Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಅತ್ಯುತ್ತಮ ಮುಂದಾಳತ್ವ ಮತದಾನ: ಕೊಹ್ಲಿ ಸೋಲಿಸಿದ ಇಮ್ರಾನ್!

Imran Khan won the ICC Poll for pacesetters, beat Virat Kohli

ನವದೆಹಲಿ: ತಂಡದ ಮುಂದಾಳತ್ವ, ನಾಯಕನಾಗಿ ಅತ್ಯುತ್ತಮ ಪ್ರದರ್ಶನವನ್ನವಲಂಭಿಸಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಒಂದು ಮತದಾನ ನಡೆಸಿತ್ತು. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನದ ಮಾಜಿ ನಾಯಕ, ಈಗಿನ ಪ್ರಧಾನಿ ಇಮ್ರಾನ್ ಖಾನ್, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್, ಆಸ್ಟ್ರೇಲಿಯಾದ ನಾಯಕಿ ಮೆಗ್‌ ಲ್ಯಾನಿಂಗ್ ಅವರನ್ನು ಸ್ಪರ್ಧಿಗಳಾಗಿ ಹೆಸರಿಸಿತ್ತು.

ಐಸಿಸಿ ನಡೆಸಿದ ತಂಡದ ಅತ್ಯುತ್ತಮ ಮುಂದಾಳತ್ವದ ಈ ಮತದಾನದಲ್ಲಿ ಪಾಕಿಸ್ತಾನದ ದಂತಕತೆ ಇಮ್ರಾನ್ ಖಾನ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಇಮ್ರಾನ್ ಖಾನ್ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು. ಆದರೆ ಕೂದಲೆಳೆ ಅಂತರದಲ್ಲಿ ಖಾನ್ ವಿಜೇತರಾಗಿದ್ದಾರೆ.

ಮತದಾನದಲ್ಲಿ ಇಮ್ರಾನ್ ಖಾನ್‌ಗೆ 47.3% ಓಟ್ ಲಭಿಸಿದ್ದರೆ, ವಿರಾಟ್‌ಗೆ 46.2% ಓಟ್ ಲಭಿಸಿದೆ. ಇನ್ನು ಎಬಿ ಡಿ ವಿಲಿಯರ್ಸ್‌ಗೆ 6% ಓಟು, ಮೆಗ್‌ ಲ್ಯಾನಿಂಗ್‌ಗೆ 0.5% ಓಟು ಲಭಿಸಿವೆ. ಆರಂಭದಲ್ಲಿ ಕೊಹ್ಲಿಯೇ ಮುಂದಿದ್ದರು. ಆದರೆ ಕೊನೇ ಕ್ಷಣದಲ್ಲಿ ಖಾನ್ 1 ಶೇ. ಹೆಚ್ಚಿಗೆ ಓಟು ಪಡೆದು ಗೆದ್ದಿದ್ದಾರೆ.

ನಾಯಕನಾಗಿ ಕೊಹ್ಲಿ ಏಕದಿನದಲ್ಲಿ 73.88 ಬ್ಯಾಟಿಂಗ್‌ ಸರಾಸರಿ ಹೊಂದಿದ್ದರೆ, ಎಬಿ ಡಿ ವಿಲಿಯರ್ಸ್ ನಾಯಕನಾಗಿ ಏಕದಿನದಲ್ಲಿ 63.94 ಬ್ಯಾಟಿಂಗ್ ಸರಾಸರಿ, ಮೆಗ್ ಲ್ಯಾನಿಂಗ್ ನಾಯಕಿಯಾಗಿ ಏಕದಿನದಲ್ಲಿ 60.93 ಬ್ಯಾಟಿಂಗ್‌ ಸರಾಸರಿ ಹೊಂದಿದ್ದಾರೆ. ಇನ್ನು ವಿಜೇಯ ಇಮ್ರಾನ್ ಖಾನ್ ಟೆಸ್ಟ್‌ ನಲ್ಲಿ ನಾಯಕನಾಗಿ ಬ್ಯಾಟಿಂಗ್‌ನಲ್ಲಿ 52.34 ಸರಾಸರಿ, ಬೌಲಿಂಗ್‌ನಲ್ಲಿ 20.26 ಸರಾಸರಿ ಹೊಂದಿದ್ದಾರೆ.

Story first published: Wednesday, January 13, 2021, 12:40 [IST]
Other articles published on Jan 13, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+