ಕೊಹ್ಲಿ ಮನಗೆದ್ದರೆ ಆರ್‌ಸಿಬಿ, ಟೀಮ್ ಇಂಡಿಯಾ ಅವಕಾಶ ಪಕ್ಕಾ; ಮಾಜಿ ಕ್ರಿಕೆಟಿಗನ ಸಲಹೆ ಬಿಚ್ಚಿಟ್ಟ ಆಕಾಶ್ ದೀಪ್!

ಬೆಂಗಾಲ್ ಮೂಲದ ವೇಗಿ ಆಕಾಶ್ ದೀಪ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದು ಕ್ರಿಕೆಟ್ ಅಭಿಮಾನಿಗಳ ಗಮನವನ್ನು ಸೆಳೆದ ಆಟಗಾರ. ಹೀಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೊಂಚ ಹೆಸರು ಮಾಡಿರುವ ಆಕಾಶ್ ದೀಪ್ ಇತ್ತೀಚಿಗಷ್ಟೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಮಾಜಿ ಕ್ರಿಕೆಟಿಗನೋರ್ವ ವಿರಾಟ್ ಕೊಹ್ಲಿ ಮನಗೆದ್ದರೆ ನಿನಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ಅವಕಾಶ ಮತ್ತು ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಅವಕಾಶ ಸಿಗಲಿದೆ ಎಂಬ ಸಲಹೆ ನೀಡಿದ್ದ ವಿಷಯವನ್ನು ಬಿಚ್ಚಿಟ್ಟಿದ್ದಾರೆ.
2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಗೆ ಒಳಗಾದ ಬದಲಿ ಆಟಗಾರನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡಿದ್ದ ಆಕಾಶ್ ದೀಪ್ ಅವರಿಗೆ ಆ ಆವೃತ್ತಿಯಲ್ಲಿ ಯಾವುದೇ ಪಂದ್ಯದಲ್ಲಿಯೂ ಕಣಕ್ಕಿಳಿಯುವ ಅವಕಾಶ ಲಭಿಸಲಿಲ್ಲ.
ಹೀಗೆ ತನ್ನ ಮೊದಲ ಐಪಿಎಲ್ ಆವೃತ್ತಿಯಲ್ಲಿ ಯಾವುದೇ ಅವಕಾಶ ಸಿಗದ ಆಕಾಶ್ ದೀಪ್ 2022ರ ಮೆಗಾ ಹರಾಜಿನಲ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ 20 ಲಕ್ಷಕ್ಕೆ ಖರೀದಿಸಲ್ಪಟ್ಟರು ಹಾಗೂ ವಿರಾಟ್ ಕೊಹ್ಲಿ ಸಹ ಆಟಗಾರನಾಗಿ ಟೂರ್ನಿಯಲ್ಲಿ ಕಣಕ್ಕಿಳಿದರು. ಆಕಾಶ್ ದೀಪ್ ಅವರಿಗೆ ಮಾಜಿ ಕ್ರಿಕೆಟಿಗನೋರ್ವ ನೀಡಿದ ಸಲಹೆಯಂತೆ ನೆಟ್ ಪ್ರ್ಯಾಕ್ಟೀಸ್ ವೇಳೆ ಮತ್ತು ಅಭ್ಯಾಸ ಪಂದ್ಯಗಳಲ್ಲಿ ಆಕಾಶ್ ದೀಪ್ ಬೌಲಿಂಗ್ ವಿರಾಟ್ ಕೊಹ್ಲಿಗೆ ಹಿಡಿಸಿರಬಹುದು, ಹೀಗಾಗಿಯೇ ಮತ್ತೆ ಆತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರುವಂತಾಯಿತು ಎಂಬ ಮಾತುಗಳು ಇವೆ.

ಕೊಹ್ಲಿ ಮನಗೆಲ್ಲಬೇಕೆಂಬ ಸಲಹೆ ನೀಡಿದ್ದು ಈತ
ಇನ್ನು ಆಕಾಶ್ ದೀಪ್ ಅವರಿಗೆ ವಿರಾಟ್ ಕೊಹ್ಲಿಯ ಮನ ಗೆದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯುವ ಮತ್ತು ಟೀಮ್ ಇಂಡಿಯಾ ಪ್ರತಿನಿಧಿಸುವ ಅವಕಾಶ ಲಭಿಸಲಿದೆ ಎಂಬ ಸಲಹೆಯನ್ನು ನೀಡಿದ್ದು ಆಕಾಶ್ ದೀಪ್ ಜತೆ ಪಶ್ಚಿಮ ಬಂಗಾಳ ಪರ ಕಣಕ್ಕಿಳಿಯುತ್ತಿದ್ದ ಆಟಗಾರ ಮನೋಜ್ ತಿವಾರಿ. ಈ ವಿಷಯವನ್ನು ಖುದ್ದಾಗಿ ಆಕಾಶ್ ದೀಪ್ ಅವರೇ ಇತ್ತೀಚಿಗಷ್ಟೆ ನಡೆದ ಇಂಡಿಯನ್ ಎಕ್ಸ್‌ಪ್ರೆಸ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಭಾರತದ ನಾಯಕ, ನೀನು ಅವರ ಮನಗೆಲ್ಲುವ ರೀತಿ ಬೌಲಿಂಗ್ ಮಾಡಿದರೆ ಅವಕಾಶಗಳು ಲಭಿಸಲಿವೆ ಎಂದು 2 ವರ್ಷಗಳ ಹಿಂದೆ ಮನೋಜ್ ತಿವಾರಿ ಸಲಹೆ ನೀಡಿದ್ದರಂತೆ.

ಆಕಾಶ್ ದೀಪ್ ಐಪಿಎಲ್ ಪ್ರದರ್ಶನ
ಈ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 5 ಪಂದ್ಯಗಳಲ್ಲಿ ಕಣಕ್ಕಿಳಿದ ಆಕಾಶ್ ದೀಪ್ ಒಟ್ಟು 18.5 ಓವರ್ ಬೌಲಿಂಗ್ ಮಾಡಿ 5 ವಿಕೆಟ್ ಪಡೆದಿದ್ದಾರೆ. ಆದರೆ, ಆಕಾಶ್ ದೀಪ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಆಯ್ಕೆಗಾರರ ಮನ ಗೆಲ್ಲುವಲ್ಲಿ ವಿಫಲರಾಗಿದ್ದು, 10.88ರ ಎಕಾನಮಿಯಲ್ಲಿ ರನ್ ನೀಡಿ ದುಬಾರಿಯಾಗಿದ್ದಾರೆ.

ಕೆಕೆಆರ್ ವಿರುದ್ಧ ಮಿಂಚಿದ್ದ ಆಕಾಶ್ ದೀಪ್
ಈ ಬಾರಿಯ ಐಪಿಎಲ್ ಟೂರ್ನಿಯ 6ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಕಾಶ್ ದೀಪ್ 3 ವಿಕೆಟ್ ಪಡೆದಿದ್ದರು ಹಾಗೂ 45 ರನ್ ನೀಡಿ ದುಬಾರಿಯೂ ಆಗಿದ್ದರು. ಇದು ಆಕಾಶ್ ದೀಪ್ ಪಾಲಿಗೆ ಅತ್ಯುತ್ತಮ ಪ್ರದರ್ಶನವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications