ಕಿರಿಯರ ವಿಭಾಗದಲ್ಲಿ ಬೌನ್ಸರ್ ನಿಷೇಧಿಸಿದರೆ ಉನ್ನತ ಮಟ್ಟದಲ್ಲೂ ನಿಷೇಧವಾಗಲಿ: ಮೈಕಲ್ ವಾನ್

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿಭಾಗದ ಕ್ರಿಕೆಟ್ ಪಂದ್ಯಗಳಲ್ಲಿ ಬೌನ್ಸರ್ಗಳನ್ನು ನಿಷೇಧಿಸುವುದು ವಿಲಕ್ಷಣ ನಿರ್ಧಾರ. ಇದರಿಂದಾಗಿ ಯುವ ಬ್ಯಾಟ್ಸ್‌ಮನ್‌ಗಳು ಉನ್ನತ ಮಟ್ಟದ ಕ್ರಿಕೆಟ್‌ನಲ್ಲಿ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ ಎಂದು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕೆಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಕನ್ಕ್ಯುಶನ್ ತಜ್ಞ ಮೈಕೆಲ್ ಟರ್ನರ್, ಭವಿಷ್ಯದ ದೃಷ್ಠಿಯಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರರ ವಿರುದ್ಧ ಶಾರ್ಟ್ ಪಿಚ್ ಬೌಲಿಂಗ್ ಅನ್ನು ನಿಷೇಧಿಸುವುದನ್ನು ಪರಿಗಣಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ಬೆಳವಣಿಗೆಗೆ ಮೈಕಲ್ ವಾನ್ ಪ್ರತಿಕ್ರಿಯಿಸಿದ್ದಾರೆ.
ಮೈಕಲ್ ಟರ್ನರ್ ಅವರ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲು ಯಾವುದೇ ಅರ್ಹತೆಯನ್ನು ಹೊಂದಿಲ್ಲ ಎಂದಿದ್ದಾರೆ. ಮೈಕಲ್ ಟರ್ನರ್ ನೀಡಿದ ಈ ಸಲಹೆಯನ್ನು ಇಂಗ್ಲೆಂಡ್ ಕ್ರಿಕೆಟ್ ತಮಡದ ಮಾಜಿ ನಾಯಕ ಮೈಕಲ್ ವಾನ್ ಇದೊಂದು ಹಾಸ್ಯಾಸ್ಪವಾದ ಸಲಹೆ. ಕೆಳ ದರ್ಜೆಯಲ್ಲಿ ಆಟಗಾರರು ಬೌನ್ಸರ್‌ಗಳನ್ನು ಎದುರಿಸಲು ಸಾಧ್ಯವಾಗದಿದ್ದರೆ ಉನ್ನತ ಮಟ್ಟದಲ್ಲಿ ಎದುರಿಸುವುದು ಸುಲಭವಲ್ಲ ಎಂದು ಮೈಕಲ್ ಬಾನ್ ಅಭಿಪ್ರಾಯ ಪಟ್ಟಿದ್ದಾರೆ.
"ಸಣ್ಣ ಹಂತದಲ್ಲಿ ಕಿರಿಯ ಆಟಗಾರರು ಬೌನ್ಸರ್‌ಗಳನ್ನು ಎದುರಿಸಲು ಸಾಧ್ಯವಾಗದಿದ್ದರೆ ಉನ್ನತ ಮಟ್ಟದಲ್ಲಿ ಅವರು ಕ್ರಿಕೆಟ್ ಪಂದ್ಯಗಳನ್ನು ಆಡುವಾಗ ಮೊದಲ ಬಾರಿಗೆ ಬೌನ್ಸರ್‌ಗಳನ್ನು ಎದುರಿಸಬೇಕಾಗುತ್ತದೆ. ಆಗ ಅವರು ಅದನ್ನು ಎದುರಿಸಲು ಬೇಕಾದ ಸಾಮರ್ಥ್ಯವನ್ನು ಹೊಂದಿರುವುದಿಲ್ಲ ಎಂದು ಮೈಕಲ್ ವಾನ್ ಪ್ರತಿಕ್ರಿಯಿಸಿದ್ದಾರೆ.
"ಜೂನಿಯರ್ ಮಟ್ಟದಲ್ಲಿ ಮಕ್ಕಳು ಕೋಚಿಂಗ್ ಪಡೆಯುವುದನ್ನು ನಾನು ಕಂಡಿದ್ದೇನೆ. ಅದೆಲ್ಲವೂ ಅತಿ ಸಣ್ಣ ಶಾರ್ಟ್‌ಪಿಚ್ ಎಸೆತಗಳಾಗಿವೆ. ಬೌಲರ್‌ಗಳು ಕೂಡ ಮಕ್ಕಳೇ ಆಗಿರುವ ಕಾರಣ ಅವರಲ್ಲೂ ಹೆಚ್ಚಿನ ಸಾಮರ್ಥ್ಯವಿರಲಾರದು. ಅಲ್ಲದೆ ಪಿಚ್‌ಗಳು ಕೂಡ ನಿಧಾನವಾಗಿರುತ್ತದೆ" ಎಂದು ಮೈಕಲ್ ವಾನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications