IND vs ASU 1st Test: ಮತ್ತೊಂದು ವಿವಾದಾತ್ಮಕ ತೀರ್ಪಿಗೆ ಔಟ್ ಆದ ಕೆಎಲ್ ರಾಹುಲ್
ಆಸ್ಟ್ರೇಲಿಯಾ ವಿರುದ್ಧದ ಪರ್ತ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ ಕೆಎಲ್ ರಾಹುಲ್ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದಾರೆ. ಉತ್ತಮ ಲಯದಲ್ಲಿ ಕಾಣಿಸಕೊಂಡಿದ್ದ ಕೆಎಲ್ ರಾಹುಲ್ ಅವರಿಂದ ಬಿಗ್ ಇನ್ನಿಂಗ್ಸ್ ನಿರೀಕ್ಷೆಯಿತ್ತು. ಆದರೆ, ಥರ್ಡ್ ಅಂಪೈರ್ ವಿವಾದಾತ್ಮಕ ತೀರ್ಪಿಗೆ ಅವರು ಔಟಾಗಿದ್ದಾರೆ. ಭಾರತದ ಮೊದಲ ಇನ್ನಿಂಗ್ಸ್‌ನ 23ನೇ ಓವರ್‌ನಲ್ಲಿ ಮಿಚೆಲ್ ಸಾರ್ಕ್ ಬೌಲಿಂಗ್‌ನಲ್ಲಿ ಕೆಎಲ್ ರಾಹುಲ್ 26 ರನ್‌ಗಳಿಗೆ ತಮ್ಮ ಆಟವನ್ನು ನಿಲ್ಲಿಸಿದರು.
ಮಿಚೆಲ್ ಸಾರ್ಕ್ ಬೌಲಿಂಗ್‌ನಲ್ಲಿ ಕೆಎಲ್ ರಾಹುಲ್ ಚೆಂಡನ್ನು ಎದುರಿಸಲು ಮುಂದಾದರು. ಈ ವೇಳೆ ರಾಹುಲ್ ಅವರ ಬ್ಯಾಟ್ ಪ್ಯಾಡ್‌ಗೆ ಬಡಿಯಿತು. ಆದರೆ ಚೆಂಡು ಬ್ಯಾಟ್‌ಗೆ ತಗುಲಿದಂತೆ ಕೀಪರ್ ಕೈ ಸೇರಿತು. ಟಿವಿಯಲ್ಲಿ ನೋಡಿದಾಗ ಚೆಂಡು ಬ್ಯಾಟಿಗೆ ತಾಗಿದ ಹಾಗೆ ಕಾಣಲಿಲ್ಲ. ರಾಹುಲ್ ಚೆಂಡನ್ನು ಎದುರಿಸಲು ಮುಂದಾದಾಗ ಬ್ಯಾಟ್ ಪ್ಯಾಡ್‌ಗೆ ಬಡಿತ್ತು. ಹೀಗಾಗಿ ಜೋರಾಗಿ ಶಬ್ದ ಕೇಳಿ ಬಂದಿತ್ತು. ಇದನ್ನು ಗಮನಿಸಿ ಆಸೀಸ್ ಆಟಗಾರರು ಔಟ್ ಎಂದು ಅಂಪೈರ್ ಬಳಿ ಮನವಿ ಮಾಡಿದರು. ಆದರೆ, ಆನ್ ಫೀಲ್ಡ್ ಅಂಪೈರ್‌ಗೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಗೊಂದಲವಾಗಿತ್ತು. ಹೀಗಾಗಿ ಥರ್ಡ್ ಅಂಪೈರ್ ಬಳಿಗೆ ರಾಹುಲ್ ಔಟ್ ನಿರ್ಧಾರ ಹೋಯಿತು.

ಥರ್ಡ್ ಅಂಪೈರ್ ಚೆಂಡು ಬ್ಯಾಟ್ ಪ್ಯಾಡ್‌ಗೆ ತಾಗಿತ್ತೋ ಅಥವಾ ಬಾಲ್‌ಗೆ ತಗುಲಿತೋ ನೋಡಬೇಕಿತ್ತು. ಸ್ನಿಕೋಮೀಟರ್‌ನಲ್ಲಿ ಧ್ವನಿ ಎಲ್ಲಿಂದಲೋ ಬಂದಿರುವುದು ಸ್ಪಷ್ಟವಾಗಿ ಕೇಳಿಸಿತು. ಥರ್ಡ್ ಅಂಪೈರ್ ನೋಡಿದ ರಿಪ್ಲೇನಲ್ಲಿ ಬ್ಯಾಟ್ ಪ್ಯಾಡ್ ಹತ್ತಿರ ಇದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಿರಲ್ಲ. ಕಾರಣ ಮೈದಾನದಲ್ಲಿ ಕಡಿಮೆ ಕ್ಯಾಮೆರಾಗಳಿದ್ದವು. ಹೀಗಾಗಿ ಹೆಚ್ಚಿನ ಆಂಗಲ್‌ಗಳಿಂದ ರಾಹುಲ್ ಔಟಾ ಅಥವಾ ನಾಟೌಟಾ ಎಂದು ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆದರೆ, ದೂರದಿಂದ ನೋಡಿದಾಗ ಚೆಂಡು ಬ್ಯಾಟ್‌ಗೆ ಬಡಿದ ರೀತಿ ಕಾಣಿಸುತ್ತಿತ್ತು. ಹೀಗಾಗಿ ಥರ್ಡ್ ಅಂಪೈರ್ ರಾಹುಲ್ ಅವರನ್ನು ಔಟ್ ಎಂದು ತೀರ್ಪು ನೀಡಿದರು. ಈ ತೀರ್ಪು ಹೊರ ಬರುತ್ತಿದ್ದಂತೆ ರಾಹುಲ್ ಮೊದಲು ಅಚ್ಚರಿಗೊಂಡರು. ಸಾಮಾಜಿಕ ಜಾಲತಾಣಗಳಲ್ಲಿಯೂ ಥರ್ಡ್ ಅಂಪೈರ್ ವಿವಾದಾತ್ಮಕ ತೀರ್ಪಿಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಉತ್ತಮ ಲಯ
ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು ಉತ್ತಮವಾಗಿ ಆಡಿದರು. ಆಸೀಸ್ ವೇಗಿಗಳನ್ನು ಸಮರ್ಥವಾಗಿ ಎದುರಿಸಿದ ರಾಹುಲ್ ಹೆಚ್ಚು ಚೆಂಡಗಳನ್ನು ಹಾಡಿದರು. ಈ ಹಿಂದೆ ಮಾಡಿದ ಯಾವುದೇ ತಪ್ಪುಗಳನ್ನು ಮಾಡದ ರಾಹುಲ್ ಜವಾಬ್ದಾರಿಯುತ ಇನ್ನಿಂಗ್ಸ್ ಆಡುತ್ತಿದರು. ಆದರೆ ಥರ್ಡ್ ಅಂಪೈರ್ ಎಡವಟ್ಟಿನಿಂದ ರಾಹುಲ್ ತಮ್ಮ ಇನ್ನಿಂಗ್ಸ್ ಅನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ರಾಹುಲ್ 74 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ ನೆರವಿನಿಂದ 26 ರನ್ ಗಳಿಸಿದರು. ರಾಹುಲ್ ಈ ಬಾರಿ 74 ಎಸೆತಗಳನ್ನು ಎದುರಿಸಲೂ ಒಂದು ಕಾರಣವಿದೆ.
ಈ ಹಿಂದೆ ರಾಹುಲ್ ಕ್ರೀಸ್ ಮುಂದೆ ನಿಂತು ಆಡುತ್ತಿದ್ದರು. ಆದರೆ ಪರ್ತ್ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಕ್ರೀಸ್ ಒಳಗೆ ನಿಂತು ಆಸೀಸ್ ಬೌಲರ್‌ಗಳನ್ನು ಎದುರಿಸಿದರು. ಹೀಗಾಗಿ ಅವರು ಉತ್ತಮ ಲಯದಲ್ಲಿ ಕಾಣಿಸಿಕೊಂಡರು. ಕ್ರೀಸ್ ಒಳಗೆ ನಿಂತಾಗ ಚೆಂಡು ಹೆಚ್ಚು ಬೌನ್ಸ್ ಆಗಿರುವುದಿಲ್ಲ. ಆಗ ಬ್ಯಾಟರ್ ಚೆಂಡನ್ನು ನೋಡಿ ಸುಲಭವಾಗಿ ಆಡಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications