BCCI: ಇಂಪ್ಯಾಕ್ಟ್ ಪ್ಲೇಯರ್ ನಿಯಮದ ವಿರುದ್ಧ ಬಿಸಿಸಿಐ ದಿಢೀರ್ ಮಹತ್ವದ ನಿರ್ಧಾರ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಆವೃತ್ತಿಗೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹ್ವತದ ನಿರ್ಧಾರವನ್ನು ತೆಗೆದುಕೊಂಡಿದೆ. ಇತ್ತೀಚೆಗೆ ಮೆಗಾ ಹರಾಜಿನಲ್ಲಿ ಐಪಿಎಲ್ ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆ ನಿಯಮಗಳನ್ನು ಬಿಸಿಸಿಐ ಹೊರಡಿಸಿತ್ತು. ಇದೀಗ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ವಿರುದ್ಧ ಬಿಸಿಸಿಐ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ನವೆಂಬರ್ 23 ರಿಂದ ಆರಂಭವಾಗಲಿರುವ ದೇಶೀಯ ಕ್ರಿಕೆಟ್ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ತೆಗೆದುಹಾಕಲು ಬಿಸಿಸಿಐ ನಿರ್ಧರಿಸಿದೆ. ಆದರೆ, ಸದ್ಯಕ್ಕೆ ಐಪಿಎಲ್ 2025ಕ್ಕೆ ಯಾವುದೇ ನಿರ್ಬಂಧ ಹೇರಲಾಗಿಲ್ಲ. ಈ ಸಂಬಂಧ ಬಿಸಿಸಿಐ ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ನೋಟಿಸ್ ನೀಡಿದೆ.

ನೋಟಿಸ್‌ನಲ್ಲಿ ಏನಿದೆ?
ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ನೀಡಿರುವ ನೋಟಿಸ್‌ನಲ್ಲಿ 'ಪ್ರಸ್ತುತ ಆವೃತ್ತಿಯಿಂದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ತೆಗೆದುಹಾಕಲು ಬಿಸಿಸಿಐ ನಿರ್ಧರಿಸಿದೆ ಎಂಬುದನ್ನು ದಯವಿಟ್ಟು ಗಮನಿಸಿ ಎಂದು ಬರೆದಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಮೊದಲ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಳಸಲಾಗಿತ್ತು. ಇದಾದ ಬಳಿಕ ಈ ನಿಯಮವನ್ನು ಐಪಿಎಲ್‌ನಲ್ಲಿ ಅಳವಡಿಸಲಾಗಿತ್ತು. ಇದೀಗ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರದ್ದುಗೊಳಿಸಲಾಗಿದೆ.
ಸ್ಟಾರ್ ಆಟಗಾರರ ವಿರೋಧ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ವಿಶ್ವದ ಸ್ಟಾರ್ ಕ್ರಿಕೆಟಿಗರು ಸಹ ಈ ನಿಯಮವನ್ನು ವಿರೋಧಿಸಿದ್ದರು. ಕಳೆದ ಬಾರಿ ಐಪಿಎಲ್‌ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕೂಡ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ಈ ನಿಯಮ ಜಾರಿಗೆ ಬಂದ ನಂತರ ಬೌಲರ್‌ಗಳ ಸಮಸ್ಯೆ ಇನ್ನಷ್ಟು ಹೆಚ್ಚಿದೆ ಎಂದು ಹೇಳಿದ್ದರು. ಆದರೆ, ಐಪಿಎಲ್‌ನಲ್ಲಿ ಪಂದ್ಯವನ್ನು ರೋಚಕವಾಗಿಸಲು ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಸಲಾಗುತ್ತಿದೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮವೇನು?
ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಪ್ರಕಾರ, ಪಂದ್ಯದ ಟಾಸ್‌ಗೆ ಮೊದಲು, ಎರಡೂ ತಂಡಗಳು 5 ಬದಲಿ ಆಟಗಾರರನ್ನು ಹೆಸರಿಸಬೇಕು. ಅವರಲ್ಲಿ ಯಾರನ್ನಾದರೂ ಪಂದ್ಯದ ಸಮಯದಲ್ಲಿ ಬಳಸಬಹುದು. ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಎನ್ನಲಾಗುತ್ತದೆ. ಅವರನ್ನು 14ನೇ ಓವರ್‌ಗೆ ಮೊದಲು ಬಳಸಬಹುದು. ಈ ನಿಯಮದ ಪ್ರಕಾರ, ತಂಡದಲ್ಲಿ ಮೊದಲ ಆಡುವ ಹನ್ನೊಂದರ ಬಳಗದಲ್ಲಿದ ಒಬ್ಬ ಆಟಗಾರ ಹೊರಗೆ ಹೋಗಬೇಕಾಗುತ್ತದೆ. ಅವರ ಸ್ಥಾನದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಮೈದಾನಕ್ಕೆ ಬರುತ್ತಾರೆ. ಪಂದ್ಯದ ವೇಳೆ ಔಟಾಗಿದ್ದ ಆಟಗಾರನನ್ನು ಮತ್ತೊಮ್ಮೆ ಸೇರಿಸಿಕೊಳ್ಳಲು ಅವಕಾಶವವಿಲ್ಲ. ಈ ನಿಯಮದೊಂದಿಗೆ, ತಂಡಗಳು ಹೆಚ್ಚುವರಿ ಬೌಲರ್ ಅಥವಾ ಬ್ಯಾಟರ್‌ಗಳನ್ನು ಪಡೆಯುವ ಅವಕಾಶವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications