ರೋಹಿತ್ ಹಾಗೂ ಜಡೇಜ ಬೊಂಬಾಟ
ರೋಹಿತ್ ಶರ್ಮ 63 ಎಸೆತಗಳಲ್ಲಿ 51 ಹಾಗೂ ರವೀಂದ್ರ ಜಡೇಜ 17 ರನ್ ಗಳಿಸಿ ಕೊನೆ ಕ್ಷಣದಲ್ಲಿ ರನ್ ಗತಿ ಹೆಚ್ಚಿಸಲು ನೆರವಾದರು.
ಕೊಹ್ಲಿ ಅವರು ತಮ್ಮ ವೃತ್ತಿ ಬದುಕಿನ ಗರಿಷ್ಠ ಮೊತ್ತ
ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾನುವಾರದಂದು ಕೊಹ್ಲಿ ಅವರು ತಮ್ಮ ವೃತ್ತಿ ಬದುಕಿನ ಗರಿಷ್ಠ ಮೊತ್ತ ದಾಖಲಿಸಿದರು. ಹೋಳ್ಕರ್ ಮೈದಾನದಲ್ಲಿ ಕೊಹ್ಲಿ ಅವರು ವೃತ್ತಿ ಬದುಕಿನ ಎರಡನೇ ದ್ವಿಶತಕ ಗಳಿಸಿದ್ದು, ಇದು ಭಾರತ ತಂಡದ ನಾಯಕನೊಬ್ಬನ ಮಹತ್ಸಾಧನೆಯಾಗಿದೆ.
112 ಓವರ್, 471 ನಿಮಿಷ ಬ್ಯಾಟಿಂಗ್
ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ನಾಲ್ಕನೇ ವಿಕೆಟ್ಗೆ 112 ಓವರ್ಗಳ ಕಾಲ ಬ್ಯಾಟಿಂಗ್ ಮಾಡಿದರು. ಈ ಜೋಡಿ ಪೇರಿಸಿದ 365 ರನ್ 4ನೇ ವಿಕೆಟ್ಗೆ ಈವರೆಗೂ ಭಾರತದ ಗರಿಷ್ಟ ರನ್ ಜತೆಯಾಟ ಸಾಧಿಸಿದರು.
79 ರನ್ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಅಜಿಂಕ್ಯ
ರನ್ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಅಜಿಂಕ್ಯ ರಹಾನೆ (188 ರನ್, 381 ಎಸೆತ, 18 ಬೌಂಡರಿ, 4 ಸಿಕ್ಸರ್) ವೃತ್ತಿಜೀವನದ 8ನೇ ಟೆಸ್ಟ್ ಶತಕ
103ರನ್ಗಳಿಂದ ಬ್ಯಾಟಿಂಗ್ ಆರಂಭ
103ರನ್ಗಳಿಂದ ಬ್ಯಾಟಿಂಗ್ ಮುಂದುವರಿಸಿದ ವಿರಾಟ್ ಕೊಹ್ಲಿ 211 ರನ್(366 ಎಸೆತ, 20X4) ತವರಿನ ನೆಲದಲ್ಲಿ ಮೊದಲ ದ್ವಿಶತಕದ ಸಾಧನೆ ಹಾಗೂ ನಾಯಕನಾಗಿ ಇದೇ ವರ್ಷ 2 ದ್ವಿಶತಕ ಸಿಡಿಸಿದ್ದಾರೆ.
ದಿನದಾಟದ ಅಂತ್ಯದಲ್ಲಿ 9 ಓವರ್ ಬ್ಯಾಟಿಂಗ್
ದಿನದಾಟದ ಅಂತ್ಯದಲ್ಲಿ 9 ಓವರ್ ಬ್ಯಾಟಿಂಗ್ ಮಾಡಿರುವ ಕಿವೀಸ್ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿತು. 17 ರನ್ ಬಾರಿಸಿರುವ ಮಾರ್ಟಿನ್ ಗುಪ್ಟಿಲ್ ಹಾಗೂ 6 ರನ್ ಬಾರಿಸಿರುವ ಟಾಮ್ ಲಾಥಮ್ ಕ್ರೀಸ್ ನಲ್ಲಿದ್ದರು.