ಶನಿವಾರ, ಫೆಬ್ರವರಿ 17ರಂದು ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ 2024ರ ILT20 ಕ್ರಿಕೆಟ್ ಲೀಗ್ ಫೈನಲ್‌ನಲ್ಲಿ ದುಬೈ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಮುಂಬೈ ಇಂಡಿಯನ್ಸ್ ಎಮಿರೇಟ್ಸ್ ಇಂಟರ್‌ನ್ಯಾಷನಲ್ ಟಿ20 ಲೀಗ್‌ನ ಎರಡನೇ ಆವೃತ್ತಿಯ ಚಾಂಪಿಯನ್ ಪಟ್ಟಕ್ಕೇರಿತು.
ಮೊದಲು ಬ್ಯಾಟಿಂಗ್ ಮಾಡಿದ MI ಎಮಿರೇಟ್ಸ್ ತಂಡ ನಾಯಕ ನಿಕೋಲಸ್ ಪೂರನ್ ಅವರ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 208 ರನ್‌ಗಳನ್ನು ಕಲೆಹಾಕಿತು. ಎದುರಾಳಿ ತಂಡಕ್ಕೆ ಬೃಹತ್ ಗುರಿಯನ್ನು ನೀಡಿತು.

209 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ದುಬೈ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 163 ರನ್‌ಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು. ಇದರ ಪರಿಣಾಮವಾಗಿ ಫೈನಲ್ ಪಂದ್ಯದಲ್ಲಿ 45 ರನ್‌ಗಳಿಂದ ಸೋಲು ಕಂಡಿತು.
MI ಎಮಿರೇಟ್ಸ್ ತಂಡದ ಪರ ಬ್ಯಾಟಿಂಗ್ ಆರಂಭಿಸಿದ ಮುಹಮ್ಮದ್ ವಸೀಮ್ (43 ರನ್) ಮತ್ತು ಕುಸಾಲ್ ಪೆರೆರಾ (38 ರನ್) ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ ಓವರ್‌ಗಳಲ್ಲಿ 77 ರನ್‌ಗಳ ಜೊತೆಯಾಟ ನೀಡಿದರು.

ನಂತರ ಬಂದ ಆಂಡ್ರೆ ಫ್ಲೆಚರ್ 37 ಎಸೆತಗಳಲ್ಲಿ 53 ರನ್‌ಗಳ ಅರ್ಧಶತಕ ಮತ್ತು ನಾಯಕ ನಿಕೋಲಸ್ ಪೂರನ್ 27 ಎಸೆತಗಳಲ್ಲಿ 57 ರನ್ ಗಳಿಸಿ ಬಾರಿಸಿದರು.
ದುಬೈ ಕ್ಯಾಪಿಟಲ್ಸ್ ಪರ ಬೌಲಿಂಗ್‌ನಲ್ಲಿ ಒಲ್ಲಿ ಸ್ಟೋನ್, ಸಿಕಂದರ್ ರಜಾ ಮತ್ತು ಜಹೀರ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
ದುಬೈ ಕ್ಯಾಪಿಟಲ್ಸ್ ಪರ ಬ್ಯಾಟಿಂಗ್ ಆರಂಭಿಸಿದ ಲೆಯುಸ್ ಡು ಪ್ಲೂಯ್ ಮತ್ತು ಟಾಮ್ ಬ್ಯಾಂಟನ್ ಉತ್ತಮ ಆರಂಭ ನೀಡಲಿಲ್ಲ. ಲೆಯುಸ್ ಡು ಪ್ಲೂಯ್ ಅವರನ್ನು ಎಡಗೈ ಸ್ಪಿನ್ನರ್ ಅಕೇಲ್ ಹೊಸೈನ್ ಡಕ್‌ಗೆ ಔಟ್ ಮಾಡಿದರು. ಅಮ್ ಅಬೆಲ್ 14 ರನ್ ಗಳಿಸಿ ಔಟಾದರು.

ಆ ಬಳಿಕ ಟಾಮ್ ಬ್ಯಾಂಟನ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಉತ್ತಮ ಜೊತೆಯಾಟ ನಿರ್ಮಿಸಲು ಪ್ರಯತ್ನಿಸಿದರು. ಸ್ಯಾಮ್ ಬಿಲ್ಲಿಂಗ್ಸ್ 40 ರನ್‌ಗಳೊಂದಿಗೆ ತಂಡದ ಪರ ಅಗ್ರ ಸ್ಕೋರರ್ ಆದರು. ಕೊನೆಯಲ್ಲಿ ಸಿಕಂದರ್ ರಜಾ ಮತ್ತು ರೋವ್‌ಮನ್ ಪೊವೆಲ್ ಅಬ್ಬರಿಸದ ಕಾರಣ ದುಬೈ ಕ್ಯಾಪಿಟಲ್ಸ್ ದೊಡ್ಡ ಗುರಿ ತಲುಪಲು ಸಾಧ್ಯವಾಗಲಿಲ್ಲ.
ಬೌಲಿಂಗ್‌ನಲ್ಲಿ ಎಂಐ ಎಮಿರೇಟ್ಸ್ ತಂಡದ ಪರ ಟ್ರೆಂಟ್ ಬೌಲ್ಟ್ ಮತ್ತು ವಿಜಯಕಾಂತ್ ವ್ಯಾಸಕಾಂತ್ ತಲಾ ಎರಡು ವಿಕೆಟ್ ಪಡೆದರು.
ಎಂಐ ಎಮಿರೇಟ್ಸ್ ತಂಡದ ನಿಕೋಲಸ್ ಪೂರನ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರೆ, ದುಬೈ ಕ್ಯಾಪಿಟಲ್ಸ್ ತಂಡದ ಸಿಕಂದರ್ ರಾಝಾ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
ವಿಜೇತ ತಂಡ: ಎಂಐ ಎಮಿರೇಟ್ಸ್ - 700,000 ಯುಎಸ್ ಡಾಲರ್ (5,80,91,950 ರೂಪಾಯಿ)
ರನ್ನರ್-ಅಪ್ ತಂಡ: ದುಬೈ ಕ್ಯಾಪಿಟಲ್ಸ್ - 300,000 ಯುಎಸ್ ಡಾಲರ್ (2,48,96,550 ರೂಪಾಯಿ)
ಪಂದ್ಯಶ್ರೇಷ್ಠ ಆಟಗಾರ; ನಿಕೋಲಸ್ ಪೂರನ್ (27 ಎಸೆತಗಳಲ್ಲಿ 57 ರನ್) 1500 ಡಾಲರ್ (1,24,482 ರೂಪಾಯಿ)
ಪಂದ್ಯದ ಅತಿ ಉದ್ದದ ಸಿಕ್ಸ್; ಆಂಡ್ರೆ ಫ್ಲೆಚರ್ (110 ಮೀ) 1500 ಡಾಲರ್ (1,24,482 ರೂಪಾಯಿ)
ಲೀಗ್‌ನಲ್ಲಿ ಅತಿ ಹೆಚ್ಚು ಸಿಕ್ಸರ್; ನಿಕೋಲಸ್ ಪೂರನ್ (31 ಸಿಕ್ಸರ್) 15000 ಡಾಲರ್ (12,44,827 ರೂಪಾಯಿ)
ಲೀಗ್‌ನ ಅತ್ಯುತ್ತಮ ಕ್ಯಾಚ್; ಸ್ಯಾಮ್ ಬಿಲ್ಲಿಂಗ್ಸ್ (ಪಂದ್ಯ 2, ವಿಲ್ ಸ್ಮೀಡ್ ಕ್ಯಾಚ್) 15000 ಡಾಲರ್ (12,44,827 ರೂಪಾಯಿ)
ಲೀಗ್‌ನ ಅತ್ಯುತ್ತಮ ಬೌಲರ್; ಫಜಲ್ಹಕ್ ಫಾರೂಕಿ (8 ಪಂದ್ಯ 17 ವಿಕೆಟ್) 15000 ಡಾಲರ್ (12,44,827 ರೂಪಾಯಿ)
ಲೀಗ್‌ನ ಅತ್ಯುತ್ತಮ ಬ್ಯಾಟರ್: ಜೇಮ್ಸ್ ವಿನ್ಸ್ - 356 ರನ್‌ಗಳು, 15000 ಡಾಲರ್ (12,44,827 ರೂಪಾಯಿ)
ಅತ್ಯುತ್ತಮ ಯುಎಇ ಆಟಗಾರ; ಮೊಹಮ್ಮದ್ ವಸೀಮ್ - 321 ರನ್‌ಗಳು, 15000 ಡಾಲರ್ (12,44,827 ರೂಪಾಯಿ)
ಸರಣಿ ಶ್ರೇಷ್ಠ, ಮೌಲ್ಯಯುತ ಆಟಗಾರ: ಸಿಕಂದರ್ ರಜಾ - 313 ರನ್‌ಗಳು, 13 ವಿಕೆಟ್‌ಗಳು, 15000 ಡಾಲರ್ (12,44,827 ರೂಪಾಯಿ)