ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಒಂದು ನೋ ಬಾಲ್ ಎಸೆಯದ ಐವರು ಬೌಲರ್‌ಗಳು!

ಕ್ರಿಕೆಟ್ ಅನಿಶ್ಚಿತತೆಗಳಿಂದ ಕೂಡಿದ ಆಟವಾಗಿದೆ. ಒಂದೇ ಒಂದು ಎಸೆತ ಇಡೀ ಪಂದ್ಯದ ಗತಿಯಲ್ಲೇ ಬದಲಿಸುವಷ್ಟು ಶಕ್ತಿಯನ್ನು ಹೊಂದಿದೆ. ಹೀಗಾಗಿ ಪ್ರತೀ ಎಸೆತವೂ ಇಲ್ಲಿ ಬಹಳಷ್ಟು ಮುಖ್ಯವೆನಿಸುತ್ತದೆ. ಬೌಲರ್ ಓಡಿ ಬಂದು ಎಸೆಯುವಾಗ ಒಂದು ಇಂಚಿನಷ್ಟು ಕಾಲು ಕ್ರೀಸ್‌ಗಿಂತ ಮುಂದಿಟ್ಟರೂ ಅದು ತಂಡಕ್ಕೆ ದುಬಾರಿ ಎನಿಸುತ್ತದೆ.
ಕ್ರೀಸ್‌ಗಿಂತ ಮುಂದೆ ಕಾಲಿಟ್ಟು ಮಾಡಿದ ಎಸೆತ ನೋಬಾಲ್ ಆಗಿ ಎದುರಾಳಿಗೆ ಕೇವಲ ಒಂದು ರನ್ ಮಾತ್ರವೇ ನೀಡಿ ದುಬಾರಿ ಎನಿಸುವುದಿಲ್ಲ. ಇತ್ತೀಚಿನ ನಿಯಮದ ಪ್ರಕಾರ ನೋಬಾಲ್‌ನ ನಂತರದ ಎಸೆತ ಫ್ರೀ ಹಿಟ್ ಎನಿಸಲಿದ್ದು ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲು ಕಾರಣವಾಗಬಹುದು.
ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೆಲ ಬೌಲರ್‌ಗಳು ತಮ್ಮ ಕ್ರಿಕೆಟ್ ವೃತ್ತಿ ಬದುಕಿನುದ್ದಕ್ಕೂ ಒಂದೇ ಒಂದು ನೋ ಬಾಲ್ ಎಸೆದಿಲ್ಲ. ಅಂತಾ ಐವರು ವಿಶೇಷ ಆಟಗಾರರ ಬಗ್ಗೆ ಈ ವರದಿಯಲ್ಲಿ ನೋಡೋಣ.

ವಿಂಡೀಸ್ ದಿಗ್ಗಜ ಲ್ಯಾನ್ಸ್ ಗಿಬ್ಸ್
ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಲ್ಯಾನ್ಸ್ ಗಿಬ್ಸ್ 79 ಟೆಸ್ಟ್ ಪಂದ್ಯ ಮತ್ತು 3 ಏಕದಿನ ಪಂದ್ಯವನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 300 ವಿಕೆಟ್ ಪಡೆದ ಮೊದಲ ಸ್ಪಿನ್ ಬೌಲರ್ ಎಂಬ ಹೆಗ್ಗಳಿಯನ್ನು ಲ್ಯಾನ್ಸ್ ಗಿಬ್ಸ್ ಪಡೆದುಕೊಂಡಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಇವರು ನೋ ಬಾಲ್ ಎಸೆದ ಉದಾಹರಣೆಯೇ ಇಲ್ಲ. ಈ ಪಟ್ಟಿಯಲ್ಲಿರುವ ಏಕೈಕ್ ಸ್ಪಿನ್ನರ್ ಇವರಾಗಿದ್ದಾರೆ.

ಇಂಗ್ಲೆಂಡ್ ಆಲ್‌ರೌಂಡರ್ ಇಯಾನ್ ಬೋಥಮ್
ಇಂಗ್ಲೆಂಡ್ ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಇಯಾನ್ ಬೋಥಮ್ ಕ್ರಿಕೆಟನ್ನು ಅಬ್ಬರದಿಂದ ಆಡಿ ವಿಶ್ವಾದ್ಯಂತ ಅಭಿಮಾನಿಗಳನ್ನು ರಂಜಿಸಿದ್ದಾರೆ. 16 ವರ್ಷಗಳ ತಮ್ಮ ವೃತ್ತಿ ಬದುಕಿನಲ್ಲಿ ಬೋಥಮ್ 102 ಟೆಸ್ಟ್ ಹಾಗೂ 116 ಏಕದಿನ ಪಂದ್ಯವನ್ನು ಆಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರು ಒಂದೇ ಒಂದು ನೋ ಬಾಲ್ ಎಸೆದಿಲ್ಲ.

ಪಾಕ್ ಮಾಜಿ ನಾಯಕ ಇಮ್ರಾನ್ ಖಾನ್
ಪಾಕಿಸ್ತಾನದ ಹಾಲಿ ಪ್ರಧಾನಿ ಮಾಜಿ ವೇಗದ ಬೌಲರ್ ಇಮ್ರಾನ್ ಖಾನ್ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರು. 88 ಟೆಸ್ಟ್ ಕ್ರಿಕೆಟ್ ಮತ್ತು 175 ಏಕದಿನ ಪಂದ್ಯಗಳಲ್ಲಿ ಆಡಿರುವ ಇಮ್ರಾನ್ ಖಾನ್ ಪಾಕಿಸ್ತಾನ ಗೆದ್ದ 1992ರ ವಿಶ್ವಕಪ್ ತಂಡದ ನಾಯಕನಾಗಿದ್ದರು. ತಮ್ಮ ಕ್ರಿಕೆಟ್ ಬದುಕಿನಲ್ಲಿ ಇಮ್ರಾನ್ ಖಾನ್ ಒಮ್ಮೆಯೂ ನೋ ಬಾಲ್ ನಿದರ್ಶನವಿಲ್ಲ.

ಆಸಿಸ್ ವೇಗಿ ಡೆನ್ನಿಸ್ ಲಿಲ್ಲಿ
ಆಸ್ಟ್ರೇಲಿಯಾದ ವೇಗದ ಬೌಲರ್ ಡೆನ್ನಿಸ್ ಲಿಲ್ಲಿ ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರು ಎನಿಸಿದ್ದಾರೆ. ವಿಶ್ವ ಕ್ರಿಕೆಟ್ ಕಂಡ ಶಿಸ್ತಿಬದ್ದ ಬೌಲರ್ ಎಂದು ಡೆನ್ನಿಸ್ ಲಿಲ್ಲಿ ಖ್ಯಾತರಾಗಿದ್ದಾರೆ. ಅದಕ್ಕೆ ಸಾಕ್ಷಿ ಅವರು ಒಂದು ಬಾರಿಯೂ ನೋ ಬಾಲ್ ಎಸೆಯದಿರುವ ದಾಖಲೆ. ಆಸ್ಟ್ರೇಲಿಯಾ ಪರವಾಗಿ ಡೆನ್ನಿಸ್ ಲಿಲ್ಲಿ 70 ಟೆಸ್ಟ್ ಮತ್ತು 63 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಭಾರತದ ಶ್ರೇಷ್ಠ ಆಲ್‌ರೌಂಡರ್ ಕಪಿಲ್ ದೇವ್
ಭಾರತದ ಮೊದಲ ವಿಶ್ವಕಪ್ ಗೆಲುವಿನ ನಾಯಕ ಕಪಿಲ್ ದೇವ್ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಆಲ್‌ರೌಂಡರ್. 131 ಟೆಸ್ಟ್ ಮತ್ತು 225 ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡವನ್ನು ಕಪಿಲ್ ದೇವ್ ಪ್ರತಿನಿಧಿಸಿದ್ದಾರೆ. ಸುದೀರ್ಘ ಕಾಲ ಕ್ರಿಕೆಟ್ ಆಡಿದ್ದರೂ ಕಪಿಲ್ ದೇವ್ ಒಂದು ಬಾರಿಯೂ ನೋಬಾಲ್ ಎಸೆಯದೆ ತಾನು ಎಷ್ಟು ಶಿಸ್ತುಬದ್ದ ಬೌಲರ್ ಎಂದು ಸಾಬೀತು ಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications