ಧೋನಿಯಿಂದ ಜಾಲಿ ರೈಡ್, ಒಂದೇ ವಾಹನದಲ್ಲಿ ತಂಡದ ಸವಾರಿ!
ಬೆಂಗಳೂರು, ಸೆಪ್ಟೆಂಬರ್ 04: ಟೀಂ ಇಂಡಿಯಾ ಎರಡನೇ ಬಾರಿಗೆ ನಿಗದಿತ ಓವರ್ ಗಳ ಪಂದ್ಯಗಳ ಸರಣಿಯಲ್ಲಿ ವೈಟ್ ವಾಶ್ ಸಾಧಿಸಿದೆ. ಶ್ರೀಲಂಕಾ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 6 ವಿಕೆಟ್ ಗಳಿಂದ ಗೆದ್ದುಕೊಂಡ ಭಾರತ ತಂಡ, ವಿಜಯೋತ್ಸವ ಆಚರಿಸಿದೆ.
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ಚೇಸಿಂಗ್ ನಲ್ಲಿ ಮಿಂಚಿ, ಅಜೇಯ 110ರನ್ ಗಳಿಸಿ 239ರನ್ ಗಳಿಸಲು ನೆರವಾದರು.
ಕೊಹ್ಲಿ ಅವರು ತಮ್ಮ ವೈಯಕ್ತಿಕ 30ನೇ ಶತಕ ಬಾರಿಸಿ, ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ ಅವರ ದಾಖಲೆಯ ಸಮಕ್ಕೆ ನಿಂತಿದ್ದಾರೆ. ಈಗ ಶತಕ ಗಳಿಕೆಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಮಾತ್ರ ಕೊಹ್ಲಿಗಿಂತ ಮುಂದಿದ್ದಾರೆ.
ಏಕದಿನ ಸರಣಿ ಗೆದ್ದಿರುವ ಟೀಂ ಇಂಡಿಯಾ ಹಾಗೂ ಶ್ರೀಲಂಕಾ ತಂಡಗಳು ಸೆಪ್ಟೆಂಬರ್ 06ರಂದು ಏಕೈಕ ಟಿ20 ಆಡಲಿವೆ.
ಐದು ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿಯನ್ನು ಗೆದ್ದ ಭಾರತ ತಂಡವು ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸಿತು.
ಮಾಜಿ ನಾಯಕ ಎಂ.ಎಸ್.ಧೋನಿ ಅವರು ವಾಹನ ಚಲಾಯಿಸಿದರೆ, ಟೀಂ ಇಂಡಿಯಾದ ಇತರೆ ಸದಸ್ಯರು ಜತೆಗೂಡಿದರು. ಅಂದ ಹಾಗೆ, ಸರಣಿ ಶ್ರೇಷ್ಠ ಎನಿಸಿಕೊಂಡ ವೇಗಿ ಜಸ್‌ಪ್ರೀತ್ ಬೂಮ್ರಾಗೆ ಉಡುಗೊರೆ ರೂಪದಲ್ಲಿ ಈ ವಾಹನ ಸಿಕ್ಕಿದ್ದು ಎಂಬುದನ್ನು ಮರೆಯುವಂತಿಲ್ಲ.

ಶ್ರೀಲಂಕಾ ವಿರುದ್ಧ ಜಯ ಸಾಧಿಸಿದ ಭಾರತ
ಶ್ರೀಲಂಕಾ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯನ್ನು ವೈಟ್ ವಾಶ್ ಮಾಡಿದ ಭಾರತ. ಸರಣಿ ಶ್ರೇಷ್ಠ ಎನಿಸಿದ ಭಾರತದ ವೇಗಿ ಜಸ್ ಪ್ರೀತ್ ಬೂಮ್ರಾಗೆ ಉಡುಗೊರೆ ರೂಪದಲ್ಲಿ ಸಿಕ್ಕ ವಾಹನ

ವಾಹನ ಚಲಾಯಿಸಿದ ಧೋನಿ
ಸರಣಿ ಶ್ರೇಷ್ಠ ಎನಿಸಿದ ಭಾರತದ ವೇಗಿ ಜಸ್ ಪ್ರೀತ್ ಬೂಮ್ರಾಗೆ ಉಡುಗೊರೆ ರೂಪದಲ್ಲಿ ಸಿಕ್ಕ ವಾಹನದ ಡ್ರೈವರ್ ಸೀಟು ಹತ್ತಿದ ಧೋನಿ ಅವರು ಮೈದಾನದ ತುಂಬಾ ವಾಹನ ಓಡಿಸಿದರು.

ಒಂದೇ ವಾಹನದಲ್ಲಿ ಭಾರತ ತಂಡ
ರೋಹಿತ್ ಶರ್ಮ, ಜಸ್ ಪ್ರೀತ್ ಬೂಮ್ರಾ ಹಾಗೂ ಭುವನೇಶ್ವರ್ ಕುಮಾರ್ ಅವರು ವಾಹನದ ಹಿಂಬದಿಯಲ್ಲಿ ಕುಳಿತು ಸವಾರಿ ಮಾಡಿದರು.

ವಾಹನ ಟಾಪ್ ಮೇಲೇರಿದ ಆಟಗಾರರು
ಐದು ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿಯನ್ನು ಗೆದ್ದ ಭಾರತ ತಂಡವು ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸಿತು. ಈ ಸಂದರ್ಭದಲ್ಲಿ ಆಟಗಾರರು ವಾಹನದ ಮೇಲೇರಿ ಕುಳಿತಿರುವುದು.
ಭಾರತದ ವಿಜಯೋತ್ಸವ
ಶ್ರೀಲಂಕಾದ ವಿರುದ್ಧ ಏಕದಿನ ಸರಣಿ ಗೆದ್ದ ಭಾರತದ ವಿಜಯೋತ್ಸವದ ವಿಡಿಯೋ ಹಂಚಿಕೊಂಡ ವಿರಾಟ್ ಕೊಹ್ಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications