ಅಂತಾರಾಷ್ಟ್ರೀಯ ಏಕದಿನ ಆಟ ನಿಲ್ಲಿಸಲು ದಕ್ಷಿಣ ಆಫ್ರಿಕಾದ ತಾಹಿರ್ ನಿರ್ಧಾರ

ನವದೆಹಲಿ, ಮಾರ್ಚ್ 4: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ದಕ್ಷಿಣ ಆಫ್ರಿಕಾ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ನಿರ್ಧರಿಸಿದ್ದಾರೆ. 2019ರ ಐಸಿಸಿ ವಿಶ್ವಕಪ್ ಕ್ರಿಕೆಟ್ ಬಳಿಕ ಏಕದಿನ ಆಟ ನಿಲ್ಲಿಸುವುದಾಗಿ ಇಮ್ರಾನ್ ಸೋಮವಾರ (ಮಾರ್ಚ್ 4) ಹೇಳಿಕೊಂಡಿದ್ದಾರೆ.
ಪಾಕಿಸ್ತಾನದ ಲಾಹೋರ್‌ನಲ್ಲಿ ಜನಿಸಿದ ತಾಹಿರ್, 2011ರ ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಮಾರ್ಚ್ 27ಕ್ಕೆ 40ರ ಹರೆಯಕ್ಕೆ ಕಾಲಿರಿಸಲಿರುವ ಇಮ್ರಾನ್, ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ ನಲ್ಲಿ ಕಡೆಯ ಏಕದಿನ ಆಟ ಆಡಲಿದ್ದಾರೆ.
ತಾಹಿರ್ ನಿರ್ಧಾರ ಖಾತ್ರಿಪಡಿಸಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್, '2019ರ ಐಸಿಸಿ ವಿಶ್ವಕಪ್ ಕ್ರಿಕೆಟ್, ಇಮ್ರಾನ್ ತಾಹಿರ್ ಅವರ ಅಂತಿಮ ಏಕದಿನ ಪಂದ್ಯಾಟವಾಗಲಿದೆ' ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದೆ. 95 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಪ್ರತಿನಿಧಿಸಿರುವ ಇಮ್ರಾನ್ 156 ವಿಕೆಟ್ ಸಾಧನೆ ಹೊಂದಿದ್ದಾರೆ.
ಏಕದಿನ ಪಂದ್ಯವೊಂದರಲ್ಲಿ 45 ರನ್ನಿಗೆ 7 ವಿಕೆಟ್ ಕೆಡವಿದ ದಾಖಲೆ ಇಮ್ರಾನ್ ಹೆಸರಿನಲ್ಲಿದೆ. ಜೊತೆಗೆ 4.65ರ ಎಕಾನಮಿಯಲ್ಲಿ 24.56 ಸರಾಸರಿ ಹೊಂದಿದ್ದಾರೆ. 20 ಟೆಸ್ಟ್ ಪಂದ್ಯಗಳಲ್ಲಿ 57 ವಿಕೆಟ್, 37 ಅಂತಾರಾಷ್ಟ್ರೀಯ ಟಿ20ಯಲ್ಲಿ 62 ವಿಕೆಟ್‌ಗಳನ್ನು ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications