
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಅಂತ್ಯವಾಗಿದ್ದು ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಇದಕ್ಕೂ ಹಿಂದಿನ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿಯೂ ಭಾರತ ಉತ್ತಮ ಪ್ರದರ್ಶನ ನೀಡಿ ಸೀಮಿತ ಓವರ್‌ಗಳ ಎರಡು ಸರಣಿಯನ್ನು ಕೂಡ ವೈಟ್‌ವಾಶ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬರು ತಂಡದ ನಾಯಕ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ.
ಶ್ರೀಲಂಕಾ ವಿರುದ್ಧಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 62 ರನ್‌ಗಳ ಅಂತರದ ಗೆಲುವು ಸಾಧಿಸಿದ ಬಳಿಕ ಭಾರತದ ಮಾಜಿ ಆಲ್‌ರೌಂಡರ್ ರೀತಿಂದರ್ ಸಿಂಗ್ ಸೋಧಿ ರೋಹಿತ್ ಶರ್ಮಾ ನಾಯಕತ್ವದ ಶೈಲಿಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಈ ಸಂದರ್ಬದಲ್ಲಿ ಅವರು ರೋಹಿತ್ ಶರ್ಮಾ ಉತ್ತಮ ಆಟಗಾರರಿಗೆ ರೋಹಿತ್ ಶರ್ಮಾ ಹೇಗೆ ಬೆಂಬಲವಾಗಿ ನಿಲ್ಲುತ್ತಾರೋ ಹಾಗೆಯೇ ಕಳಪೆ ಆಡುವ ಆಟಗಾರರಿಗೆ ಮನೆಗೆ ಹೋಗುವ ದಾರಿಯನ್ನು ತೋರಿಸುವ ಸಾಮರ್ರ್ಥಯವನ್ನು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಟಗಾರರನ್ನು ರೋಹಿತ್ ನಂಬುತ್ತಾರೆ: ಪಾಡ್‌ಕಾಸ್ಟ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರೀತಿಂದರ್ ಸಿಂಗ್ ಸೋಧಿ "ರೋಹಿತ್ ತನ್ನ ತಂಡದ ಆಟಗಾರರ ಮೇಲೆ ನಂಬಿಕೆಯನ್ನು ಹೊಂದಿದ್ದಾರೆ. ಅದು ಸಾಕಷ್ಟು ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ. ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ಅಸಾಧಾರಣ ಆಟಗಾರರು. ಹಲವು ಸಂದರ್ಭಗಳಲ್ಲಿ ಅವರು ಯಶಸ್ಸು ಸಾಧಿಸದಿರಬಹುದು. ಆದರೆ ಯಾವಾಗ ಅವರಿಂದ ಉತ್ತಮ ಪ್ರದರ್ಶನ ಬರುತ್ತದೋ ಅಂದು ದೊಡ್ಡ ಗೆಲುವು ಅವರಿಂದ ಲಭಿಸುತ್ತದೆ. ರೋಹಿತ್ ಶರ್ಮಾ ಈ ಆಟಗಾರರನ್ನು ಉತ್ತಮವಾಗಿ ಬೆಳೆಸುತ್ತಿದ್ದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದ್ದಾರೆ" ಎಂದಿದ್ದಾರೆ.
ಹೊರಹೋಗುವ ದಾರಿಯನ್ನೂ ತೋರಿಸುತ್ತಾರೆ: ಇನ್ನು ಇದೇ ಸಂದರ್ಭದಲ್ಲಿ ರೀತಿಂದರ್ ಸೋಧಿ ನಾಯಕನಾಗಿ ರೋಹಿತ್ ಶರ್ಮಾ ಸ್ಪಷ್ಟ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದಿದ್ದಾರೆ. "ನೀವು ಉತ್ತಮ ಆಟಗಾರನಾಗಿದ್ದರೆ ಆತ ನಿಮ್ಮನ್ನು ಮಾಧ್ಯಮದ ಮುಂದೆಯೂ ಬೆಂಬಲಿಸುತ್ತಾರೆ. ಆದೆ ನೀವು ಉತ್ತಮವಾಗಿ ಆಡುತ್ತಿಲ್ಲವಾದರೆ ಅವರೇ ನಿಮಗೆ ಹೊರಹೋಗುವ ದಾರಿಯನ್ನೂ ತೋರಿಸುತ್ತಾರೆ. ಯಶಸ್ಸನ್ನು ಸಾಧಿಸಬೇಕಾದರೆ ಈ ರೀತಿಯ ಗುಣಗಳನ್ನು ನೀವು ಹೊಂದಲೇಬೇಕಾಗುತ್ತದೆ" ಎಂದು ರೀತಿಂದರ್ ಸಿಂಗ್ ಸೋಧಿ ಅಭಿಪ್ರಾಯಪಟ್ಟಿದ್ದಾರೆ.
ಮೊದಲ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ: ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕದ ಆಟಗಾರರು ಅಮೋಘ ಪ್ರದರ್ಶನ ನೀಡಿದ್ದಾರೆ. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಜೊತೆಗೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಐಯ್ಯರ್ ಕೂಡ ಸ್ಪೋಟಕ ಪ್ರದರ್ಶನ ನೀಡಿದ್ದಾರೆ. ಇದರ ಪರಿಣಾಮವಾಗಿ ಭಾರತ 199 ರನ್‌ಗಳ ಬೃಹತ್ ಮೊತ್ತವನನ್ಉ ಗಳಿಸಿತು. ನಂತರ ಬೌಲಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನಿಡಿದ ಭಾರತ ತಂಡ ಶ್ರೀಲಂಕಾವನ್ನು 137 ರನ್‌ಗಳಿಗೆ ಕಟ್ಟಿಹಾಕಿದೆ.