿಎಲ್ ಪ್ಲೇಆಫ್‌ಗೆ ಪ್ರವೇಶಿಸಲು ವಿಫಲರಾದ ತಂಡಗಳ ಆಟಗಾರರು ಪಂದ್ಯಾವಳಿಯ ಮಧ್ಯದಲ್ಲಿ ನಿರ್ಗಮಿಸಬೇಕಾಗುತ್ತದೆ.

ಜೂನ್ 2 ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ಇದೇ ವೇಳೆ ಈ ಟೂರ್ನಿ ಆರಂಭಕ್ಕೂ ಮುನ್ನ ಭಾರತ ತಂಡ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಈ ಅಭ್ಯಾಸ ಪಂದ್ಯದಲ್ಲಿ ತಂಡಗಳು ತಮ್ಮ ಆಡುವ ಆಟಗಾರರ ಈ ಪಂದ್ಯಗಳಲ್ಲಿ ಪ್ರಯೋಗಿಸಬಹುದು. ಪ್ಲೇ ಆಫ್‌ಗೆ ಅರ್ಹತೆ ಪಡೆದ ತಂಡದ ಭಾರತೀಯ ಆಟಗಾರರು ಟಿ20 ವಿಶ್ವಕಪ್‌ಗಾಗಿ ಮೇ 27 ಮತ್ತು ಮೇ 28 ರಂದು ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ನಂಬಲಾಗಿದೆ. ಮೇ 20 ರಿಂದ ಐಪಿಎಲ್ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿವೆ. ಈ ಋತುವಿನ ಫೈನಲ್ ಮೇ 26 ರಂದು ಚೆಪಾಕ್‌ನಲ್ಲಿ ನಡೆಯಲಿದೆ.
ಈಗಾಗಲೇ ಟಿ20 ವಿಶ್ವಕಪ್‌ನ ಆಟಗಾರರನ್ನು ಆಯ್ಕೆ ಮಾಡುವ ಅವಶ್ಯಕತೆ ಇದೆ. ಆದರೆ ಈಗಾಗಲೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ಬಹು ಚರ್ಚೆಯ ವಿಷಯವಾಗಿದ್ದ ಟಿ20 ವಿಶ್ವಕಪ್‌ಗೆ ನಾಯಕ ಯಾರು ಎಂಬ ಪ್ರಶ್ನೆಗೆ ಫುಲ್ ಸ್ಟಾಪ್ ಹಾಕಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಟೀಮ್ ಇಂಡಿಯಾ ಪರ ಆಡುತ್ತಿರುವ ಯುವ ಆಟಗಾರರ ಆಟದ ಮೇಲೆ ಬಿಸಿಸಿಐ ಕಣ್ಣು ನೆಟ್ಟಿದೆ. ಐಪಿಎಲ್ ಈ ಯಂಗ್ ಪ್ಲೇಯರ್ಸ್ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಟಿ20 ವಿಶ್ವಕಪ್ ನಲ್ಲಿ ಅವರನ್ನು ಆಯ್ಕೆ ಮಾಡಬೇಕಾ ಬೇಡವಾ ಎಂಬುದು ಇತ್ಯರ್ಥವಾಗಲಿದೆ.

ವಿರಾಟ್ ಕೊಹ್ಲಿ ಅವರಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ನೀಡಬೇಕಾ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಈ ಎಲ್ಲ ಪ್ರಶ್ನೆಗಳಿಗೆ ವಿರಾಟ್, ಸೋಮವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಅಂಗಳದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಉತ್ತರ ನೀಡಿದ್ದಾರೆ. ಈ ಮೂಲಕ ಬಿಸಿಸಿಐ ಆಯ್ಕೆ ಸಮಿತಿಗೆ ನನ್ನನ್ನು ಆಯ್ಕೆಯ ವೇಳೆ ಪರಿಗಣಿಸಿ ಎಂದು ಸಂದೇಶ ಸಾರಿದ್ದಾರೆ.