ಎರಡನೇ ಬಾರಿ ಸಿಎಲ್ಟಿ20 ಕಪ್ ಗೆದ್ದ ಚೆನ್ನೈ ಸಂಭ್ರಮ
ಬೆಂಗಳೂರು,ಅ.5 : ಸುರೇಶ್ ರೈನಾ ಅವರ ಅದ್ಭುತ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಬಾರಿಗೆ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯ ಚಾಂಪಿಯನ್ ಆಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಎಂಟು ವಿಕೆಟ್ ಗಳ ಜಯ ಸಾಧಿಸಿದ ಧೋನಿ ಪಡೆ ವಿಜಯೋತ್ಸವ ಆಚರಣೆಗೆ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಯಿತು.
ಕೆಕೆಆರ್ ತಂಡ ಒಡ್ದಿದ್ದ 181 ರನ್ಗಳ ಮೊತ್ತವನ್ನು ಬೆನ್ನತ್ತಿದ ಚೆನ್ನೈ ತಂಡ ಆರಂಭಿಕ ಆಘಾತ ಅನುಭವಿಸಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬಂದ ಸುರೇಶ್ ರೈನಾ ಅವರು 62 ಎಸೆತಗಳಲ್ಲಿಆಕರ್ಷಕ ಅಜೇಯ 109 ರನ್ ಚೆಚ್ಚಿ ಗೆಲುವಿನ ರುವಾರಿ ಎನಿಸಿದರು. ಬೌಲಿಂಗ್ ನಲ್ಲಿ ಪವನ್ ನೇಗಿ ಐದು ವಿಕೆಟ್ ಪಡೆಯುವ ಮೂಲಕ ಚೆನ್ನೈ ಗೆಲುವಿಗೆ ಕಾರಣರಾದರು.
ಅಂತಿಮವಾಗಿ ಚೆನ್ನೈ ಇನ್ನೂ 9 ಎಸೆತ, ಎಂಟು ವಿಕೆಟ್ ಇರುವಂತೆ ಜಯ ಸಾಧಿಸಿ ಎರಡನೇ ಸಲ ಚಾಂಪಿಯನ್ಸ್ ಲೀಗ್ ಟಿ20 ಟ್ರೋಫಿಗೆ ಮುತ್ತಿಟ್ಟಿತು. 2011ರ ವಿಶ್ವಕಪ್ ಫೈನಲ್ ನಲ್ಲಿ ಸಿಕ್ಸ್ ಎತ್ತಿ ಕಪ್ ಗೆದ್ದಿದ್ದ ಧೋನಿ ಅವರು ಈ ಪಂದ್ಯದಲ್ಲೂ ಯೂಸುಫ್ ಪಠಾಣ್ ಅವರ ಎಸೆತದಲ್ಲಿ ಸಿಕ್ಸ್ ಬಾರಿಸಿ ಚೆನ್ನೈ ತಂಡದ ಗೆಲುವಿನ ರನ್ ಹೊಡೆದಿದ್ದು ವಿಶೇಷ.
ಇದಕ್ಕೂ ಮುನ್ನ ಟಾಸ್ ಸೋತರೂ ಬ್ಯಾಟಿಂಗ್ ಪಡೆದುಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಆರಂಭ ಪಡೆದುಕೊಂಡಿತು.ನಾಯಕ ಗೌತಮ್ ಗಂಭೀರ್ ಮತ್ತು ರಾಬಿನ್ ಉತ್ತಪ್ಪ ಉತ್ತಮ ಮೊದಲ ವಿಕೆಟ್ಗೆ 91 ರನ್ ಕಲೆಹಾಕಿ ಬೃಹತ್ ಮೊತ್ತ ಪೇರಿಸುವ ಕುರುಹು ತೋರಿದರು. ಅಂತಿಮವಾಗಿ ಕೆಕೆಆರ್ 6 ವಿಕೆಟಿಗೆ 180 ರನ್ ಪೇರಿಸಿ ಸವಾಲೊಡ್ಡಿದರೆ, ಚೆನ್ನೈ 18.3 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 185 ರನ್ ಪೇರಿಸಿ ಜಯಭೇರಿ ಮೊಳಗಿಸಿತು.

ಒಳಗೊಂಡಿತ್ತು.
ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡಗಳು ಸಿಎಲ್ಟಿ20 ಟ್ರೋಫಿ ಜೊತೆ ಗ್ರೂಪ್ ಫೋಟೋ

ರೈನಾ ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ
ಫೈನಲ್ ಪಂದ್ಯದಲ್ಲಿ 8 ಸಿಕ್ಸರ್ ಹಾಗೂ 6 ಬೌಂಡರಿ ಇದ್ದ 109 ರನ್ ಬಾರಿಸಿದ ಸುರೇಶ್ ರೈನಾ ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ. PTI Photo by Shailendra Bhojak

ಸರಣಿ ಶ್ರೇಷ್ಠ ಹಾಗೂ ಪಂದ್ಯಶ್ರೇಷ್ಠರ ಜೊತೆ
ಸಿಎಲ್ಟಿ 20 ಟ್ರೋಫಿ ಹಿಡಿದುಕೊಂಡಿರುವ ಸರಣಿ ಶ್ರೇಷ್ಠ ಸುರೇಶ್ ರೈನಾ ಹಾಗೂ ಪಂದ್ಯಶ್ರೇಷ್ಠ ಪವನ್ ನೇಗಿ ಜೊತೆ ಚೆನ್ನೈ ತಂಡದ ಇತರೆ ಆಟಗಾರರು. PTI Photo by Shailendra Bhojak

ಸಿಎಲ್ಟಿ 20 ಟ್ರೋಫಿ ಹಿಡಿದು ನಿಂತ ಧೋನಿ
ಸಿಎಲ್ಟಿ 20 ಟ್ರೋಫಿ ಹಿಡಿದು ನಿಂತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ.

ಚಾಂಪಿಯನ್ ತಂಡ ಸಿಎಸ್ ಕೆ ಫೋಟೋ
ಸಿಎಲ್ಟಿ 20 2014ರ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗ್ರೂಪ್ ಫೋಟೋ

ಸಿಎಲ್ಟಿ20 ಕಪ್ ನೊಂದಿಗೆ ಚೆನ್ನೈ ತಂಡ
ಸಿಎಲ್ಟಿ20 ಕಪ್ ನೊಂದಿಗೆ ಚೆನ್ನೈ ತಂಡ ಸಂಭ್ರಮಿಸುತ್ತಿದೆ. PTI Photo by Shailendra Bhojak

ಗೆಲುವಿನ ರನ್ ಹೊಡೆದ ಧೋನಿ
ಸಿಕ್ಸ್ ಎತ್ತುವ ಮೂಲಕ ಗೆಲುವಿನ ರನ್ ಹೊಡೆದ ಎಂಎಸ್ ಧೋನಿ

ಶತಕ ಸಂಭ್ರಮದಲ್ಲಿ ಸುರೇಶ್ ರೈನಾ
ಶತಕ ಸಂಭ್ರಮದಲ್ಲಿ ಚೆನ್ನೈ ತಂಡದ ಸುರೇಶ್ ರೈನಾ

ಅರ್ಧಶತಕ ದಾಖಲಿಸಿದ ಗೌತಮ್ ಗಂಭೀರ್
ಅರ್ಧಶತಕ ದಾಖಲಿಸಿದ ಕೆಕೆಆರ್ ತಂಡದ ಗೌತಮ್ ಗಂಭೀರ್

ಉತ್ತಮ ಆರಂಭ ಒದಗಿಸಿದ ಉತ್ತಪ್ಪ
ಕೆಕೆಆರ್ ಗೆ ಉತ್ತಮ ಆರಂಭ ಒದಗಿಸಿದ ರಾಬಿನ್ ಉತ್ತಪ್ಪ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications