Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬದಲಾಯ್ತು ಟೆಸ್ಟ್‌ ಕ್ರಿಕೆಟ್‌ ಸಂಪ್ರದಾಯ, ಬಿಳಿ ಜರ್ಸಿಗೂ ಬಂತು ನಂಬರ್‌!

ಕೊನೆಗೂ ಬದಲಾಯಿತು ಟೆಸ್ಟ್ ಕ್ರಿಕೆಟ್ ಸಂಪ್ರದಾಯ..? | Ashes Test | Oneindia Kannada
In a first, Ashes jerseys to have players names, numbers

ಬೆಂಗಳೂರು, ಜುಲೈ 23: ಟೆಸ್ಟ್‌ ಕ್ರಿಕೆಟ್‌ನ ಸಂಪ್ರದಾಯ ಬದಲಾಗುವ ಕಾಲ ಬಂದಾಗಿದೆ. ಸಾಂಪ್ರದಾಯಿಕವಾಗಿ ಪಂದ್ಯವೊಂದರಲ್ಲಿ ಇತ್ತಂಡಗಳು ಸಂಪೂರ್ಣ ಬಿಳಿಯ ಸಮವಸ್ತ್ರ ತೊಟ್ಟು ಆಡುವುದು ತಲೆತಲಾಂತರಗಳಿಂದ ಬಂದಿರುಚುದಾಗಿದೆ. ಇದಕ್ಕೆ ಅಂತ್ಯವಾಡುವ ಕಾಲ ಈಗ ಕೂಡಿಬಂದಿದ್ದು, ಕ್ರಿಕೆಟ್‌ ಜನಕರಾದ ಇಂಗ್ಲೆಂಡ್‌ ಈ ಸಂಪ್ರದಾಯ ಮುರಿಯಲು ಮುಂದಾಗಿದೆ.

ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ನಡುವೆ ಆರಂಭವಾಗಲಿರುವ ಆಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಎರಡೂ ತಂಡಗಳು ಬಿಳಯ ಸಮವಸ್ತ್ರದ ಮೇಲೆ ಆಟಗಾರರ ಸಂಖ್ಯೆ ಮತ್ತು ಹೆಸರಿರುವ ಬಿಳಿಯ ಜರ್ಸಿ ತೊಟ್ಟು ಕಣಕ್ಕಿಳಿಯಲಿವೆ.

ಅಂದಹಾಗೆ ಏಕದಿನ ಮತ್ತು ಟಿ20-ಐ ಮಾದರಿಯ ಕ್ರಿಕೆಟ್‌ನಲ್ಲಿ ಈಗಾಗಲೇ ಈ ಪದ್ದತಿ ಚಾಲ್ತಿಯಲ್ಲಿದ್ದು, ಟೆಸ್ಟ್‌ ಕ್ರಿಕೆಟ್‌ಗೆ ಇದೇ ಮೊದಲ ಬಾರಿ ನಂಬರ್‌ ಮತ್ತು ನೇಮ್‌ ಪರಿಚಯಿಸಲಾಗುತ್ತಿದೆ. ಟೆಸ್ಟ್‌ ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಇಂಥದ್ದೊಂದು ಆಕರ್ಷಕ ಪ್ರಯೋಗಕ್ಕೆ ಮುಂದಾಗಿದೆ.

ಟೆಸ್ಟ್‌ ಜರ್ಸಿಯಲ್ಲಿ ನಂಬರ್‌ ಮತ್ತು ಹೆಸರಿನ ಬಳಕೆಯಾಗುತ್ತಿರುವುದನ್ನು ಖುದ್ದಾಗಿ ಇಂಗ್ಲೆಂಡ್‌ ತಂಡವೇ ಖಾತ್ರಿ ಪಡಿಸಿದ್ದು, ತನ್ನ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಇಂಗ್ಲೆಂಡ್‌ ಆಟಗಾರರು ನೂತನ ಜರ್ಸಿ ತೊಟ್ಟು ನೀಡಿರುವ ಪೋಸ್‌ಗಳ ಫೋಟೊಗಳನ್ನು ಬಿತ್ತರಿಸಿದೆ. ಇದೇ ವರ್ಷ ಆರಂಭದಲ್ಲಿ ಆಷಸ್‌ ಟೆಸ್ಟ್‌ ಸರಣಿಗೆ ಇಂಥದ್ದೊಂದು ವಿಶೇಷತೆ ಬರಲಿದೆ ಎಂದು ವರದಿಯಾಗಿತ್ತು. ಟೆಸ್ಟ್‌ ಕ್ರಿಕೆಟ್‌ಗೆ ಆಧುನಿಕತೆಯ ಟಚ್‌ ನೀಡುವುದು ಇದರ ಹಿಂದಿರುವ ಉದ್ದೇಶ ಎಂದು ಹೇಳಲಾಗಿತ್ತು.

ಇಂಗ್ಲೆಂಡ್‌ ತಂಡ ಐರ್ಲೆಂಡ್‌ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯವನ್ನಾಡಲಿದ್ದು, ಕ್ರಿಕೆಟ್‌ನ ತವರೂರು ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ಪಂದ್ಯ ಆರಂಭವಾಗಲಿದೆ. ಆಸ್ಟ್ರೇಲಿಯಾ ವಿರುದ್ಧದ ಆಷಸ್‌ ಟೆಸ್ಟ್‌ ಸರಣಿ ಆಗಸ್ಟ್‌ 1ರಂದು ಆರಂಭವಾಗಲಿದೆ.

Story first published: Tuesday, July 23, 2019, 20:55 [IST]
Other articles published on Jul 23, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+