ವೈರಲ್ ವಿಡಿಯೋ: ನೋ ಬಾಲ್‌ಗೆ ವಿಕೆಟ್ ಪಡೆದು ಸಂಭ್ರಮಾಚರಿಸಿದ ತಾಹೀರ್!

ಕ್ಯಾನ್ಬೆರಾ, ನವೆಂಬರ್ 3: ಅಕ್ಟೋಬರ್ 31ರಂದು ಪರ್ತ್ ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾದ ಪ್ರೈಮ್‌ಮಿನಿಸ್ಟರ್ XI ತಂಡ ಪ್ರವಾಸಿ ಸೌತ್ ಆಫ್ರಿಕಾ ತಂಡವನ್ನು 4 ವಿಕೆಟ್‌ನಿಂದ ಸೋಲಿಸಿತು. ಆದರೆ ಪಂದ್ಯದ ಫಲಿತಾಂಶಕ್ಕಿಂತ ಮತ್ತೊಂದು ಗಮ್ಮತ್ತಿನ ಸಂಗತಿ ಪಂದ್ಯದ ವೇಳೆ ನಡೆದಿದೆ.
ದಕ್ಷಿಣ ಆಫ್ರಿಕಾ ಆಟಗಾರ ಇಮ್ರಾನ್ ತಾಹೀರ್, ಕ್ಯಾಚ್ ಪಡೆದು ಭರ್ಜರಿ ಸಂಭ್ರಮಾಚರಿಸಿದ್ದಾರೆ. ಆದರೆ ಸಿಕ್ಕ ಆ ಕ್ಯಾಚ್ ನೋಬಾಲ್‌ನಿಂದ ಚಿಮ್ಮಿದ್ದು ಎಂದು ತಡವಾಗಿ ಗೊತ್ತಾದಾಗ ಅಷ್ಟೇ ಮುಜುಗರಕ್ಕೀಡಾಗಿದ್ದಾರೆ. ತಾಹೀರ್ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ಗಮ್ಮತ್ತಾಗಿ ಹರಿದಾಡುತ್ತಿದೆ.
ಆಗಿದ್ದಿಷ್ಟೆ; ಪಂದ್ಯದ ಆರನೇ ಓವರ್ ನಲ್ಲಿ ಸೌತ್ ಆಫ್ರಿಕಾ ಬೌಲರ್ ಕಾಗಿಸೊ ರಬಾಡಾ ಎಸೆತ ಚೆಂಡಿಗೆ ಜೋಶ್ ಫಿಲಿಪ್ 'ಪುಲ್ ಶಾಟ್' ಬೀಸಿದರು. ಅದು ಸೀದಾ ತಾಹೀರ್ ನಿಂತಿದ್ದಲ್ಲಿಗೆ ಚಿಮ್ಮಿತು. ಆ ಎಸೆತ ನೋಬಾಲ್ ಎಂಬುದನ್ನು ಗಮನಿಸಿರದ ತಾಹೀರ್, ಕ್ಯಾಚ್ ಮಾಡಿದವರೇ ಸಕ್ಕತ್ತಾಗಿ ಸಂಭ್ರಮಿಸಿದರು; ಪೆವಿಲಿಯನ್‌ನಲ್ಲಿ ಕೂತಿದ್ದ ಪ್ರೇಕ್ಷಕರ ಸಹಿತ ಕಮೆಂಟೇಟರ್ ಕೂಡ ಹೊಟ್ಟೆಪೂರ್ತಿ ನಕ್ಕರು.
ಅಂದ್ಹಾಗೆ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸೌತ್ ಆಫ್ರಿಕಾ 42 ಓವರ್ ಗೆ ಎಲ್ಲಾ ವಿಕೆಟ್ ಕಳೆದು 173 ರನ್ ಪೇರಿಸಿತ್ತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, 36.3 ಓವರ್ ನಲ್ಲಿ 6 ವಿಕೆಟ್ ಕಳೆದು 174 ರನ್ ಪೇರಿಸಿ ಗೆಲುವನ್ನಾಚರಿಸಿತು. ಪಂದ್ಯದ ಬಳಿಕ ಮಾತನಾಡಿದ ತಾಹೀರ್, 'ಅದು ನೋಬಾಲ್ ಎಂಬುದನ್ನು ನಾನು ಗಮನಿಸಿರಲಿಲ್ಲ' ಎಂದು ಅರೆಬರೆ ನಾಚಿಕೆಯಲ್ಲೇ ನುಡಿದರು!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications